ಸಾರಾಂಶ
There are significant factors behind liberation: Lakshmana
-ಅಜೀಂ ಪ್ರೇಮಜಿ ಫೌಂಡೇಶನ್ ನಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ
---ಕನ್ನಡಪ್ರಭ ವಾರ್ತೆ ಯಾದಗಿರಿ
ಕಲ್ಯಾಣ ಕರ್ನಾಟಕ ವಿಮೋಚನೆ ಹಿಂದೆ ಮಹತ್ವದ ಅಂಶಗಳಿವೆ. ಸಂವಿಧಾನಾತ್ಮಕ ಅಂಶಗಳು ಹಾಗೂ ದೇಶದಲ್ಲಿನ ಬಲಿಷ್ಠ ನಾಯಕರ ವ್ಯಕ್ತಿತ್ವ, ಸ್ಥಳೀಯ ನಾಯಕರ ಹೋರಾಟದ ಫಲವಾಗಿ ಈ ಭಾಗ ದೇಶದಲ್ಲಿ ವಿಲೀನಗೊಳ್ಳಲು ಸಾಧ್ಯವಾಯಿತು ಎಂಬ ಮಹತ್ವ ತಿಳಿಯುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಪಾಟೀಲ್ ಹೇಳಿದರು.ಸೈದಾಪುರ ಪಟ್ಟಣದ ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಅಜೀಂ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಸಂವಿಧಾನಿಕ ಆಡಳಿತದ ಮಹತ್ವ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರದ ಏಕೀಕರಣದಲ್ಲಿ ವಲ್ಲಭಬಾಯ್ ಪಟೇಲರ ಗಟ್ಟಿ ನಿರ್ಧಾರಗಳು ಇವತ್ತು ಬಲಿಷ್ಠ ದೇಶವನ್ನು ಕಾಣುವಂತಾಗಿದೆ. ಹೈದರಾಬಾದ ನಿಜಾಮನ ಆಳ್ವಿಕೆಯಿಂದ ಈ ಭಾಗ ಸ್ವಾಂತಂತ್ರ್ಯ ಪಡೆದುಕೊಂಡು ಪ್ರಜಾಸತ್ತಾತ್ಮಕ ಆಡಳಿತ ಕಂಡುಕೊಳ್ಳುವಂತಾಗಿದೆ ಎಂದರು.ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಉಪನ್ಯಾಸಕಿ ಶ್ವೇತಾ ರಾಘವೇಂದ್ರ ಪೂರಿ, ಸಂಪನ್ಮೂಲ ವ್ಯಕ್ತಿ ಮಲ್ಲೇಶ ವಗ್ಗರ, ಸುರೇಶಗೌಡ, ಡಿ.ಎಲ್.ಇಡಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.
-----19ವೈಡಿಆರ್7: ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಅಜೀಂ ಪ್ರೇಮಜಿ ಫೌಂಡೇಶನ ವತಿಯಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಚರ್ಚಾ ಕಾರ್ಯಕ್ರಮ ನಡೆಯಿತು.