ಸದ್ದಿಲ್ಲದೆ ನಡೆದಿದೆ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯ

| Published : Sep 12 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಾಳು ಬಿದ್ದಿರುವ ತಾಲೂಕಿನ ಐತಿಹಾಸಿಕ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸಲು ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಮುಂದಾಗಿದ್ದಾರೆ. ಇದಕ್ಕೆ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಹಸಿರು ನಿಶಾನೆ ತೋರಿದ್ದು, ವಿಶೇಷ ಇತಿಹಾಸಕಾರರ ನೇಮಕ ಮಾಡಿ ಸಂಪೂರ್ಣ ವರದಿ ಪಡೆದು ಅನುದಾನ ಬಿಡುಗಡೆಗೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಹೀಗಾಗಿ ಕ್ಷೇತ್ರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಕಾರ್ಯ ಮತ್ತಷ್ಟು ಮೆರಗು ನೀಡಲಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಾಳು ಬಿದ್ದಿರುವ ತಾಲೂಕಿನ ಐತಿಹಾಸಿಕ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸಲು ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಮುಂದಾಗಿದ್ದಾರೆ. ಇದಕ್ಕೆ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಹಸಿರು ನಿಶಾನೆ ತೋರಿದ್ದು, ವಿಶೇಷ ಇತಿಹಾಸಕಾರರ ನೇಮಕ ಮಾಡಿ ಸಂಪೂರ್ಣ ವರದಿ ಪಡೆದು ಅನುದಾನ ಬಿಡುಗಡೆಗೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಹೀಗಾಗಿ ಕ್ಷೇತ್ರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಕಾರ್ಯ ಮತ್ತಷ್ಟು ಮೆರಗು ನೀಡಲಿದೆ.

ಅಂದು ರಾಮರಾಯ ಸೇರಿ ಹಲವು ಜನರ ಸಮಾಧಿಗಳನ್ನು, ಶಿಲಾಶಾಸನಗಳು, ಲಿಪಿಗಳನ್ನು ಇಲ್ಲಿ ಇಂದಿಗೂ ಕಾಣಬಹುದು. ಆದರೆ, ಇಲ್ಲಿತನಕ ಪ್ರವಾಸೋದ್ಯಮ ಇಲಾಖೆ ಇದರ ಅಭಿವೃದ್ಧಿಗೆ ಚಿಂತಿಸಿರಲಿಲ್ಲ. ಹೀಗಾಗಿ ಇತಿಹಾಸಕ್ಕೆ ಸಾಕ್ಷಿಯಾಗಿರುವ ಕೋಳೂರು ಸ್ಮಾರಕಗಳು ಅವನತಿಯತ್ತ ಸಾಗಿವೆ. ಈ ಹಿನ್ನೆಲೆ ಸಮಗ್ರ ಮಾಹಿತಿ ಪಡೆದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಈ ಪುರಾತನ ಇತಿಹಾಸ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು, ಅದನ್ನು ಪ್ರವಾಸಿ ತಾಣವಾಗಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರನ್ನು ಕೋಳೂರು ಗ್ರಾಮಕ್ಕೆ ಕರೆಸಿ ರಕ್ಕಸ ತಂಗಡಗಿ ಯುದ್ಧ ನಡೆದ ಸ್ಥಳದಲ್ಲಿರುವ ಶಿವಲಿಂಗದ ತ್ರೀಕೂಟೇಶ್ವರ ದೇವಸ್ಥಾನ ಹಾಗೂ ರಾಮರಾಯನ ಸಮಾಧಿಗಳು ಹಾಗೂ ರಣಗಂಭ ಮತ್ತು ಶಿಲಾಶಾಸನಗಳನ್ನು ಪರಿಶೀಲಿಸುವಂತೆ ಮನವೊಲಿಸಿದ್ದರು.

