ಕನ್ನಡಪ್ರಭ ವಾರ್ತೆ ಹಿರಿಯೂರು

ಅಸಾಧ್ಯವಾದುದನ್ನು ಸಾಧಿಸುವ ಛಲದ ಸಂಕೇತವಾಗಿ ಭಗೀರಥ ಮಹರ್ಷಿಗಳು ಕಾಣುತ್ತಾರೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಗೀರಥ ಮಹರ್ಷಿಗಳು ತ್ಯಾಗ, ದೃಢಸಂಕಲ್ಪ ಮತ್ತು ಪರಿಶ್ರಮದ ಸಂಕೇತವಾಗಿದ್ದಾರೆ. ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಅವರ ದೃಢಪ್ರಯತ್ನ ನಮ್ಮೆಲ್ಲರ ಬದುಕಿಗೂ ಸ್ಫೂರ್ತಿಯಾಗಬೇಕು. ಮಹಾಪುರುಷರ ಸ್ಮರಣೆಯು ಅವರ ಆದರ್ಶಗಳ ಪಾಲನೆಗೆ ದಾರಿಯಾಗಬೇಕು ಎಂದರು.

ನಿವೃತ್ತ ಶಿಕ್ಷಕ ತ್ಯಾಗರಾಜ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪದ್ಮನಾಭ್, ಮುಖಂಡ ವಿ.ಎಲ್.ಗೌಡ ಮಾತನಾಡಿದರು.


ಈ ಸಂದರ್ಭದಲ್ಲಿ ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಮಹಾಲಿಂಗಪ್ಪ, ಭಗೀರಥ ಟ್ರಸ್ಟ್ ಅಧ್ಯಕ್ಷ ಶೇಖರಪ್ಪ, ಶಿವಪ್ರಸಾದ್, ನಾಗರಾಜ್, ಪರಮೇಶ್ವರಪ್ಪ, ಕರಿಯಪ್ಪ, ಈಶ್ವರಪ್ಪ, ರಾಮಚಂದ್ರಯ್ಯ, ಬಿಸಿಎಂ ಇಲಾಖೆ ಅಧಿಕಾರಿ ಶಿವಕುಮಾರ್, ಚಂದ್ರಶೇಖರ್, ರಾಜಪ್ಪ, ತಿಪ್ಪೇಸ್ವಾಮಿ, ಕೆಂಚಪ್ಪ ಮುಂತಾದವರು ಹಾಜರಿದ್ದರು.