ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಈಶಪ್ರಭು ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಫೆ.4 ರಿಂದ 6ರವರೆಗೆ ಅದ್ಧೂರಿಯಿಂದ ನಡೆಯಲಿದೆ.ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಈಶಪ್ರಭು ಶಿಕ್ಷಣ ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡಲು 1971 ರಲ್ಲಿ ನಮ್ಮ ತಂದೆ ದಿ.ಈರನಗೌಡ ಪಾಟೀಲ ಮತ್ತು ಹಿರಿಯರು ಪ್ರಾರಂಭಿಸಿದ ಸಂಸ್ಥೆ ಇಂದು ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಪದವಿವರೆಗೆ 1500 ವಿದ್ಯಾರ್ಥಿಗಳು ಕಲಿಕೆ ನಡೆಸಿದ್ದು, 52 ಶಿಕ್ಷಕರು ಇದ್ದಾರೆ. ಸಂಸ್ಥೆಯ ಎಲ್ಲ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರು ಸುವರ್ಣ ಮಹೋತ್ಸವ ಸಂಬ್ರಮಕ್ಕೆ ಅದ್ದೂರಿ ತಯಾರಿ ನಡೆಸಿದ್ದಾರೆ. ಹಳೆ ವಿದ್ಯಾರ್ಥಿಗಳು ಸೇರಿ ವಿದ್ಯಾರ್ಥಿ ಭವನ ನಿರ್ಮಿಸಲಿದ್ದಾರೆ ಎಂದರು.
ಫೆ.4ರ ಬೆಳಗ್ಗೆ 10ಕ್ಕೆ ರಾಜಾ ಈಶಪ್ರಭು ವೇದಿಕೆ ಹೆಸರಿನಡಿ ಕಲಾ ತಂಡಗಳೊಂದಿಗೆ ಬೃಹತ್ ಶೋಭಾ ಯಾತ್ರೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3 ಕ್ಕೆ ಉದ್ಘಾಟಣೆ ಸಮಾರಂಭದ ಸಾನ್ನಿಧ್ಯ ಹೂಲಿ ಹಿರೇಮಠ ಶಿವಮಹಾಂತೇಶ ಶಿವಾಚಾರ್ಯ ಸ್ವಾಮೀಜಿ, ಮುರಗೋಡ ನೀಲಕಂಠ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಸುರ್ವಣ ಮಹೋತ್ಸವ ಸಮಾರಂಭ ಉದ್ಘಾಟಿಸುವರು. ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಮಂಗಲಾ ಅಂಗಡಿ ಬೆಳವಡಿ ಸಂಸ್ಥಾನದ ರಾಜ ಈಶಪ್ರಭು, ರಾಣಿ ಮಲ್ಲಮ್ಮಳ ಪುತ್ಥಳಿ ಅನಾವರಣಗೊಳಿಸುವರು. ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಹನುಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿ, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಸೊಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಮಲ್ಲಮ್ಮ ಬ್ಯಾಂಕ ಅಧ್ಯಕ್ಷ ಡಾ.ಆರ್.ಬಿ.ಪಾಟೀಲ, ಈಶಪ್ರಭು ಸಹಕಾರಿ ಸಂಘದ ಉಪಾಧ್ಯಕ್ಷ ಎಂ.ಐ.ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಕರೀಕಟ್ಟಿ, ಜೈನೂಲಸಾಹೇಬ ಹುಜರತಿ ಆಗಮಿಸುವರು. ಸಂಶೋಧಕ ಡಾ.ಬಾಳಣ್ಣ ಚಿನಗುಡಿ ಉಪನ್ಯಾಸ ನೀಡುವರು.
ಫೆ.5 ರ ಬೆಳಗ್ಗೆ 10ಕ್ಕೆ ಸನ್ಮಾನ ಸಮಾರಂಭದಲ್ಲಿ ರುದ್ರಾಕ್ಷೀಮಠದ ಬಸವಲಿಂಗ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಏಣಗಿ ಬಂಗಾರಜ್ಜನ ಮಠದ ವಿರುಪಾಕ್ಷ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಪ್ರಾಚಾರ್ಯ ಡಾ.ಎಫ್.ಬಿ.ಸೂರಟೂರು ಅತಿಥಿ ಉಪನ್ಯಾಸ ನೀಡುವರು.ಫೆ.6 ರಂದು ಸಮಾರೋಪ ಸಮಾರಂಭದಲ್ಲಿ ದೊಡವಾಡದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಉಪನ್ಯಾಸ ನೀಡುವರು. ಪ್ರತಿ ದಿನ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.
ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಎಂ. ಕಾಡೇಶನವರ, ಪ್ರಾಚಾರ್ಯ ಎಂ.ಜಿ.ಹಿರೇಮಠ, ಮುಖ್ಯಾಧ್ಯಾಪಕ ಎಸ್.ಎಸ್.ಇಂಗಳಗಿ ಅವರಿಗೆ ಗುರುವಂದನೆ ಸಲ್ಲಿಸುವರು. ಸಂಸ್ಥೆ ಉಪಾಧ್ಯಕ್ಷ ವಿ.ಎಸ್.ಬಳಿಗಾರ, ಎಂ.ಜಿ.ರೊಟ್ಟಯ್ಯನವರ, ಎನ್.ಎಸ್.ಕರೀಕಟ್ಟಿ, ಬಿ.ಆರ್. ಭೋಜಯ್ಯನವರ, ಎ.ಆರ್.ಮಾರಿಹಾಳ, ಎಂ.ಬಿ.ಕಟ್ಟಿ, ಎಸ್.ಡಿ.ಗುರುಪುತ್ರನವರ, ಎಂ.ಜಿ.ಹೊಂಗಲ ಇದ್ದರು.