ಮುದ್ದೇಬಿಹಾಳ ಪಟ್ಟಣದ ಕಿಲ್ಲಾ ಗಲ್ಲಿಯ ಶೀಥಿಲಗೊಂಡ ಅಗಸಿ ಕಮಾನು ಹಾಗೂ ಕೋಟೆಗೋಡೆಗಳ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿಯಲ್ಲಿ ಸಿ.ಎಸ್.ನಾಡಗೌಡರು ಸುಮಾರು ₹1 ಕೋಟಿ ವಿಶೇಷ ಹಣ ಬಿಡುಗಡೆ ಮಾಡಿದ್ದಾರೆ. ಜತೆಗೆ ಕೋಳೂರು ಗ್ರಾಮ ಸೇರಿ ಇತರೇ ಪುರಾತನ ಶಾಸನವುಳ್ಳ ವಿವಿಧ ಕ್ಷೇತ್ರಗಳನ್ನು ಅಭಿವೃದ್ಧಿ ಪಡೆಸಲು ಮತ್ತು ಕೃಷ್ಣಾ ನದಿ ತೀರದ ಭಾಗದಲ್ಲಾಗಲಿ, ಆಲಮಟ್ಟಿಯಲ್ಲಾಗಲಿ, ಮೊಸಳೆ ಪಾರ್ಕ್‌ ನಿರ್ಮಿಸುವ ಕಾರ್ಯಕ್ಕೆ ಸಿದ್ದತೆ ನಡೆದಿದೆ. -------------

ಬಾಕ್ಸ್‌

ಏನಿದು ಕ್ಷೇತ್ರದ ಇತಿಹಾಸ?

ತಾಲೂಕಿನ ಕೋಳೂರು ಗ್ರಾಮದದಲ್ಲಿ 1565ರಲ್ಲಿ ನಡೆದ ರಕ್ಕಸ ತಂಗಡಗಿ ಯುದ್ಧ ಸೇರಿದಂತೆ ಇಲ್ಲಿರುವ ಶಿವಲಿಂಗದ ತ್ರೀಕೂಟೇಶ್ವರ ದೇವಸ್ಥಾನ ಹಾಗೂ ಕೊಟ್ಟೂರ ಬಸವೇಶ್ವರರ ದೇವಸ್ಥಾನವಿರುವ ಐತಿಹಾಸಿಕ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿನ ಕೆಲ ಶಾಸನಗಳೆ ಇದನ್ನು ಸಾಕ್ಷಿಕರಿಸುತ್ತವೆ. 23 ಜನೇವರಿ 1565ರಲ್ಲಿ ಅಹಮ್ಮದ ನಗರ, ಗೋಲ್ಕಂಡ ಸೇರಿದಂತೆ ಒಟ್ಟು ಐದೂ ಜನ ಬಹುಮನಿ ಸುಲ್ತಾನರು ಒಟ್ಟಾಗಿ ವಿಜಯನಗರ ಸಾಮ್ರಾಜ್ಯದ ಮೇಲೆ 27 ದಿನಗಳ ಕಾಲ ದಾಳಿ ನಡೆಸಿ ಅಳಿಯ ರಾಮರಾಯನು ಸೋಲು ಕಾಣುತ್ತಾನೆ. ಬಳಿಕ ರಾಮರಾಯನು ರಣಗಂಭವನ್ನು ನೆಟ್ಟು ಕೊನೆಯುಸಿರು ಬಿಡುತ್ತಾನೆ. ಮುಂದೆ ಒಂದು ವಾರದಲ್ಲಿ ಎಲ್ಲ ಸುಲ್ತಾನರು ಸೇರಿ ವಿಜಯನಗರ ಸಾಮಾಜ್ಯವನ್ನೇ ಲೂಟಿ ಮಾಡಿದ್ದು ಇದು ವಿಜಯನಗರ ಸಾಮ್ರಾಜ್ಯದ ಅವನತಿ ಕಾರಣವಾಗುತ್ತದೆ.

