ಉಡುಪಿ: ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠ, ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರ, ಅನ್ನಪೂರ್ಣ ನರ್ಸರಿ ಪೇತ್ರಿ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ಪಂಚ ಪವಿತ್ರ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು.ಪರ್ಯಾಯ ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಈ ಅಭಿಯಾನಕ್ಕೆ ಚಾಲನೆ ನೀಡಿ, ಈ ರೀತಿಯ ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶೀರ್ವಚನ ನೀಡಿದರು.

ಸಂಘಟಕ ಮಧುಸೂದನ್ ಹೇರೂರು ಈ ಪಂಚ ಪವಿತ್ರ ಗಿಡಗಳನ್ನು ದೇವಸ್ಥಾನಗಳು, ದೈವಸ್ಥಾನ, ಗರಡಿಗಳು ಮತ್ತು ನಾಗಬನಗಳಿಗೆ ನೀಡುವ ಕಾರ್ಯಕ್ರಮ ಇದಾಗಿದ್ದು, ಈ ಮೂಲಕ ಪರಿಸರಕ್ಕೆ ನಾವೆಲ್ಲರೂ ಕೊಡುಗೆ ನೀಡಬೇಕಾಗಿದೆ ಎಂದು ಹೇಳಿದರು.ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಗ್ರಾಪಂ ಮಾಜಿ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್, ಜಯಂಟ್ಸ್ ಗ್ರೂಪ್ ಘಟಕ ನಿರ್ದೇಶಕ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಅಧ್ಯಕ್ಷ ಅಣ್ಣಯ್ಯದಾಸ್, ಶ್ರೀನಾಥ್ ಕೋಟ, ವಿವೇಕಾನಂದ ಕಾಮತ್, ರತ್ನ ಶ್ರೀನಾಥ್, ಮಾಜಿ ಫೆಡರೇಶನ್ ಅಧ್ಯಕ್ಷ ತೇಜೇಶ್ವರ್ ರಾವ್ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.ಕಿಷ್ಕರ, ಮಂದಾರ ಸೂರಿಗೆ, ನಾಗಸಂಪಿಗೆ, ರೆಂಜ, ಬಿಲ್ಪಪತ್ರೆ, ಮಾದ್ರಫಲ, ಮಲ್ಲಿಗೆ ಸೀತಾ, ಆಶೋಕ ಮತ್ತಿತರ ವಿಶೇಷ ಸ್ಪಂದನೆ ನೀಡುವ ಸುಮಾರು 500 ಪವಿತ್ರ ವೃಕ್ಷಗಳನ್ನು ಸುಮಾರು 70 ಆರಾಧನಾ ಕೇಂದ್ರಗಳಿಗೆ ನೀಡಲಾಯಿತು.