ಸಾರಾಂಶ
ನಗರದ ಹಿಂದಿ ಪ್ರಚಾರ ಸಭೆಯ ಪ್ರಾಂಗಣದಲ್ಲಿ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ನಡೆದ ವಿವಿಧ ರಂಗಗಳಲ್ಲಿ ಅಪರೂಪದ ಸಾಧನೆಗೈದ ಸಾಧಕರು, 2024ರಲ್ಲಿ ನಿವೃತ್ತರಾಗಿ ಸಂಘದ ಸದಸ್ಯತ್ವ ಪಡೆದವರು ಹಾಗೂ 2023ರಲ್ಲಿ 80ವರ್ಷ ಪೂರೈಸಿದ ಸದಸ್ಯರಿಗೆ ಸ್ವಾಗತ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಏಳು ರಾಜ್ಯಗಳ ವ್ಯಾಪ್ತಿ ಹೊಂದಿರುವ ರಾಷ್ಟ್ರೀಯ ಕೃಷಿ ಸಹಕಾರ ಮಹಾ ಮಂಡಳದಲ್ಲಿ ಸಿಕ್ಕಿರುವ ಅಧಿಕಾರವನ್ನು ಕೃಷಿಕರ ಏಳಿಗೆಗಾಗಿ ಸದ್ಬಳಕೆ ಮಾಡಿಕೊಂಡು ಕೃಷಿ ವಲಯಕ್ಕೆ ಕೈಲಾದ ಸೇವೆ ಮಾಡುವೆ ಎಂದು ನ್ಯಾಪೇಡ್ ಸಂಸ್ಥೆಯ ನೂತನ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.ನಗರದ ಹಿಂದಿ ಪ್ರಚಾರ ಸಭೆಯ ಪ್ರಾಂಗಣದಲ್ಲಿ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ನಡೆದ ವಿವಿಧ ರಂಗಗಳಲ್ಲಿ ಅಪರೂಪದ ಸಾಧನೆಗೈದ ಸಾಧಕರು, 2024ರಲ್ಲಿ ನಿವೃತ್ತರಾಗಿ ಸಂಘದ ಸದಸ್ಯತ್ವ ಪಡೆದವರು ಹಾಗೂ 2023ರಲ್ಲಿ 80ವರ್ಷ ಪೂರೈಸಿದ ಸದಸ್ಯರಿಗೆ ಸ್ವಾಗತ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನನ್ನೆಲ್ಲ ಯಶಸ್ವಿ ಪಯಣದಲ್ಲಿ ಗೆಳೆಯರ ಬಳಗದ ಹಾರೈಕೆ ಮತ್ತು ಗುರು-ಹಿರಿಯರ ಆಶೀರ್ವಾದವಿದೆ ಎಂದು ಸ್ಮರಿಸಿದರು. ನಿವೃತ್ತ ಪ್ರಾಚಾರ್ಯ ಅಶೋಕ ವಾಟ್ಕರ್ ಸನ್ಮಾನಿತರ ಕಿರು ಪರಿಚಯ ಮಾಡಿ ಸಮಾರಂಭಕ್ಕೆ ಚಾಲನೆ ನೀಡಿದರು. ಡಾ. ಜಿ.ಡಿ. ಹುನಕುಂಟಿ, ಡಾ. ಭಗವಂತ ಅನವಾರ, ಡಾ. ನೀಲಮ್ಮ ಎಸ್. ರೆಡ್ಡಿ, ವಿನಾಯಕ ಪಾಟೀಲ್ ಮಾತನಾಡಿ, ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ನಮಗೆ ಮಾಡಿದ ಸನ್ಮಾನ ಎಲ್ಲಾ ಬಂಧುಗಳ ಹೃದಯ ವೈಶಾಲ್ಯತೆ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.ನ್ಯಾಪೇಡ್ ಸಂಸ್ಥೆಯ ನೂತನ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಂಘದ ಅಧ್ಯಕ್ಷ ಬಂಡೆಪ್ಪ ಆಕಳ, ನಗರದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ್, ಸಂಘದ ಗೌರವಾಧ್ಯಕ್ಷ ಪ್ರೊ. ಸಿ.ಎಂ. ಪಟ್ಟೇದಾರ, ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಜಿ.ಡಿ. ಹುನಕುಂಟಿ, ವಿರಣ್ಣಗೌಡ, ಡಾ. ಭಗವಂತ ಅನವಾರ, ಸಹ ಕಾರ್ಯದರ್ಶಿ ಗೋಪಾಲ ಕಲಾಲ, ಡಾ. ನೀಲಮ್ಮ ಎಸ್. ರೆಡ್ಡಿ, ಖಜಾಂಚಿ ಸೈದಪ್ಪ ಬೀರನಾಳ, ಹಿರಿಯ ನಾಗರಿಕರ ಯೋಗಕ್ಷೇಮ ಕೇಂದ್ರದ ಅಧ್ಯಕ್ಷ ಅಜೀತ್, ನರಸಪ್ಪ ಪಂಚಾಳ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಹೊಸದಾಗಿ ಸದಸ್ಯರಾದ ಒಂಬತ್ತು ಜನರನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು. ಲಕ್ಷ್ಮೀರೆಡ್ಡಿ ಪ್ರಾರ್ಥಿಸಿದರು. ಚಂದ್ರಕಾಂತ ಲೇವಡಿ ಸ್ವಾಗತಿಸಿದರು. ಶರಣಪ್ಪ ಬೆನಕನಹಳ್ಳಿ ನಿರೂಪಿಸಿದರು. ಬಸವರಾಜ ಸೈದಾಪೂರ ವಂದಿಸಿದರು. ಉಪಾಧ್ಯಕ್ಷ ಟಿ. ರಾಮಲಿಂಗಪ್ಪ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಂಡೆಪ್ಪ ಆಕಳ ಅಧ್ಯಕ್ಷಿಯ ಭಾಷಣ ನುಡಿಗಳನ್ನಾಡಿ, ಶುಭ ಹಾರೈಸಿದರು.