----------------

ಕೋಟ್.....ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಅರವಿಂದ ಹೂಗಾರ ಇತರೆ ಸಹಾಯಕ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಇತಿಹಾಸ ತಜ್ಞರ ನೇಮಕ ಮಾಡಿ ವಾಸ್ತವ ವರದಿ ಪಡೆದು ಎಲ್ಲೆಲ್ಲಿ ಐತಿಹಾಸಿಕ ಕ್ಷೇತ್ರಗಳಿವೆ ಅವುಗಳ ಸಮೀಕ್ಷೆ ನಡೆಸಲಾಗುತ್ತಿದೆ. ವಿಶೇಷ ಅನುದಾನ ನೀಡಲಾಗುವುದು. ಈ ಮೂಲಕ ಕೋಳೂರು ಗ್ರಾಮ ಸೇರಿ ತಂಗಡಗಿ, ಕೃಷ್ಣಾ ನದಿ ತೀರದ ಕೆಲ ಗ್ರಾಮಗಳು ಸೇರಿ ಕ್ಷೇತ್ರದಲ್ಲಿ ಹಲವಾರು ಐತಿಹಾಸಿಕ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಮಾಡಿ ಅಭಿವೃದ್ಧಿಪಡಿಸಲಾಗುವುದು.- ಎಚ್.ಕೆ.ಪಾಟೀಲ, ಪ್ರವಾಸೋದ್ಯಮ ಸಚಿವಮುದ್ದೇಬಿಹಾಳ ಕ್ಷೇತ್ರದ ರಸ್ತೆ, ಕುಡಿಯುವ ನೀರು ಸೇರಿ ಮೂಲಸೌಲಭ್ಯಗಳ ಅಭಿವೃದ್ಧಿ ಪಡಿಸುವುದರ ಜತೆಗೆ ಪ್ರವಾಸಿ ತಾಣವಾಗಿಸಬೇಕು ಎಂಬುದು ನನ್ನ ಕನಸು. ಈ ಹಿನ್ನೆಲೆಯಲ್ಲಿ ಕೋಳೂರು ಗ್ರಾಮದಲ್ಲಿ ಶಿಥಿಲಾವಸ್ಥೆಗೊಂಡಿರುವ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರಗೊಳಿಸಿ ಇತಿಹಾಸ ಉಳಿಸಬೇಕಿದೆ. ಮತಕ್ಷೇತ್ರದಲ್ಲಿ ಎಲ್ಲೆಲ್ಲಿ ಐತಿಹಾಸಿಕ ಕುರುಹುಗಳಿವೆ ಅವುಗಳನ್ನು ಸಚಿವ ಎಚ್.ಕೆ.ಪಾಟೀಲರ ಮೂಲಕ ಅಭಿವೃದ್ಧಿ ಪಡೆಸಲು ತಿರ್ಮಾನಿದೆ. ಆದಷ್ಟು ಬೇಗ ಈ ಕಾರ್ಯವನ್ನು ಪ್ರಾರಂಭಿಸಲಾಗುವುದು.ಸಿ.ಎಸ್‌.ನಾಡಗೌಡ(ಅಪ್ಪಾಜಿ), ಶಾಸಕರು, ಕೆಎಸ್‌ಡಿಎಲ್‌

ಸಚಿವರಾದ ಎಚ್.ಕೆ.ಪಾಟೀಲರು ಕೋಳೂರು ಗ್ರಾಮಕ್ಕೆ ಭೇಟಿ ನೀಡಿ ರಾಮರಾಯನ ಕುರಿತಾಗಿರುವ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ನೀಡಲು ಸೂಚಿಸಿದ್ದಾರೆ. ಅದರಂತೆ ವಾರದೊಳಗಾಗಿ ಸಮಗ್ರ ವರದಿ ತಯಾರಿಸಿ ಎಷ್ಟು ಅನುದಾನ ಬೇಕಾಗುತ್ತದೆ, ಯಾವ ಯಾವ ಸ್ಥಳಗಳಲ್ಲಿ ಸ್ಮಾರಕಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಸಚಿವರಿಗೆ ತಿಳಿಸಲಾಗುವುದು. ಇದಕ್ಕೆ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಪರಿಶ್ರಮವೇ ಮುಖ್ಯ ಕಾರಣ.- ಅರವಿಂದ ಹೂಗಾರ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ

--------------