ಭೂಲೋಕದ ಪಾಪ ತೊಳೆದ ಮಹರ್ಷಿ ಭಗೀರಥರು

| Published : May 15 2024, 01:32 AM IST

ಸಾರಾಂಶ

ರಬಕವಿ-ಬನಹಟ್ಟಿ: ತನ್ನ ಕಠಿಣ ತಪಸ್ಸಿನ ಮೂಲಕ ಶಿವನನ್ನು ಸಂತುಷ್ಟಗೊಳಿಸಿ ದೇವಗಂಗೆಯನ್ನೇ ಭೂಮಿಗೆ ತಂದ ಮಹರ್ಷಿ ಭಗೀರಥ ಮಹರ್ಷಿಗಳು ಎಂದು ಕರವೇ ಗಜಸೇನೆ ತಾಲೂಕಾಧ್ಯಕ್ಷ ಮಹಮ್ಮದ್ ಹುಸೇನ್ ಲೇಂಗ್ರೆ ಹೇಳಿದರು.

ರಬಕವಿ-ಬನಹಟ್ಟಿ: ತನ್ನ ಕಠಿಣ ತಪಸ್ಸಿನ ಮೂಲಕ ಶಿವನನ್ನು ಸಂತುಷ್ಟಗೊಳಿಸಿ ದೇವಗಂಗೆಯನ್ನೇ ಭೂಮಿಗೆ ತಂದ ಮಹರ್ಷಿ ಭಗೀರಥ ಮಹರ್ಷಿಗಳು ಭೂಲೋಕದ ಪಾಪವನ್ನೇ ತೊಳೆದು ಪಾವನಗೊಳಿಸಿದ ತಪಸ್ವಿ ಎಂದು ಕರವೇ ಗಜಸೇನೆ ತಾಲೂಕಾಧ್ಯಕ್ಷ ಮಹಮ್ಮದ್ ಹುಸೇನ್ ಲೇಂಗ್ರೆ ಹೇಳಿದರು. ರಬಕವಿಯ ಹಜಾರೆ ಟೆಕ್ಸಟೈಲ್ಸ್ ಬಳಿಯ ಭಗೀರಥ ಸರ್ಕಲ್‌ನಲ್ಲಿ ಮಂಗಳವಾರ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಿ ಸರಳವಾಗಿ ಜಯಂತಿ ಆಚರಿಸಿ ಮಾತನಾಡಿದ ಅವರು, ಭೂಮಿಗೆ ಗಂಗೆಯನ್ನು ತಂದು ಜಲಕ್ಷಾಮವನ್ನೇ ದೋರಗೊಳಿಸಿದ ತಪಸ್ವಿಯ ಜಯಂತಿ ಆಚರಿಸುವ ಮೂಲಕ ನಾವೆಲ್ಲರೂ ಗಂಗಾತಾಯಿಯ ಮತ್ತು ಭಗೀರಥ ಮುನಿಗಳ ಒಲುಮೆಗೆ ಪಾತ್ರವಾಗಬೇಕೆಂದರು.

ಉಮೇಶ ಪಾತ್ರೋಟ, ಯಮನಪ್ಪ ಹೊಣಕಡಬಿ, ಕರಿಯಪ್ಪ ಹನಗಂಡಿ, ಪರಂ ಭಜಂತ್ರಿ, ಆಶೀಫ್ ಲೆಂಗ್ರೆ, ಸುರೇಶ ಹೊನಕಡಬಿ, ಮಹಾಲಿಂಗ ಪವಾಡಿ ಮುಂತಾದವರು ಉಪಸ್ಥಿತರಿದ್ದರು.