ಮಹಿಳೆಯ 10 ಗ್ರಾಂ ಚಿನ್ನದ ಸರ ಮರಳಿಸಿದ ಸಾರಿಗೆ ಅಧಿಕಾರಿ

| Published : Sep 12 2025, 01:00 AM IST

ಸಾರಾಂಶ

ಮಹಾಲಿಂಗಪುರ ನಗರದ ಬಸ್ ನಿಲ್ದಾಣದಲ್ಲಿ ಮಹಿಳೆ ಕಳೆದುಕೊಂಡಿದ್ದ ಸಿಕ್ಕ 10 ಗ್ರಾಂ ಚಿನ್ನದ ಸರವನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಹಾಲಿಂಗಪುರ ಬಸ್‌ ನಿಲ್ದಾಣದ ನಿಯಂತ್ರಣಾಧಿಕಾರಿ ಎಸ್‌.ಪಿ. ಜಂಬಗಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನಗರದ ಬಸ್ ನಿಲ್ದಾಣದಲ್ಲಿ ಮಹಿಳೆ ಕಳೆದುಕೊಂಡಿದ್ದ ಸಿಕ್ಕ 10 ಗ್ರಾಂ ಚಿನ್ನದ ಸರವನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಹಾಲಿಂಗಪುರ ಬಸ್‌ ನಿಲ್ದಾಣದ ನಿಯಂತ್ರಣಾಧಿಕಾರಿ ಎಸ್‌.ಪಿ. ಜಂಬಗಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗುರುವಾರ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಗಡಿಬಿಡಿಯಲ್ಲಿ ಹೋಗುವಾಗ 10 ಗ್ರಾಂ ಚಿನ್ನದ ಬೋರಮಾಳ ಕಳೆದುಕೊಂಡಿದ್ದರು. ಚಿನ್ನದ ಸರ ಬಿದ್ದಿರುವುದನ್ನು ನೋಡಿದ ನಿಯಂತ್ರಣಾಧಿಕಾರಿ ಜಂಬಗಿ ಅವರು ಅಲ್ಲಿಯೇ ಸರ ಹುಡುಕಾಡುತ್ತಿದ್ದ ಮಹಿಳೆಯನ್ನು ಕರೆದು ಮರಳಿ ಒಪ್ಪಿಸಿದ್ದಾರೆ. ಬಸ್ ನಿಲ್ದಾಣ ಅಧಿಕಾರಿಯ ಪ್ರಾಮಾಣಿಕತೆಗೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.