ಉಪ್ಪಿನಂಗಡಿ: ಬೆಂಗಳೂರು, ದ.ಕ. ಜಿಲ್ಲೆ ಹಾಗೂ ಕೇರಳ ಸೇರಿದಂತೆ ಒಟ್ಟು ೧೧ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಅಂತರಾಜ್ಯ ಖದೀಮನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡುವಿನ ಕೊಯಮುತ್ತೂರು ನಿವಾಸಿ ಜಯಕುಮಾರ್ (೫೫) ಬಂಧಿತ ಆರೋಪಿ. ಜು.೮ರಂದು ಈತನನ್ನು ಬಂಧಿಸಿದ ಪೊಲೀಸ್ ತಂಡ ಆರೋಪಿಯ ಬಳಿಯಿಂದ ಕಬ್ಬಿಣದ ಸಲಾಕೆ, ಸ್ಕೂç ಡ್ರೆöÊವರ್, ಬ್ಯಾಗ್ ಹಾಗೂ ೨ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ.

ಕಳೆದ ಮೇ ತಿಂಗಳಿನಲ್ಲಿ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿದಂತೆ ಈತನ ವಿರುದ್ಧ ಈಗಾಗಲೇ ಬೆಳ್ತಂಗಡಿ ಠಾಣೆಯಲ್ಲಿ ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಈತನ ಮೇಲೆ ದ.ಕ ಜಿಲ್ಲಾ ಪೊಲೀಸ್ ವ್ಯಾಪಿಯಲ್ಲಿ ೫ ಪ್ರಕರಣಗಳು, ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ೧ ಪ್ರಕರಣ, ಕೇರಳ ರಾಜ್ಯದ ೪ ಪೊಲೀಸ್ ಠಾಣೆಗಳಲ್ಲಿ ತಲಾ ೧ ಪ್ರಕರಣಗಳು ಹಾಗೂ ಬೆಂಗಳೂರಿನಲ್ಲಿ ೧ ಪ್ರಕರಣ ದಾಖಲಾಗಿರುವುದಾಗಿ ವಿಚಾರಣೆಯ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಉಪ್ಪಿನಂಗಡಿಯಲ್ಲಿ ವೈದ್ಯರ ಕ್ಲಿನಿಕ್‌ಗಳಿಗೆ, ನೋಟರಿ ವಕೀಲರ ಕಚೇರಿಗೆ ನುಗ್ಗಿರುವ ಈತ ಅಲ್ಲಿದ್ದ ಸಾವಿರಾರು ರೂಪಾಯಿ ನಗದು ಹಣವನ್ನು ದೋಚಿದ್ದ. ಕದ್ದಿರುವ ಹಣವೆಲ್ಲವೂ ಖರ್ಚಾಗಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್, ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಪೊಲೀಸ್ ಉಪನಿರೀಕ್ಷಕರಾದ ಆನಂದ ಎಂ, ಸಿಖಂದರ್ ಪಾಷಾ, ಸುತೇಶ್ ಕೆ.ಪಿ, ಬೆಳ್ತಂಗಡಿ ಪೊಲೀಸ್ ಠಾಣಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಪಂಪಾಪತಿ, ಗಿರೀಶ್, ಹೇಮರಾಜ್ ಹೆಚ್. ಪಿ, ಕಡಬ ಪೊಲೀಸ್ ಠಾಣಾ ಹರ್ಷಿತ್, ಪ್ರಕಾಶ್, ಸಿಡಿಆರ್ ವಿಭಾಗದ ಸಂಪತ್, ದಿವಾಕರ್ ಇದ್ದರು.