ಕೃಷಿ ಪ್ರದಾನವಾಗಿರುವ ತಾಲೂಕಿನಲ್ಲಿ ಸರ್ಕಾರವು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡಬಾರದು ಎಂದು ಸೇಡಂನ ಉಪ ಕೃಷಿ ನಿದೇರ್ಶಕಿ ಅನುಸೂಯಾ ಹೂಗಾರ ಮತ್ತು ತಹಸೀಲ್ದಾರ ನಾಗಯ್ಯ ಹಿರೆಮಠ ಹೇಳಿದರು.

ಕನ್ನಡ ಪ್ರಭವಾರ್ತೆ ಚಿತ್ತಾಪುರ

ಕೃಷಿ ಪ್ರದಾನವಾಗಿರುವ ತಾಲೂಕಿನಲ್ಲಿ ಸರ್ಕಾರವು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡಬಾರದು ಎಂದು ಸೇಡಂನ ಉಪ ಕೃಷಿ ನಿದೇರ್ಶಕಿ ಅನುಸೂಯಾ ಹೂಗಾರ ಮತ್ತು ತಹಸೀಲ್ದಾರ ನಾಗಯ್ಯ ಹಿರೆಮಠ ಹೇಳಿದರು.

ಕೃಷಿ ಪರಿಕರ ಮಳಿಗೆಗಳಿಗೆ ಜಂಟಿಯಾಗಿ ದಿಢೀರ್‌ ಭೆಟ್ಟಿ ನೀಡಿದ ಅವರು ತಾಲೂಕಿನ ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳು ಸೇರಿದಂತೆ ಯಾವುದೇ ಕೃಷಿ ಪರಿಕರ ಖರೀದಿ ಮಾಡುವಾಗ ಮೋಸ ಹೊಗಬಾರದು ಮತ್ತು ಹೆಚ್ಚಿನ ದರಗಳನ್ನು ನೀಡಬಾರದು ಎನ್ನುವ ಉದ್ದೇದಿಂದ ಅವರಿಗೆ ಜಾಗೃತಿ ಮೂಡಿಸುವ ಹಾಗೂ ಪರಿಕರ ಮಳಿಗೆಗಳಿಗೆ ದಿಢೀರ್‌ ಭೇಟಿ ನೀಡಿ ಅಲ್ಲಿ ವಸ್ತುಸ್ಥಿತಿ ಮಾಹಿತಿ ಪಡೆಯಲಾಗುತ್ತಿದೆ. ಅಂಗಡಿಗಳಲ್ಲಿ ಇರುವ ದರಪಟ್ಟಿಯಂತೆ ಪರಿಕರಗಳನ್ನು ನೀಡಬೇಕು ಎಂದರು.

ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಮತ್ತು ಅವರ ಪರವಾನಿಗೆಯನ್ನು ರದ್ದು ಮಾಡುವಂತಹ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಕರಣಕುಮಾರ, ರವೀಂದ್ರಕುಮಾರ, ಅಪರಾಧ ವಿಭಾಗದ ಪಿಎಸ್‌ಐ ಚಂದ್ರಮಪ್ಪಾ ಬಳಿಚಕ್ರ, ಕಂದಾಯ ನಿರೀಕ್ಷಕ ಮಹ್ಮದ ಸುಭಾನ ಇದ್ದರು.