ಸಾರಾಂಶ
ಗೌರಿಬಿದನೂರು ನಗರದ ಮಧುಗಿರಿ ವೃತ್ತದಿಂದ ಊಪ್ಪಾರ ಕಾಲೋನಿಯ ಶ್ರೀ ಗಂಗಾಭಾಗೀರಥ ವೃತ್ತದ ವರೆಗಿರುವ ಮೇಲ್ಸೇತುವೆ ಮಾರ್ಗದಲ್ಲಿ ವಾಹನ ಸವಾರರು ನಿತ್ಯವೂ ಸರ್ಕಸ್ ಮಾಡುವಂತಾಗಿದೆ. ಸೇತುವೆ ರಸ್ತೆ ಅಷ್ಟೊಂದು ಅದ್ವಾನಗೊಂಡಿದೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು, ಗುಂಡಿಗಳನ್ನು ಮುಚ್ಚಿ ಸವಾರರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಅನೇಕ ಬಾರಿ ಸಾರ್ವಜನಿಕರು ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ನಗರದ ಮಧುಗಿರಿ ವೃತ್ತದಿಂದ ಊಪ್ಪಾರ ಕಾಲೋನಿಯ ಶ್ರೀ ಗಂಗಾಭಾಗೀರಥ ವೃತ್ತದ ವರೆಗಿರುವ ಮೇಲ್ಸೇತುವೆ ಕಾಮಗಾರಿ ಸತತವಾಗಿ 3 ವರ್ಷಕ್ಕೂ ಹೆಚ್ಚುಕಾಲ ನಡೆಯಿತು. ಆದರೆ ರಸ್ತೆಯ ಕಾಮಗಾರಿ ಪೂರ್ಣಗೊಂಡು ಸರಿಯಾಗಿ 1 ವರ್ಷ ಕಳೆಯುವಷ್ಟರಲ್ಲಿ ಸೇತುವೆಯ ಎರಡೂ ಬದಿಯಲ್ಲಿ ಗುಂಡಿಗಳು ಬಿದ್ದಿವೆ. ಸೇತುವೆ ಮೇಲೆ ದಾರಿದೀಪಗಳನ್ನು ಅಳವಡಿಸಬೇಕಾದ ಕಾಮಗಾರಿಯೂ ಅಪೂರ್ಣವಾಗಿದೆ. ತರಾತುರಿಯಲ್ಲಿ ಕಾಮಗಾರಿ ಮುಗಿದ ನಂತರ ಒಮ್ಮೆಯಾದರೂ ಸಂಬಂಧಿತ ಅಧಿಕಾರಿಗಳು ಇತ್ತ ತಿರುಗಿಸಹ ನೋಡಲಿಲ್ಲ. ಮುಖ್ಯ ಸಂಪರ್ಕ ಸೇತುವೆಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿರು ಓಡಾಡುತ್ತಿರುತ್ತಾರೆ. ನಗರಕ್ಕೆ ಸಂಪರ್ಕವನ್ನು ಕಲ್ಪಿಸುವ ಮುಖ್ಯ ರಸ್ತೆ ಈ ಸೇತುವೆಯಾಗಿದ್ದು, ಈ ಮಾರ್ಗದಲ್ಲಿ ವಾಹನ ಸವಾರರು ನಿತ್ಯವೂ ಸರ್ಕಸ್ ಮಾಡುವಂತಾಗಿದೆ. ಸೇತುವೆ ರಸ್ತೆ ಅಷ್ಟೊಂದು ಅದ್ವಾನಗೊಂಡಿದೆ. . ಹದಗೆಟ್ಟ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುಕೊಂಡು ವಾಹನ ಓಡಿಸುವ ಪರಿಸ್ಥಿತಿ ಉಂಟಾಗಿದೆ.
ರಸ್ತೆಯಲ್ಲಿರುವ ಗುಂಡಿಗಳಲ್ಲಿ ತಪ್ಪಿಸುವ ಯತ್ನದಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿ ಹಲವಾರು ಘಟನೆಗಳು ನಡೆದಿವೆ. ಸಾರ್ವಜನಿಕರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಓಡಾಡಬೇಕಾದ ಪರಿಸ್ಥಿತಿಯಿದೆ.ನಗರದ ಎಂ.ಜಿ ರಸ್ತೆಯಲ್ಲಿಯೂ ಸಹ ಬರಿ ಗುಣಿಗಳದ್ದೆ ಕಾರುಬಾರಾಗಿತ್ತು. ಆ ಸಂದರ್ಭದಲ್ಲಿ ನಗರಸಭಾ ಸದಸ್ಯೆ ರೂಪಅನಂತರಾಜುರವರು ತಮ್ಮ ಸ್ವಂತ ಖರ್ಚಿನಿಂದ ರಸ್ತೆಯಲ್ಲಿರವ ಗುಣಿಗಳನ್ನು ಡಾಂಬರೀಕರಣ ಮಾಡಿಸಿದ್ದರು. ಆದರೆ ರಸ್ತೆಯ ಪಕ್ಕದಲ್ಲಿ ನೀರಿನ ಪೈಪ್ ಲೈನ್ ಹಾದುಹೋಗಿದ್ದು, ನೀರಿನ ಪೈಪ್ ಲೈನ್ ಸೋರಿಕೆಯಿಂದಾಗಿ ರಸ್ತೆ ಮತ್ತೆ ಹಾಳಾಗಿದೆ.ಭಾರಿ ವಾಹನ ಸಂಚಾರ ತಡೆಗಟ್ಟಿಭಾರಿ ವಾಹನಗಳ ಓಡಾಟದಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿದೆ ರಸ್ತೆಗಳು ಹಾಳಾಗುತ್ತಿವೆ. ನಿಗದಿಗಿಂತಲೂ ಹೆಚ್ಚು ಲೋಡ್ ಮಾಡಿಕೊಂಡ ವಾಹನಗಳಿಗೆ ನಗರದೊಳಗೆ ಪ್ರವೇಶಕ್ಕೆ ಅವಕಾಶ ಕೊಡಬಾರದು. ಇವುಗಳ ಓಡಾಟಕ್ಕೆ ಕಡಿವಾಣ ಹಾಕಬೇಕು. ಬೈಪಾಸ್ ರಸ್ತೆಯಿದ್ದರೂ ನಗರದಲ್ಲಿ ಭಾರಿಗಾತ್ರದ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇವುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.