ಸಾರಾಂಶ
ಕನ್ನಡ ಪ್ರಭ ವಾರ್ತೆ ಹನೂರು
ಚಿರತೆ ದಾಳಿ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಜರುಗಿದೆ.ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಮಲೆ ಮಾದೇಶ್ವರ ಬೆಟ್ಟ ವಲಯದ ವ್ಯಾಪ್ತಿಗೆ ಬರುವ ಪೊನ್ನಾಚಿ ಗ್ರಾಮದ ರೈತ ಶಿವಣ್ಣ ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಮೇಕೆಯನ್ನು ಚಿರತೆ ಅರಣ್ಯ ಪ್ರದೇಶದಿಂದ ಬಂದು ಸ್ಥಳದಲ್ಲಿ ತಿಂದು ಹಾಕಿದೆ.
ರೈತರ ನಿದ್ದೆಗೆಡಿಸಿರುವ ಚಿರತೆ ಸೆರೆಗೆ ಅಗ್ರಹ:ಕಳೆದ ಹಲವಾರು ತಿಂಗಳುಗಳಿಂದ ಈ ಭಾಗದ ರೈತರ ಜಮಿನುಗಳಲ್ಲಿ ಚಿರತೆ ಮೇಕೆ ಹಾಗೂ ಕುರಿ ಸಾಕು ಪ್ರಾಣಿಗಳನ್ನು ಕೊಂದು ತಿಂದಿರುವುದರಿಂದ ಈ ಭಾಗದ ರೈತರ ನಿದ್ದೆಗೆಡಿಸಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ರೈತ ಸಂಘಟನೆ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪರಿಹಾರಕ್ಕೆ ಒತ್ತಾಯ:ಕಳೆದ ಹಲವಾರು ತಿಂಗಳುಗಳಿಂದ ಮಲೆ ಮಾದೇಶ್ವರ ವನ್ಯ ಧಾಮದಿಂದ ಬರುತ್ತಿರುವ ಚಿರತೆಯಿಂದ ರಾತ್ರಿ ವೇಳೆ ತೋಟದ ಮನೆಗಳಲ್ಲಿ ವಾಸಿಸುವ ಹಾಗೂ ಗಾಮಸ್ಥರ ರೈತರು ಭಯದ ವಾತಾವರಣದಲ್ಲಿದ್ದು ಮೇಕೆ ಬಲಿಪಡಿರುವ ರೈತನಿಗೆ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.
ಅರಣ್ಯಾಧಿಕಾರಿಗಳ ದೌಡು:ಚಿರತೆ ಮೇಕೆ ಬಲಿ ಪಡಿದಿರುವ ಬಗ್ಗೆ ವಲಯ ಅರಣ್ಯ ಅಧಿಕಾರಿ ಸಿಬ್ಬಂದಿ ಈ ಭಾಗದಲ್ಲೇ ದಿನನಿತ್ಯ ಚಿರತೆ ರೈತರ ಜಮೀನುಗಳ ಮೇಲೆ ಈ ಭಾಗದಲ್ಲಿ ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದು, ಸೆರೆ ಹಿಡಿಯಲು ಬೋನ್ ಇಡುವಂತೆ ತಿಳಿಸಿದ್ದಾರೆ. ಇಲ್ಲದಿದ್ದರೆ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.
ಮಹದೇಶ್ವರ ಬೆಟ್ಟ ಸುತ್ತಮುತ್ತ ಕಾಡುಹೊಲ ಗ್ರಾಮದಲ್ಲಿ ಕರುವನ್ನು ಕೊಂದು ತಿಂದಿರುವ ಚಿರತೆ ಬೇರೆ ಕಡೆ ಹೋಗಿದೆ. ಅರಣ್ಯ ಪ್ರದೇಶಕ್ಕೆ ಹೀಗಾಗಿ ಗ್ರಾಮದ ರೈತನ ಜನರಿಗೆ ಸಿಬ್ಬಂದಿ ವರ್ಗದವರು ತೆರಳಿ ಪರಿಶೀಲನೆ ಮತ್ತು ಚಿರತೆಯ ಚಲನವಲನ ಪತ್ತೆಹಚ್ಚಲು ಸಿಬ್ಬಂದಿಯನ್ನು ಸಹ ನೇಮಕ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ದಿನನಿತ್ಯ ಪೊನ್ನಾಚಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅರಣ್ಯದಂಚಿನ ಭಾಗದಲ್ಲಿ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತಿದೆ ಸಂಭದ ಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕ್ರೂರ ಪ್ರಾಣಿಗಳು ಬರದಂತೆ ತಡೆಗಟ್ಟಲು ಕ್ರಮ ಕೈಗೊಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹ ಜೀವಿ ರಾಜ್ ಒತ್ತಾಯಿಸಿದ್ದಾರೆ.
------------14ಸಿಎಚ್ಎನ್15
;Resize=(128,128))
;Resize=(128,128))
;Resize=(128,128))