ಚಾಮರಾಜನಗರ ತಾಲೂಕಿನ ಬೆಟ್ಟದಪುರ ಗ್ರಾಮದ ಕೃಷಿಕರ ಮಕ್ಕಳಿಂದ ಸಮಾಜಮುಖಿ ಮದುವೆ---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಪಡುಗೂರು ಅಡವಿ ಮಠದಲ್ಲಿ ಸೋಮವಾರ ಚಾಮರಾಜನಗರ ತಾಲೂಕಿನ ಬೆಟ್ಟದಪುರ ಗ್ರಾಮದ ಕೃಷಿಕ ಮಕ್ಕಳಾದ ಸಹನಾ ಮತ್ತು ಮಹದೇವಸ್ವಾಮಿ ಸ್ವಇಚ್ಛೆಯಿಂದ ಬಸವ ಪ್ರಣೀತ ಅಷ್ಠಾವರಣ ಮಾರ್ಗದಲ್ಲಿ ಪಡಗೂರು ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಮಾದಾಪಟ್ಟಣ ವಿರಕ್ತ ಮಠಾಧೀಶ ತೋಂಟದಾರ್ಯ ಸ್ವಾಮೀಜಿ, ಮೂಡುಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನ ಸ್ವಾಮೀಜಿ ಹಾಗೂ ಕಬ್ಬಹಳ್ಳಿ ಜಂಗಮ ಮಠಾಧೀಶ ಗುರುಸಿದ್ಧ ಸ್ವಾಮೀಜಿ ಸಮ್ಮುಖದಲ್ಲಿ ವಚನ ಕಲ್ಯಾಣ ಮಹೋತ್ಸವದಲ್ಲಿ ನೂತನ ಸತಿ, ಪತಿಗಳಾದರು.ಸರಳವಾಗಿ ಸರ ಸಾಮೋದದೊಂದಿಗೆ ವಚನಗಳ ಗಾಯನ ಗಂಗೆಯಲ್ಲಿ ನಡೆದ ವಚನ ಮಾಂಗಲ್ಯದ ಮೂಲಕ ವಿವಾಹವನ್ನು ಪಡಗೂರು, ಬೆಟ್ಟದಪುರ ಗ್ರಾಮದ ಶರಣ, ಶರಣೆಯರು ಹಾಗೂ ನೂತನ ವಧು, ವರರ ಕುಟುಂಬಸ್ಥರು ಕಣ್ತುಂಬಿಕೊಂಡರು.

ಮೂಡುಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನ ಸ್ವಾಮೀಜಿ ಸಾರಥ್ಯದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್‌ (ಶೈಲೇಶ್) ನಿರೂಪಣೆ ನಡೆಸಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೂರದಹಳ್ಳಿ ಪ್ರಸಾದ್ ಸ್ವಾಗತಿಸಿದರು. ಕಟ್ನವಾಡಿ ಮಲೆಮಾದಪ್ಪ, ರಮೇಶ್, ಹೂರದಹಳ್ಳಿ ದೇವಪ್ಪ ತಂಡ ಭಜನೆ ನಡೆಸಿಕೊಟ್ಟಿತು. ಈ ಸಮಯದಲ್ಲಿ ಕಬ್ಬಹಳ್ಳಿ ಮಹೇಶ್, ಕಾಶಿಬುದ್ಧಿ ಕುಲಗಾಣ ಉಪಸ್ಥಿತರಿದ್ದರು.

---ಬಾಳು ಬಂಗಾರವಾಗಲಿ: ಪಡಗೂರು ಶ್ರೀ

ಗುಂಡ್ಲುಪೇಟೆ: ಇಂದಿನ ದುಬಾರಿ ಯುಗದಲ್ಲಿ ಸರಳ ವಿವಾಹ ಮೂಗು ಮುರಿಯುವವರ ನಡುವೆ ನಾವು ‘ವಚನ ಕಲ್ಯಾಣʼ ಪದ್ಧತಿಯಲ್ಲಿ ಮದುವೆ ಆಗಲು ಸ್ವಇಚ್ಛೆಯಿಂದ ಬಂದ ನೂತನ ದಂಪತಿಗಳ ಬಾಳು ಬಂಗಾರವಾಗಲಿ ಎಂದು ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಆಶೀರ್ವದಿಸಿದರು.


ವಚನ ಮಾಂಗಲ್ಯದ ಮೂಲಕ ಚಾಮರಾಜನಗರ ತಾಲೂಕಿನ ಬೆಟ್ಟದಪುರದ ಸಹನಾ ಮತ್ತು ಮಹದೇವಸ್ವಾಮಿ ನವ ಜೋಡಿಗಳಾಗಿದ್ದು, ಅದ್ಧೂರಿ ಹಾಗೂ ಆಡಂಬರದ ಮದುವೆ ಆಗುವವರಿಗೆ ಈ ಜೋಡಿ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿಕರಾದರೂ ನಾವೇನು ಕಡಿಮೆ ಎಂದುಕೊಂಡು ಹಲವರು ಸಾಲ ಮಾಡುವ ಜೊತೆಗೆ ಇರುವ ಒಂದೋ, ಎರಡೋ ಎಕರೆ ಮಾರಿ ಅದ್ಧೂರಿ ಮದುವೆಯಾಗುವ ಬದಲು ಬದುಕಿಗೊಂದು ಆಧಾರ ಉಳಿಸಿಕೊಳ್ಳುವ ಜಾಣತನ ಈ ಮಕ್ಕಳದ್ದಾಗಿದೆ ಎಂದರು.

ವಚನ ಮಾಂಗಲ್ಯದ ಮೂಲಕ ಮದುವೆ ಆಗಲು ಇಚ್ಛಿಸುವ ವಧು, ವರರ ಬೆಂಬಲಕ್ಕೆ ಸಮಾಜ ನಿಲ್ಲುವ ಮೂಲಕ ಆಡಂಬರದ ಮದುವೆಗೆ ತೀಲಾಂಜಲಿ ನೀಡಲಿ ಎಂದು ಸಲಹೆ ನೀಡಿದರು.

---

22ಜಿಪಿಟಿ2

ಗುಂಡ್ಲುಪೇಟೆ ತಾಲೂಕಿನ ಪಡಗೂರು ಅಡವಿ ಮಠದಲ್ಲಿ ವಚನ ಮಾಂಗಲ್ಯದ ಮೂಲಕ ನೂತನ ಸತಿ, ಪತಿಗೆ ಪಡಗೂರು, ಮಾದಾಪಟ್ಟಣ, ಮೂಡುಗೂರು, ಕಬ್ಬಹಳ್ಳಿ ಶ್ರೀಗಳು ಆಶೀರ್ವಚನ ನೀಡಿದರು.