ಸತ್ಯ ಆಧಾರಿತ ಹಿತ ನೀಡುವುದೇ ಧರ್ಮ: ನಾರಾಯಣ

| Published : Oct 18 2024, 12:03 AM IST

ಸಾರಾಂಶ

ಚಿಕ್ಕಮಗಳೂರು, ಪರಸ್ಪರ ನೋವು ಮತ್ತು ನಲಿವಿನಲ್ಲಿ ಭಾಗವಹಿಸುವುದು, ಮಾನವೀಯತೆ ನಿಜವಾದ ಧರ್ಮ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪರಸ್ಪರ ನೋವು ಮತ್ತು ನಲಿವಿನಲ್ಲಿ ಭಾಗವಹಿಸುವುದು, ಮಾನವೀಯತೆ ನಿಜವಾದ ಧರ್ಮ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಹೇಳಿದ್ದಾರೆ.ನಗರದ ಹೊಟೆಲ್ ಗ್ರ್ಯಾಂಡ್ ಕೃಷ್ಣದ ಸಭಾಂಗಣದಲ್ಲಿ ಬುಧವಾರ ಸಂಜೆ ಮಂಥನ ಸಂಸ್ಥೆ ಆಯೋಜಿಸಿದ್ದ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಸಂಸ್ಕೃತಿ ಎಂಬ ವಿಷಯ ಕುರಿತು ಮಾತನಾಡಿದ ಅವರು, ಧರ್ಮ ಬೇರೆ, ಮತ ಬೇರೆ. ಧರ್ಮಕ್ಕೂ ಮತಕ್ಕೂ ಅಜಗಜಾಂತರ ವ್ಯತ್ಯಾಸಗಳು ಇವೆ ಎಂದರು.ಧರ್ಮದ ಬಗ್ಗೆ ಮಾತನಾಡುವಾಗ ಕೋಲಾಹಲ ಮತ್ತು ಅಶಾಂತಿ ಸೃಷ್ಟಿಯಾಗುವ ಸಾಧ್ಯತೆಗಳು ಇರುತ್ತವೆ. ಧರ್ಮ ಎಂಬುದು ಸತ್ಯ ಆಧಾರಿತ ವಾಗಿದೆ. ಧರ್ಮಕ್ಕೆ ಮಿತಿ ಎಂಬುದು ಇರುವುದಿಲ್ಲ. ಧರ್ಮ ಹಿತ ಉಂಟು ಮಾಡುತ್ತದೆ. ಅಹಿತ ಉಂಟು ಮಾಡುವುದು ಅಧರ್ಮವಾಗುತ್ತದೆ ಎಂದು ಬಣ್ಣಿಸಿದರು.ದೋಷ ರಹಿತ ಮನುಷ್ಯನ ವಿಕಾಸಕ್ಕೆ ಯಾವುದು ಬೇಕೋ ಅದು ಸಂಸ್ಕೃತಿ. ಸಂಸ್ಕೃತಿ ಮತ್ತು ಸಂಸ್ಕಾರದಿಂದ ಮೌಲ್ಯ ಹೆಚ್ಚುತ್ತದೆ ಎಂದ ಅವರು, ನಮ್ಮ ಶಿಕ್ಷಣ ಮಾಧ್ಯಮ ಇಂಗ್ಲೀಷರು ಕೊಟ್ಟ ಕನ್ನಡಕದಲ್ಲಿ ನೋಡುತ್ತಿರುವುದರಿಂದ ಸಂಸ್ಕೃತಿ, ಸಂಸ್ಕಾರದ ಕೊರತೆ ಕಾಣುತ್ತಿದೆ ಎಂದರು.ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾಹಿತ್ಯ ಮತ್ತು ಶಿಕ್ಷಣ ವಲಯದ ಹಲವರು ಭಾಗವಹಿಸಿದ್ದರು. ಮಂಥನ ಬಳಗದ ವಿಕ್ರಮ್ ಸ್ವಾಗತಿಸಿ, ನಿರೂಪಿಸಿದರು. 17 ಕೆಸಿಕೆಎಂ 4ಚಿಕ್ಕಮಗಳೂರು ನಗರದ ಹೊಟೆಲ್ ಗ್ರ್ಯಾಂಡ್ ಕೃಷ್ಣದ ಸಭಾಂಗಣದಲ್ಲಿ ಬುಧವಾರ ಸಂಜೆ ಮಂಥನ ಸಂಸ್ಥೆ ಆಯೋಜಿಸಿದ್ದ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಸಂಸ್ಕೃತಿ ಎಂಬ ವಿಷಯ ಕುರಿತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿದರು.