ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಶತಾಯುಷಿ, ಪರಿಸರವಾದಿ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ (114) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ತಿಮ್ಮಕ್ಕ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ನ.2ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಕೊನೆಯುಸಿರೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೇರಿ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಚಿಕ್ಕಯ್ಯ ಅವರನ್ನು ವಿವಾಹವಾಗಿದ್ದ ತಿಮ್ಮಕ್ಕ ಅವರಿಗೆ ಹಲವು ವರ್ಷಗಳ ನಂತರವೂ ಮಕ್ಕಳಾಗಿರಲಿಲ್ಲ. ಮಕ್ಕಳಾಗಲೆಂದು ಧಾರ್ಮಿಕ ತಾಣಗಳನ್ನು ಸುತ್ತಿದರು. ಸಂಬಂಧಿಕರು ಮತ್ತು ಹಿರಿಯರ ಸಲಹೆಯಂತೆ ಹರಕೆಗಳನ್ನು ಹೊತ್ತು, ತೀರಿಸಿದರು. ಇದರ ಭಾಗವಾಗಿ ದಂಪತಿ ಆಲದ ಮರದ ಸಸಿ ನೆಟ್ಟು ಪೋಷಣೆಯನ್ನೂ ಮಾಡುತ್ತಿದ್ದರು. ಬರ ಬರುತ್ತಾ ಮರಗಳನ್ನೇ ಮಕ್ಕಳಂತೆ ಬೆಳೆಸುವುದನ್ನು ತಿಮ್ಮಕ್ಕ-ಚಿಕ್ಕಯ್ಯ ರೂಢಿಸಿಕೊಂಡರು.ಪತಿಯೊಂದಿಗೆ ಗಿಡ ನೆಟ್ಟು, ನೀರೆರೆದು ಪೋಷಣೆ ಮಾಡಿ ಮಕ್ಕಳಂತೆಯೇ ಬೆಳೆಸಿದರು. ಸುಮಾರು 384 ಆಲದ ಮರಗಳು ಹಾಗೂ ಹುಲಿಕಲ್-ಕುದೂರು ಮಾರ್ಗದಲ್ಲಿ ಸುಮಾರು 4,500 ಬೇರೆ ಮರಗಳನ್ನು ಅವರು ಬೆಳೆಸಿದ್ದಾರೆ. ಆರಂಭದಲ್ಲಿ ಇವರ ವೃಕ್ಷ ಮತ್ತು ಪರಿಸರ ಪ್ರೀತಿ ಸಂಬಂಧಿಕರು ಮತ್ತು ಊರಿನವರಿಗೆ ಮಾತ್ರ ತಿಳಿದಿತ್ತು. ಆದರೆ, ಮರಗಳು ಬೆಳೆದು ದೊಡ್ಡದಾದ ಬಳಿಕ ತಿಮ್ಮಕ್ಕನವರ ಪರಿಸರ ಕಾಳಜಿ ನಿಧಾನವಾಗಿ ಸಮಾಜಕ್ಕೆ ಪರಿಚಯವಾಯಿತು.
1995ರಲ್ಲಿ ‘ನ್ಯಾಷನಲ್ ಸಿಟಿಜನ್ ಅವಾರ್ಡ್’ ಬಂದ ಬಳಿಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ರಸ್ತೆ ಬದಿಯಲ್ಲಿ ಸಾಲಾಗಿ ಮರಗಳನ್ನು ಬೆಳೆಸಿದ್ದ ಕಾರಣ ತಿಮ್ಮಕ್ಕನವರ ಹೆಸರಿನ ಮುಂದೆ ವೃಕ್ಷಮಾತೆ, ‘ಸಾಲು ಮರ’ದ ಗೌರವ ಸೇರ್ಪಡೆಯಾಯಿತು. ಇವರ ಪರಿಸರ ಕಾಳಜಿಯನ್ನು ಮೆಚ್ಚಿ 2019ರಲ್ಲಿ ಕೇಂದ್ರ ಸರ್ಕಾರ ದೇಶದ ಉನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.ಇನ್ನು ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿ ದೇಶದ ಅನೇಕ ಸಂಘ-ಸಂಸ್ಥೆಗಳಿಂದ ಹತ್ತು ಹಲವು ಗೌರವ, ಪ್ರಶಸ್ತಿಗಳು ತಿಮ್ಮಕ್ಕ ಅವರನ್ನು ಅರಸಿಕೊಂಡು ಬಂದಿವೆ. ರಾಜ್ಯ ಸರ್ಕಾರ ಕ್ಯಾಬಿನೇಟ್ ದರ್ಜೆಯ ಸ್ಥಾನ ಮಾನವನ್ನೂ ಅವರಿಗೆ ನೀಡಿತ್ತು.
ಅನೇಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಸಮಾರಂಭಗಳಲ್ಲೂ ಸಾಲು ಮರದ ತಿಮ್ಮಕ್ಕ ಭಾಗಿಯಾಗುತ್ತಿದ್ದರು. ಪರಿಸರ ಪ್ರೇಮ, ಮರಗಳನ್ನು ಬೆಳೆಸಲು ಬೇಕಾದ ಕಾಳಜಿಗೆ ಹಲವರಿಗೆ ಇವರೇ ಸ್ಪೂರ್ತಿ.ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ತಿಮ್ಮಕ್ಕಗೆ ಸಂದ ಪ್ರಶಸ್ತಿ-ಪುರಸ್ಕಾರಗಳು ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ, ನಾಡೋಜ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಮಾಣಪತ್ರ, ಕೇಂದ್ರೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರೀ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತ ಪ್ರಶಸ್ತಿ, ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ. ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್‌ನಿಂದ ವಿಶಾಲಾಕ್ಷಿ ಪ್ರಶಸ್ತಿಗಳು ತಿಮ್ಮಕ್ಕ ಅವರಿಗೆ ಸಂದಿವೆ.ಎಲ್ಲರಿಗೂ ತಿಮ್ಮಕ್ಕ ಸ್ಫೂರ್ತಿಯಾಗಲಿ:
ಸಾಕು ಮಗ ಉಮೇಶ್ ಭಾವುಕ ನುಡಿಆಸ್ಪತ್ರೆ ಬಳಿ ಭಾವುಕರಾಗಿ ಮಾತನಾಡಿದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್, ರಾಜ್ಯದ ಜನ ಅಜ್ಜಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಇಷ್ಟು ವರ್ಷ ಅಜ್ಜಿ ತುಂಬಾ ಚೆನ್ನಾಗಿ ಬದುಕಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯುವ ಸಮುದಾಯ ನಡೆಯಬೇಕು ಎಂದರು.ಆಸ್ಪತ್ರೆಯಲ್ಲಿ ಭಾವುಕ ಕ್ಷಣಗಳು
ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದ ತಿಮ್ಮಕ್ಕ ಅವರು ಸಾಕು ಮಗ ಉಮೇಶ್ ಅವರ ತಲೆಯನ್ನು ಭಾವುಕರಾಗಿ ಸವರುವುದು, ಆಗ ಉಮೇಶ್ ‘ಸಾಕು ಬಿಡು ಅಜ್ಜಿ’ ಎಂದು ಹೇಳುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.;Resize=(128,128))
;Resize=(128,128))
;Resize=(128,128))