ಚಿಕ್ಕಮಗಳೂರುರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಹಾವೇರಿ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಮೂಲ ಕಾರಣವೇನು, ರೈತರು ಬದುಕುವ ಭರವಸೆ ಕಳೆದುಕೊಂಡು ಆತಂಕ ಸ್ಥಿತಿಯಲ್ಲಿರುವುದನ್ನು ಪ್ರತಿಯೊಬ್ಬರು ಅವಲೋಕಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಹಾವೇರಿ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಮೂಲ ಕಾರಣವೇನು, ರೈತರು ಬದುಕುವ ಭರವಸೆ ಕಳೆದುಕೊಂಡು ಆತಂಕ ಸ್ಥಿತಿಯಲ್ಲಿರುವುದನ್ನು ಪ್ರತಿಯೊಬ್ಬರು ಅವಲೋಕಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಕ್ಯಾ ಹೋಬಳಿ ಘಟಕದ ಉದ್ದೇಬೋರನಹಳ್ಳಿ ಶಾಖೆಯಿಂದ ಸೋಮವಾರ ಆಯೋಜಿಸಿದ್ಧ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ದೇಶದ ವಿಜ್ಞಾನಿಗಳು ರೈತರ ಇಳುವರಿ ಹೆಚ್ಚಳಗೊಳಿಸಲು ಸಾಕಷ್ಟು ಪ್ರಯೋಗ ನಡೆಸಿದರು. ಹೊಸ ಆವಿಷ್ಕಾರ ಗಳಿಂದ ಬೀಜಗಳನ್ನು ಉತ್ಪಾದಿಸಿ ಯಶಸ್ವಿಗೊಂಡರು. ಆದರೆ, ರೈತರನ್ನು ಸ್ವಾವಲಂಬಿ ಮಾಡುವ ಪ್ರಯೋಗಗಳು ವಿಜ್ಞಾನಿಗಳಿಂದ ನಡೆಯಲಿಲ್ಲ. ಈ ಹೊರತಾಗಿ ಸ್ವಾವಲಂಬಿ ರೈತರನ್ನು ಪರಾವಲಂಬಿಗಳಾಗಿ ಮಾಡಲಾಯಿತು ಎಂದರು.ಇಂದು ಪ್ರತಿನಿತ್ಯದ ಆಹಾರ ಸೇವನೆ ಜೊತೆಗೆ ಮಾತ್ರೆ ತೆಗೆದುಕೊಳ್ಳುವಷ್ಟು ಮಾನವ ಪರಾವಲಂಬಿ ಸ್ಥಿತಿಗೆ ತಲುಪಿದ್ದೇವೆ. ನಮ್ಮ ಹಿರಿಯರು ಸಹಜವಾಗಿ ಪ್ರಕೃತಿಯೊಂದಿಗೆ ಜೋಡಿಸಿಕೊಂಡು ಬಂದಿದ್ಧ ಕೃಷಿ, ಜೀವನ ಹಾಗೂ ಆಹಾರ ಪದ್ಧತಿಯಿಂದ ಹೊರ ಬಂದಿದ್ದಾರೆ. ಇಂದು ಪ್ರತಿ ಬೆಳೆಗಳಿಗೂ ಔಷಧಿ ಸಿಂಪಡಿಸಿ, ರಾಸಾ ಯನಿಕ ಗೊಬ್ಬರ ಬಳಸುವಂತಾಗಿದೆ ಎಂದರು.ಬೆಳೆಗೆ ಬೆಲೆಯಿದ್ದಲ್ಲಿ ಸಾಲ ತೀರಿಸಬಹುದು. ಬೆಲೆ ಇಲ್ಲವಾದಲ್ಲಿ ರೈತರು ಸಾಲಕ್ಕೆ ತುತ್ತಾಗಬೇಕಾಗುತ್ತದೆ. ಜೀವನ ಹಾಗೂ ಆಹಾರ ಪದ್ಧತಿಯಲ್ಲೂ ಪರಾವಲಂಬಿಯಾದ ಮನುಷ್ಯ, ಸಹಜ ಆಹಾರ ಪದಾರ್ಥಗಳಿಂ ದ ಹೊರಬಂದು ಪರಿಣಾಮ ಅನುಭವಿಸುತ್ತಿದ್ದು, ಇದಕ್ಕೆ ಹಿಂದಿನಂತೆ ಪ್ರಕೃತಿ ಪದ್ಧತಿಯಲ್ಲೇ ಸಾಗುವುದೇ ದೊಡ್ಡ ಪರಿಹಾರ ಎಂದು ಹೇಳಿದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ದೇಶದ ಶೇ.70 ರೈತಾಪಿ ವರ್ಗ ಹೊಂದಿರುವ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ರೈತನ ಶಕ್ತಿಯೇ ಎತ್ತು, ಹಸುಗಳು. ಇದರಿಂದ ಹೈನುಗಾರಿಕೆಯನ್ನು ಉಪ ಕಸುಬಿ ನಂತೆ ಪ್ರಾರಂಭಿಸಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಟ್ಟು ರೈತರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುತ್ತಿದೆ ಎಂದು ಹೇಳಿದರು.

