ಕಾಪು: ಪ್ರಥಮ ತೆಂಕ-ಬಡಾ ಕಂಬ‍ಳ ಕರೆಗೆ ಗುದ್ದಲಿ ಪೂಜೆ

| Published : Oct 24 2025, 01:00 AM IST

ಸಾರಾಂಶ

ಎರ್ಮಾಳು ಗ್ರಾಮದಲ್ಲಿ ಪ್ರಥಮ ಬಾರಿಗೆ ಆಧುನಿಕ ಕಂಬಳ ನಡೆಯಲು ಸಿದ್ಧತೆಗಳಾಗುತ್ತಿದ್ದು, ತೆಂಕ-ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಇಲ್ಲಿನ ಬಡಾಕೊಟ್ಟು ಬಾಕಿಮಾರು ಗದ್ದೆಯಲ್ಲಿ ಗುದ್ದಲಿ ಪೂಜೆ ನಡೆಯಿತು. ವೇದಮೂರ್ತಿ ಬೆಳ್ಮಣ್‌ ವಿಘ್ನೇಶ್‌ ಭಟ್‌ ನೇತೃತ್ವದಲ್ಲಿ ಎರ್ಮಾಳು ಶ್ರೀ ಜನಾರ್ದನ ದೇಗುಲದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌ ಪೂಜಾವಿಧಿಗಳನ್ನು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಎರ್ಮಾಳು ಗ್ರಾಮದಲ್ಲಿ ಪ್ರಥಮ ಬಾರಿಗೆ ಆಧುನಿಕ ಕಂಬಳ ನಡೆಯಲು ಸಿದ್ಧತೆಗಳಾಗುತ್ತಿದ್ದು, ತೆಂಕ-ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಇಲ್ಲಿನ ಬಡಾಕೊಟ್ಟು ಬಾಕಿಮಾರು ಗದ್ದೆಯಲ್ಲಿ ಗುದ್ದಲಿ ಪೂಜೆ ನಡೆಯಿತು.ವೇದಮೂರ್ತಿ ಬೆಳ್ಮಣ್‌ ವಿಘ್ನೇಶ್‌ ಭಟ್‌ ನೇತೃತ್ವದಲ್ಲಿ ಎರ್ಮಾಳು ಶ್ರೀ ಜನಾರ್ದನ ದೇಗುಲದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌ ಪೂಜಾವಿಧಿಗಳನ್ನು ನೆರವೇರಿಸಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ತೆಂಕ-ಬಡಾ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಫೆ.28ರಂದು ಈ ಕಂಬಳ ನಡೆಯಲಿದೆ. ಈ ಕರೆ ನಿರ್ಮಾಣಕ್ಕೆ 12 ಎಕರೆ ಜಮೀನು ಗುರುತಿಸಲಾಗಿದೆ ಎಂದರು.ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಈ ಬಾರಿ ಪ್ರತಿ ಕಂಬಳಗಳನ್ನು ಪ್ರಾಯೋಜಕರ ಮೂಲಕ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಮಾತನಾಡಿ, 600 ವರ್ಷಗಳಿಂದ ಇಲ್ಲಿ ಕಂಬಳ ನಡೆಯುತ್ತಿತ್ತು, 4 ದಶಕಗಳಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ತೆಂಕ-ಬಡಾ ಜೋಡುಕರೆ ಕಂಬಳ ಪ್ರಾರಂಭಗೊಳ್ಳುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.ಕಂಬಳ ನಿರೂಪಕ ವಿಜಯ ಕುಮಾರ್ ಜೈನ್, ತೆಂಕ ಎರ್ಮಾಳು ಗ್ರಾ.ಪಂ. ಅಧ್ಯಕ್ಷೆ ಸುರೇಖಾ, ಮಾಜಿ ಅಧ್ಯಕ್ಷೆ ಕಸ್ತೂರಿ ಪ್ರವೀಣ್‌, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪುಚ್ಚೊಟ್ಟು ಬೀಡು ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಪುಚ್ಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಪ್ರಧಾನ‌ ಕಾರ್ಯದರ್ಶಿ ಸುರೇಶ್‌ ಜಿ. ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬರ್ಪಾಣಿ, ಪ್ರಮುಖರಾದ ಜಗಜೀವನ್ ಚೌಟ, ಕಿಶೋರ್‌ ಶೆಟ್ಟಿ ಪೇಟೆಮನೆ, ವೈ, ಶಶಿಧರ ಶೆಟ್ಟಿ, ಜಾನ್‌ ವಿ ಪೆರ್ನಾಂಡೀಸ್‌, ಶರೀಫ್‌ ಜಿನ್ರಾಜ್, ಯೂ. ಸಿ. ಸೇಕಬ್ಬ ಮತ್ತಿತರರು ಉಪಸ್ಥಿತರಿದ್ದರು.