ನೆತ್ತಿ ಮೇಲೆ ಕೆಂಡದ ಮಳೆ ಮಧ್ಯಯೂ ಭರ್ಜರಿ ಯುಗಾದಿ ಖರೀದಿ

| Published : Apr 09 2024, 12:49 AM IST

ನೆತ್ತಿ ಮೇಲೆ ಕೆಂಡದ ಮಳೆ ಮಧ್ಯಯೂ ಭರ್ಜರಿ ಯುಗಾದಿ ಖರೀದಿ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೆ ನಾಡು ಚಿತ್ರದುರ್ಗದಲ್ಲಿ ಈ ಬಾರಿ ಉಷ್ಣಾಂಶ 40 ಡಿಗ್ರಿಯಷ್ಟು ದಾಟಿದೆ. ನೆತ್ತಿ ಮೇಲೆ ಕೆಂಡದ ಮಳೆ ಸುರಿಯುತ್ತಿದರೂ ಯುಗಾದಿ ಹಬ್ಬದ ಖರೀದಿ ಭರಾಟೆಯಲ್ಲಿ ಅಂತಹ ಇಳಿಮುಖ ಕಂಡು ಬರಲಿಲ್ಲ. ಬಿಸಿಲ ಬೇಗೆಯ ಹೈರಾಣದ ನಡುವೆಯೂ ಜನತೆ ಅತ್ಯಂತ ಸಂಭ್ರದಿಂದ ಖರೀದಿಯಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಕೋಟೆ ನಾಡು ಚಿತ್ರದುರ್ಗದಲ್ಲಿ ಈ ಬಾರಿ ಉಷ್ಣಾಂಶ 40 ಡಿಗ್ರಿಯಷ್ಟು ದಾಟಿದೆ. ನೆತ್ತಿ ಮೇಲೆ ಕೆಂಡದ ಮಳೆ ಸುರಿಯುತ್ತಿದರೂ ಯುಗಾದಿ ಹಬ್ಬದ ಖರೀದಿ ಭರಾಟೆಯಲ್ಲಿ ಅಂತಹ ಇಳಿಮುಖ ಕಂಡು ಬರಲಿಲ್ಲ. ಬಿಸಿಲ ಬೇಗೆಯ ಹೈರಾಣದ ನಡುವೆಯೂ ಜನತೆ ಅತ್ಯಂತ ಸಂಭ್ರದಿಂದ ಖರೀದಿಯಲ್ಲಿ ಪಾಲ್ಗೊಂಡರು.ಯುಗಾದಿ ಹಬ್ಬದಕ್ಕೆ ಹೊಸ ಬಟ್ಟೆ ಖರೀದಿ ಮಾಮೂಲು. ಹಾಗಾಗಿಯೇ ಚಿತ್ರದುರ್ಗದ ಲಕ್ಷ್ಮಿಬಜಾರ್ ಜನರಿಂದ ತುಂಬಿ ತುಳುಕಾಡುತ್ತಿತ್ತು. ಗಾಂಧಿ ವೃತ್ತ, ಸಂತೆ ಬಾಗಿಲು ರಸ್ತೆ ಎಲ್ಲ ಕಡೆ ಜನವೋ ಜನ. ಗಾಂಧಿ ವೃತ್ತದ ಬಳಿ ಬಾಗಿಲ ತೋರಣ, ಉಡುದಾರ, ಬಳೆ, ಮಹಿಳೆಯರ ಅಲಂಕಾರಿಕ ಸಾಮಾಗ್ರಿ ಸೇರಿದಂತೆ ನಾನಾ ವಸ್ತುಗಳನ್ನು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಉರಿ ಬಿಸಿಲಿನಲ್ಲಿಯೂ ನಾಗರಿಕರು ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿರುವ ಹೂವು, ಹಣ್ಣು, ಮಾವು, ಬೇವು, ಬಾಳೆ ಎಲೆ, ತರಕಾರಿ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಖರೀದಿಸಿದರು. ಸೋಮವಾರ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿಯಿಂದ ಗಿಜಿಗುಡುವ ವಾತಾವರಣ ಸೃಷ್ಟಿಯಾಗಿತ್ತು. ಸಂತೆ ಹೊಂಡದ ಬಳಿಯ ಮಾರುಕಟ್ಟೆ, ಸೂಪರ್ ಮಾರ್ಕೆಟ್ ಹಾಗೂ ಗಾಂಧಿ ಮಾರುಕಟ್ಟೆ ಸಮೀಪ ಸೇಬು, ದ್ರಾಕ್ಷಿ, ಕಿತ್ತಳೆ, ಬಾಳೆ, ತರಕಾರಿ, ಹೂವು ಸೇರಿ ಮತ್ತಿತರ ವಸ್ತು ಕೊಳ್ಳಲು ನಾಗರಿಕರು ಮುಗಿಬಿದ್ದಿದ್ದರು. ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟಗಳು ಜನ ಜಂಗುಳಿಯಿಂದ ಕೂಡಿದ್ದವು. ಹಬ್ಬದಲ್ಲಿ ಸಿಹಿ ಭಕ್ಷ್ಯ ಭೋಜನ ತಯಾರಿಸಲು ಅಗತ್ಯವಾಗಿ ಬೇಕಾದ ದಿನಸಿ ಹಾಗೂ ಅಡುಗೆ ಸಾಮಗ್ರ ಖರೀದಿ ಭರಾಟೆ ಕೂಡಾ ಜೋರಾಗಿತ್ತು. ಎಲ್ಲ ದಿನಸಿ ಅಂಗಡಿಗಳಲ್ಲಿ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ ಮತ್ತಿತರ ಅಡುಗೆ ಸಾಮಾಗ್ರಿಗಳನ್ನು ಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು. ಯುಗಾದಿ ಹಬ್ಬದ ಮುನ್ನಾ ದಿನವಾದ ಸೋಮವಾರ ಅಮವಾಸೆ ಪೂಜೆ ನೇರವೇರಿಸಿದರು. ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನೇರವೇರಿಸಲಾಯಿತು.