ರೈತರಲ್ಲಿ ಹಿಂದಿನ ಕೃಷಿ ಪದ್ಧತಿಗಳು ಮಾಯವಾಗುತ್ತಿವೆ. ಸಾವಯವ ಬದಲಾಗಿ, ರಾಸಾಯನಿಕ ಕೃಷಿ ಪದ್ಧತಿ ಜಾರಿಗೊಂಡಿವೆ. ಇದು ಬೆಳೆಗಳ ಇಳುವರಿ ಹೆಚ್ಚಿಸಿದರೂ, ಸಹಜ ಬೆಳೆಗಳಷ್ಟು ಪೌಷ್ಠಿಕಾಂಶ ಇರು ವುದಿಲ್ಲ. ಹೀಗಾಗಿ ಪರಾವಲಂಬಿಗಳಾಗಿ ಕೃಷಿ ಪದ್ದತಿಗೆ ಒಳಗಾಗದೇ, ಸ್ವಾವಲಂಬಿ ಕೃಷಿ ಪದ್ಧತಿಗಳಿಗೆ ಹೆಚ್ಚಿನ ಶಕ್ತಿ ತುಂಬಲು ರೈತರು ಮುಂದಾಗಬೇಕು ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾರಾಯಣಪುರ ಉಪನ್ಯಾಸ ನೀಡಿ, ದೇಶದ ರಾಜಸ್ಥಾನ ಹಾಗೂ ಕರ್ನಾಟಕ ಕೃಷಿ ಪದ್ಧತಿಯಲ್ಲಿ ಅಜಾಗಜಾಂತರ ವ್ಯತ್ಯಾಸವಿದೆ. ರಾಜಸ್ಥಾನದಲ್ಲಿ ಸ್ಥಳೀಯ ಬೀಜ ಗಳು, ದೇಶಿ ಗೋವುಗಳ ನಡುವೆ ಕೃಷಿ ಚಟುವಟಿಕೆ ನಡೆಸಿದರೆ ಅದೇ ಕರ್ನಾಟಕದಲ್ಲಿ ಆಧುನಿಕ ಕೃಷಿ ಪದ್ಧತಿ ಯಲ್ಲಿ ಸಕಲ ಸೌಕರ್ಯವಿದ್ದರೂ ರೈತ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ದಾರಿ ಹಿಡಿಯು ವಂತಾಗಿದೆ ಎಂದು ತಿಳಿಸಿದರು.ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಸಾವಿರಾರು ವರ್ಷಗಳಿಂದ ಚಾಲ್ತಿ ಯಲ್ಲಿದ್ದ ಕೃಷಿ ಚಟುವಟಿಕೆ ನೇಗಿಲು, ಎತ್ತುಗಳು, ಸ್ವಯಂ ಬೀಜ ಹಾಗೂ ಔಷಧಿ ಉತ್ಪನ್ನಗಳಿಂದ ರೈತರು ಸಾಕಷ್ಟು ಸ್ವಾವಲಂಬಿ ಬದುಕಿನಲ್ಲಿ ನೆಮ್ಮದಿ ಕಾಣುತ್ತಿದ್ದರು. ಆದರೆ ಜನಸಂಖ್ಯೆಗೆ ಅನುಸಾರ ಹಸಿರು ಕ್ರಾಂತಿ ಬದಲಾವಣೆ ಯಿಂದ ರಾಸಾಯನಿಕ ಕೃಷಿ ಕಾಲಿಟ್ಟು ಉತ್ಪಾದನೆ ಹೆಚ್ಚಿಸಿಕೊಂಡು ಪರಾಲಂಬಿ ಯಾಗಿದ್ದಾರೆ ಎಂದರು.ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ, ರೈತರ ಮೂಲ ಬೇಡಿಕೆಗಳಿಗೆ ಕೈಕಟ್ಟಿ ಕುಳಿತುಕೊಂಡರೆ ಸರ್ಕಾರಗಳು ಎಂದಿಗೂ ಸಮಸ್ಯೆ ಬಗೆಹರಿಸುವುದಿಲ್ಲ. ಉತ್ತಮ ಬೆಳೆ ಹಾಗೂ ಬೆಲೆಗಳಿಗೆ ನಿಗಧಿಗೊಳಿಸಲು ಹಾಗೂ ಜಮೀನಿನ ನೀರಾವರಿ ಸೌಲಭ್ಯ ಕಲ್ಪಿಸಲು ಸಂಘಟನೆಯೊಂದಿಗೆ ಹೋರಾಟಕ್ಕೆ ಇಳಿಯಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಯಾ ಹೋಬಳೀ ರೈತ ಸಂಘದ ಅಧ್ಯಕ್ಷ ದೇವರಾಜೇಗೌಡ ವಹಿಸಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರೈತಾಪಿ ವರ್ಗ ಬಿಳೇಕಲ್ಲಳ್ಳಿ ಗ್ರಾಮದಿಂದ ವೀರಗಾಸೆ, ಕಲಾತಂಡ ಹಾಗೂ ಎತ್ತಿನಗಾಡಿ ಮೂಲಕ ನೂರಾರು ರೈತ ಬಾಂಧವರು ಮೆರವಣಿಗೆ ಜಾಥಾ ನಡೆಸಿ ರೈತ ದಿನಾಚರಣೆ ಸಂಭ್ರಮಿಸಿದರು.ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಉಪಾಧ್ಯಕ್ಷ ಕುಮಾರಸ್ವಾಮಿ, ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ, ಲಕ್ಕುಮನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ರೈತ ಸಂಘದ ಖಜಾಂಚಿ ಸೋಮಣ್ಣ, ಕಾರ್ಯದರ್ಶಿ ಬಸವಣ್ಣ, ರೈತ ಸಂಘದ ಕಾರ್ಯದರ್ಶಿ ಪ್ರಕಾಶ್, ಸಂಚಾಲಕ ರವಿಕುಮಾರ್, ಸಿಪಿಐ ಮುಖಂಡ ಅಮ್ಜದ್, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್‌, ಮುಖಂಡರಾದ ಕಲ್ಲೇಗೌಡ, ಮುರಳಿ, ಮನುಕುಮಾರ್, ಆನಂದ್ ಉಪಸ್ಥಿತರಿದ್ದರು. 22 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಉದ್ಘಾಟಿಸಿದರು.