ಮದ್ದೂರು ತಾಲೂಕಿನಲ್ಲಿ ಶೂನ್ಯದಿಂದ ಐದು ವರ್ಷ ಒಳಗಿನ 13 ಸಾವಿರ ಮಕ್ಕಳು ಇದ್ದು, ಪೋಷಕರು ತಪ್ಪದೇ ತಮ್ಮ ಮಕ್ಕಳನ್ನು ಪೋಲಿಯೋ ಲಸಿಕಾಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸುವ ಮೂಲಕ ರೋಗದಿಂದ ಮುಕ್ತರಾಗಲು ಸಹಕಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಶಾಶ್ವತ ಅಂಗ ಅಂಗವೈಕಲ್ಯ ಉಂಟು ಮಾಡುವ ಮಾರಕ ರೋಗವನ್ನು ಬುಡ ಸಮೇತ ಕಿತ್ತೆಸದು ಪೋಲಿಯೋ ಮುಕ್ತ ಭಾರತಕ್ಕಾಗಿ ಪ್ರತಿಯೊಬ್ಬರ ಸಹಭಾಗಿತ್ವ ಅತ್ಯಗತ್ಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ತಾಲೂಕು ಆರೋಗ್ಯ ಇಲಾಖೆ ಮತ್ತು ರೋಟರಿ ಸಂಸ್ಥೆ ಸಭಾಗಿತ್ವದಲ್ಲಿ ಭಾನುವಾರ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತ ಈಗಾಗಲೇ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿದೆ. ಆದರೂ ಸಹ ಮುಂದಿನ ದಿನಗಳಲ್ಲಿ ಪೋಲಿಯೋ ದೇಶದಲ್ಲಿ ಕಾಣಿಸಿಕೊಳ್ಳದಂತೆ ಜನಸಾಮಾನ್ಯರಲ್ಲಿ ಮೂಡಿಸಬೇಕು ಎಂದರು.
ತಾಲೂಕಿನಲ್ಲಿ ಶೂನ್ಯದಿಂದ ಐದು ವರ್ಷ ಒಳಗಿನ 13 ಸಾವಿರ ಮಕ್ಕಳು ಇದ್ದು, ಪೋಷಕರು ತಪ್ಪದೇ ತಮ್ಮ ಮಕ್ಕಳನ್ನು ಪೋಲಿಯೋ ಲಸಿಕಾಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸುವ ಮೂಲಕ ರೋಗದಿಂದ ಮುಕ್ತರಾಗಲು ಸಹಕಾರ ನೀಡಬೇಕು ಎಂದರು.ತಾಲೂಕು ಅರೋಗ್ಯ ಅಧಿಕಾರಿ ಡಾ.ರವಿಶಂಕರ್ ಮಾತನಾಡಿ, ಇಂದಿನಿಂದ ಜುಲೈ 1ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಇಂದು ಸಿ.ಎ.ಕೆರೆ, ಕೊಪ್ಪ, ಆತಗೂರು ಹಾಗೂ ಕಸಬಾ ಹೋಬಳಿಗಳ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು.
ಈ ವೇಳೆ ನೋಡಲ್ ಅಧಿಕಾರಿ ಡಾ.ಬೆಟ್ಟಸ್ವಾಮಿ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮಣಿ, ಆರೋಗ್ಯ ಶಿಕ್ಷಣಾಧಿಕಾರಿ ಮರಿಸ್ವಾಮಿ, ನಿರೀಕ್ಷಕ ತಮ್ಮೆಗೌಡ, ರೋಟರಿ ಅಧ್ಯಕ್ಷ ಬಿಂದಾಸ್ ಶ್ರೀನಿವಾಸ್, ಸದಸ್ಯರಾದ ಮಹೇಶ್, ಶಶಿ ಗೌಡ, ಯೋಗೇಶ್, ಪ್ರತಾಪ್, ರೋಟರಿ ಇನ್ನರ್ ವೀಲ್ ಅಧ್ಯಕ್ಷ ಶ್ವೇತಾ ಶಶಿ ಗೌಡ, ಸದಸ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.