ವಾದಿರಾಜರ ಆರಾಧನಾ ಉತ್ಸವ

| Published : Mar 18 2025, 12:35 AM IST

ವಾದಿರಾಜರ ಆರಾಧನಾ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಹಿರಿಯೂರಿನ ಶ್ರೀ ವೇದವರ್ಧನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ವಾದಿರಾಜರ ರಥೋತ್ಸವ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರೆಗೆ ರಥೋತ್ಸವ ಜರಗಿತು.

ಮಧ್ಯಾಹ್ನ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು. ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರತಂತ್ರಿ, ಉಪಾಧ್ಯಕ್ಷ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ನಿರಂಜನಾಚಾರ್ಯ, ಪ್ರಮೋದ್ ಕುಮಾರ್ ಉಡುಪ, ಪವನ್ ಕುಮಾರ್, ವಿದ್ಯಾನಂದ ನಾಯಕ್, ಶುಭ ಗುರುರಾಜ್, ವೇದಬ್ರಹ್ಮ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸಚಾರ್, ಸತ್ಯನಾರಾಯಣಚಾರ್ ಪಾಲ್ಗೊಂಡಿದ್ದರು.