ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಶರಣರು 12 ಶತಮಾನದಲ್ಲಿಯೇ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ಮಾನವನಿಗೆ ಗೌರವ ಇರಬೇಕು ಎಂದರು.

ಗದಗ: ವಚನಗಳು ಕೇವಲ ಧಾರ್ಮಿಕ ಕಾವ್ಯವಲ್ಲ. ಸಮಾನತೆ, ಸ್ವಾತಂತ್ರ‍್ಯ, ನ್ಯಾಯ, ಮಾನವೀಯತೆ ಈ ನಾಲ್ಕು ಮಾನವ ಹಕ್ಕುಗಳ ಮೂಲ ತತ್ವಗಳನ್ನು ವಚನಗಳು 12ನೇ ಶತಮಾನದಲ್ಲಿಯೇ ಘೋಷಿಸಿತ್ತು. ಆದ್ದರಿಂದ ವಚನಗಳು ಭಾರತದ ಮೊದಲ ಮಾನವ ಹಕ್ಕುಗಳ ಸಂವಿಧಾನ ಎಂದು ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು ತಿಳಿಸಿದರು.ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2776ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವರ್ಗ, ವರ್ಣ, ಲಿಂಗ ಭೇದಭಾವ ಮಾಡದೇ ಮಾನವ ಹಕ್ಕುಗಳನ್ನು ಕೊಟ್ಟವರು ಶರಣರು. ತಮ್ಮ ವಚನಗಳ ಮೂಲಕ ಇವ ನಮ್ಮವ ಇವ ನಮ್ಮವ ಎನ್ನುವ ಸಮಾನತೆಯ ಪರಿಕಲ್ಪನೆಯೇ ಅದ್ಭುತ ಎಂದರು.ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಶರಣರು 12 ಶತಮಾನದಲ್ಲಿಯೇ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ಮಾನವನಿಗೆ ಗೌರವ ಇರಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಹಿರಿಯ ನಾಗರಿಕರಿಗೆ ಕೊಡುವ ಗೌರವ ಡಾಕ್ಟರೇಟ್ ಮತ್ತು ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ. ಭೀಮರೆಡ್ಡಿ ದೇವರಡ್ಡಿ ಕಿಲಬನವರ ಅವರನ್ನು ಸನ್ಮಾನಿಸಲಾಯಿತು. ಆರಾಧ್ಯ ಕುನಾಲ್ ಅಳ್ಳೊಳ್ಳಿ ಅವರಿಂದ ಸಂಗೀತ ಸೇವೆ ನಡೆಯಿತು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು.

ಧರ್ಮಗ್ರಂಥ ಪಠಣವನ್ನು ಸೂರಜಗೌಡ ಮರಿಗೌಡ್ರ ಹಾಗೂ ವಚನ ಚಿಂತನವನ್ನು ಕೃತಿಕಾ ಜಿ. ಮರಿಗೌಡ್ರ ನಿರ್ವಹಿಸಿದರು. ದಾಸೋಹ ಸೇವೆಯನ್ನು ರವೀಂದ್ರ ಸಂಗನಬಸಪ್ಪ ಗದಗ, ಶರಣು ವಿರುಪಾಕ್ಷಪ್ಪ ಗದಗ ಹಾಗೂ ವೈಭವ ಗದಗ ಅವರು ವಹಿಸಿದ್ದರು.ಈ ವೇಳೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಇದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರೂಪಿಸಿದರು.