ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ತಾಲೂಕಿನ ಮಹಿಷಿಯಲ್ಲಿರುವ ಉತ್ತರಾದಿ ಮಠದಲ್ಲಿ ಬುಧವಾರ ನಡೆದ ಕಳ್ಳತನ ಪ್ರಕರಣ ಬೇಧಿಸಿರುವ ಪೋಲೀಸರು ಕಳುವಾದ ಅಂದಾಜು ಒಂದು ಕೋಟಿಗೂ ಮೀರಿದ ಮೌಲ್ಯದ ವಸ್ತುಗಳೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ರಾಘವೇಂದ್ರ ಆಚಾರ್ಯ (25) ಆರೋಪಿ. ಶಿವಮೊಗ್ಗ ನಗರದ ಗಾಂಧಿನಗರದ ವಾಸಿಯಾದ ಈತನಿಂದ ಅಂದಾಜು ಒಂದು ಕೋಟಿ ಒಂದು ಲಕ್ಷದ ನಲವತ್ತು ಸಾವಿರ ಮೌಲ್ಯದ 780 ಗ್ರಾಂ ತೂಕದ 16 ಹಲಗಾರತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಮೂರು ದಿನಗಳಿಂದ ಈ ಮಠದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯುತ್ತಿತ್ತು. ಮಠದ ಭಕ್ತನೂ ಆಗಿದ್ದ ಆರೋಪಿ ಸ್ನಾನದ ನೆಪದಲ್ಲಿ ಕದ್ದ ವಸ್ತುಗಳನ್ನು ನದಿದಡದಲ್ಲಿ ಹೂತಿಟ್ಟಿದ್ದ. ಮಠದಲ್ಲಿದ್ದ ಸುಮಾರು 300 ಜನರನ್ನೂ ಪೊಲೀಸರು ತನಿಖೆ ಮಾಡುವ ವೇಳೆ ಅನುಮಾನ ಬಂದು ಆರೋಪಿಯನ್ನು ವಿಚಾರಿಸಿದಾಗ ಬಾಯಿ ಬಿಟ್ಟಿದ್ದಾನೆ.

ಪ್ರಕರಣ ಪತ್ತೆ ಹಚ್ಚಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಅರವಿಂದ ಕಲಗುಜ್ಜಿ, ತೀರ್ಥಹಳ್ಳಿ ಪಟ್ಟಣ ಠಾಣಾ ಪಿಐ ಇಮ್ರಾನ್ ಬೇಗ್, ಗ್ರಾಮಾಂತರ ಸಿಪಿಐ ರಾಜಶೇಕರ್, ಮಾಳೂರು ಪಿಎಸ್‍ಐ ಸುನಿಲ್ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು.


-

ಫೊಟೋ 18 ಟಿಟಿಎಚ್ 03:

ಮಹಿಷಿಯಲ್ಲಿರುವ ಉತ್ತರಾದಿ ಮoದಲ್ಲಿ ಬುಧವಾರ ನಡೆದ ಕಳ್ಳತನ ಪ್ರಕರಣದಲ್ಲಿ ಪೋಲಿಸರು ವಶಪಡಿಸಿಕೊಂಡಿರುವ ವಸ್ತುಗಳೊಂದಿಗೆ ಪೋಲಿಸ್ ತಂಡ