ಉಡುಪಿ: ಗೋಪಾಲಕೃಷ್ಣನ ಸಾನ್ನಿಧ್ಯದಲ್ಲಿ ಗೋಪೂಜೆ

| Published : Oct 24 2025, 01:00 AM IST

ಸಾರಾಂಶ

ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಂಗವಾಗಿ ಬುಧವಾರ ಗೋಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಂಗವಾಗಿ ಬುಧವಾರ ಗೋಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.

ಆ ಪ್ರಯುಕ್ತ ಕನಕ ಗೋಪುರದ ಎದುರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತೊಳೆದು ಅಲಂಕರಿಸಲಾದ ಮಠದ ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ನೀಡಿದರು. ನಂತರ ರಥಬೀದಿಯ ಸುತ್ತಲೂ ಗೋವುಗಳ ವೈಭವದ ಮೆರವಣಿಗೆ ನಡೆಯಿತು.ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠದ ಆವರಣದಲ್ಲಿ ಸಂಕಲ್ಪ ಸಹಿತ ಸಾಮೂಹಿಕ ಗೋಪೂಜೆ ಕಾರ್ಯಕ್ರಮವು ನಡೆಯಿತು. ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು, ನೂರಾರು ಮಂದಿ ಗೋಭಕ್ತರು ಭಾಗವಹಿಸಿದ್ದರು.