ಸಾರಾಂಶ
ಕೊಡಗು ಜಿಲ್ಲಾ ಮಹಾ ಸಂಗಮದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಸಿದ್ದಾಪುರದ ಅರೆಕಾಡುವಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಂತಾರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಚಾರದ ಮಹಾ ಸಮ್ಮೇಳನವು ನವೆಂಬರ್ 29ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಸಮ್ಮೇಳನದ ಪ್ರಚಾರದ, ಕೊಡಗು ಜಿಲ್ಲಾ ಮಹಲ್ ಸಂಗಮದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಸಿದ್ದಾಪುರದ ಅರೆಕಾಡುವಿನಲ್ಲಿ ನಡೆಯಿತು. ಜಮಾಅತ್ ಅಧ್ಯಕ್ಷ ಮೂಸ ಅಧ್ಯಕ್ಷತೆಯನ್ನು ವಹಿಸಿದ್ದರು.ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ
ಎಂ. ಅಬ್ದುಲ್ಲ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಹಲ್ ಖತೀಬರಾದ ಹನೀಫ್ ಫೈಝಿ ಸ್ವಾಗತಿಸಿದರು.ಸಮಸ್ತ ಶತಮಾನಗಳಿಂದ " ಎಂಬ ವಿಷಯದ ಕುರಿತು ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಪಿ.ಎಂ ಆರಿಫ್ ಫೈಝಿ ಮಾತನಾಡಿದರು. ನೆಲ್ಲಿಹುದಿಕೇರಿ ಖತೀಬರಾದ ಸ್ವಾಗತ ಸಮಿತಿ ಸದಸ್ಯರಾದ ರವೂಫ್ ಹುದವಿ "ಆದರ್ಶ ಪರಿಶುದ್ಧತೆ " ಎಂಬ ವಿಷಯದ ಕುರಿತು ಮಾತನಾಡಿದರು. ಮಹಲ್ ಕಾರ್ಯದರ್ಶಿ ಯೂಸುಫ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮದರಸ ಸದರ್ ಮುಅಲ್ಲಿಂ ಅಝೀಝ್ ಬಾಖವಿ ಮತ್ತು ಎಸ್ ಕೆ ಎಸ್ ಎಸ್ ಎಫ್ ಕಾರ್ಯಕರ್ತರ, ಮಹಲ್ ಜಮಾಅತಿನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕೊಡಗು ಜಿಲ್ಲಾ ಸಮ್ಮೇಳನದ ಸಂಚಾಲಕರಾದ ವೈ.ಎಂ ಉಮ್ಮರ್ ಫೈಝಿ ಕಾರ್ಯಕ್ರಮದಲ್ಲಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))