ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಬಿಡುಗಡೆಗಾಗಿ ಅಭಿಮಾನಿಗಳು ಶ್ರೀ ಚೌಡೇಶ್ವರಿ ಮತ್ತು ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೊರಟಗೆರೆ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಇನ್ನಲೇ ಜೈಲಿಂದ ನಟ ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳು ಶ್ರೀ ಚೌಡೇಶ್ವರಿ, ಶ್ರೀ ಕಾಳಿಕಾಂಬ ದೇವಿಗೆ ಮೊರೆ ಹೋಗಿದ್ದಾರೆ.
ತಾಲೂಕಿನ ಕೋಳಾಲ ಹೋಬಳಿಯ ತಂಗನಹಳ್ಳಿ ಗ್ರಾಮದಲ್ಲಿ ನಟ ದರ್ಶನ ಅಭಿಮಾನಿಗಳಿಂದ ಅನಂತ ಪೂರ್ಣಿಮೆ ದಿನದೊಂದು ಗ್ರಾಮ ದೇವತೆಗಳಾದ ಶ್ರೀ ಚೌಡೇಶ್ವರಿ, ಶ್ರೀ ಕಾಳಿಕಾಂಬ ದೇವಿಯರಿಗೆ ರಾತ್ರಿ ವಿಶೇಷ ಪೂಜೆ ಏರ್ಪಡಿಸಿ ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಲಿ ಎಂದು ಬೂದು ಕುಂಬಳಕಾಯಿ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಚೌಡೇಶ್ವರಿ, ಕಾಳಿಕಾಂಬ ದೇವಿಯು ಶಕ್ತಿ ದೇವತೆಗಳಾಗಿದ್ದು, ಭಕ್ತರು ಬೇಡಿದ ವರವನ್ನು ನೀಡುವ ಶಕ್ತಿ ಈ ದೇವಿಯರಿಗೆ ಇದೆ ಎಂದು ಗ್ರಾಮಸ್ಥರ ನಂಬಿಕೆಯಾಗಿದೆ. ನಟ ದರ್ಶನ್ ಅವರಿಗೆ ಶತ್ರು ನಾಶ, ಕೆಟ್ಟ ದೃಷ್ಠಿ ನಿವಾರಣೆ ಆಗಿ ಶೀಘ್ರ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ವಿಶೇಷ ಪೂಜೆಯನ್ನ ಸಲ್ಲಿಸಿದರು.ಅಭಿಮಾನಿ ಸಂಘದಿಂದ ವರದರಾಜು ಮಾತನಾಡಿ ದರ್ಶನ್ ಅವರಿಗೆ ಅಂಟಿರುವ ಕಳಂಕ ಹೋಗಿ ನಿರಪರಾಧಿಯಾಗಿ ಆದಷ್ಟು ಬೇಗ ಜೈಲಿಂದ ಹೊರ ಬರಲಿ ಎಂದು ಬೂದು ಕುಂಬಳಕಾಯಿ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು.