ಗಾಂಧಿಯ ಅಚಲ ಬದ್ಧತೆಗೆ ಅಡಿಪಾಯ ಹಾಕಿದ ಹೋರಾಟ: ಮರಿರಾಮಣ್ಣ

| Published : Oct 04 2025, 01:00 AM IST

ಗಾಂಧಿಯ ಅಚಲ ಬದ್ಧತೆಗೆ ಅಡಿಪಾಯ ಹಾಕಿದ ಹೋರಾಟ: ಮರಿರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಇವರ ಸತ್ಯ ಅಹಿಂಸೆಯ ತತ್ವಗಳು ಅನೇಕರ ಮೇಲೆ ಪ್ರಭಾವ ಬೀರಿವೆ.

ಹಗರಿಬೊಮ್ಮನಹಳ್ಳಿ: ಮಹಾತ್ಮ ಗಾಂಧೀಜಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಗತ್ಯ ಪಾತ್ರ ನಿರ್ವಹಿಸಿದ್ದರು ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇವರ ಸತ್ಯ ಅಹಿಂಸೆಯ ತತ್ವಗಳು ಅನೇಕರ ಮೇಲೆ ಪ್ರಭಾವ ಬೀರಿವೆ. ಈಗೀನ ಕೆಲ ರಾಜಕಾರಣಿಗಳು ರಾಷ್ಟ್ರಪಿತನನ್ನು ಕೂಡ ತಮ್ಮ ಬಾಯಿಚಪಲಕ್ಕೆ ನಿಂದಿಸುತ್ತಿದ್ದಾರೆ. ದೇಶದ ಇತಿಹಾಸವನ್ನೇ ಅರಿಯದವರು ಬರಿ ಟೀಕೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಗಾಂಧೀಜಿಯವರ ಸರಳ ಜೀವನಶೈಲಿ ವಿದೇಶದಲ್ಲಿಯೂ ಕೂಡ ಪ್ರಭಾವ ಬೀರಿತು. ಬ್ರಿಟಿಷ್ ಸರ್ಕಾರದ ವಿರುದ್ದ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳುವಳಿಗಳನ್ನು ಮುನ್ನೆಡೆಸಿ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಗಾಂಧೀಜಿಯವರ ಅಚಲ ಬದ್ಧತೆ, ಅವರ ವರ್ಚಸ್ಸು ಲಕ್ಷಾಂತರ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸಿತು. ಇಂದಿನ ಯುವಕರು ರಾಷ್ಟ್ರ ನಾಯಕರ ತತ್ವ ಆದರ್ಶಗಳನ್ನು ಪಾಲಿಸಿ ದೇಶಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗುಳಿ, ಪುರಸಭೆ ಸದಸ್ಯರಾದ ರಾಜೇಶ್ ಬ್ಯಾಡಗಿ, ಉಪ್ಪಾರ ಬಾಳಪ್ಪ, ಸಮುದಾಯ ಸಂಘಟನಾಧಿಕಾರಿ ಬಸವರಾಜ, ಪುರಸಭೆಯ ಪ್ರಭಾಕರ, ಚಂದ್ರಶೇಖರ, ಮಾರ್ಕಂಡಯ್ಯ, ಮಾರುತಿ, ಸಿಬ್ಬಂದಿ ಇದ್ದರು.

ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಿಸಲಾಯಿತು.