ಸಾರಾಂಶ
ಬಾಳೆಹೊನ್ನೂರು ಪಟ್ಟಣ ಸಮೀಪದ ವಾಟುಕೊಡಿಗೆ ಗ್ರಾಮದಲ್ಲಿ ಅಕ್ರಮವಾಗಿ ನಾಟಾ ಸಂಗ್ರಹಿಸಿದ ಪ್ರಕರಣವನ್ನು ಚಿಕ್ಕಮಗಳೂರಿನ ಅರಣ್ಯ ಸಂಚಾರದಳದ ಸಿಬ್ಬಂದಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದೆ.
ಬಾಳೆಹೊನ್ನೂರು: ಪಟ್ಟಣ ಸಮೀಪದ ವಾಟುಕೊಡಿಗೆ ಗ್ರಾಮದಲ್ಲಿ ಅಕ್ರಮವಾಗಿ ನಾಟಾ ಸಂಗ್ರಹಿಸಿದ ಪ್ರಕರಣವನ್ನು ಚಿಕ್ಕಮಗಳೂರಿನ ಅರಣ್ಯ ಸಂಚಾರದಳದ ಸಿಬ್ಬಂದಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದೆ.
ವಾಟುಕೊಡಿಗೆ ಅರುಣ್ ಆಚಾರ್ಯ ಎಂಬುವರು ಅಕ್ರಮವಾಗಿ ನಾಟಾ ಸಂಗ್ರಹಿಸಿದ್ದ ಆರೋಪಿ. ಇವರು ತಮ್ಮ ಮನೆ ಹಿಂಭಾಗದ ಕಾಫಿ ತೋಟದಲ್ಲಿ ಬಿಲ್ವಾರ್ ಜಾತಿ ಮರವನ್ನು ಅಕ್ರಮವಾಗಿ ಕಡಿದು ನಾಟಾ ತಯಾರಿಸಿ ಇಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಚಿಕ್ಕಮಗಳೂರಿನ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಕ್ರಮ ಬಯಲಿ ಗೆಳೆದಿದ್ದಾರೆ.ಆರೋಪಿಯಿಂದ 51 ಹಲಗೆ, ಸೈಜ್‌ಗಳನ್ನು ವಶಪಡಿಸಿಕೊಂಡು ಸಂಗಮೇಶ್ವರ ಪೇಟೆ ಸರ್ಕಾರಿ ನಾಟಾ ಸಂಗ್ರಹಾಲಯಕ್ಕೆ ಸಾಗಿಸಿದ್ದಾರೆ.
೨೬ಬಿಹೆಚ್‌ಆರ್ ೨:ಬಾಳೆಹೊನ್ನೂರು ಸಮೀಪದ ವಾಟುಕೊಡಿಗೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಬಿಲ್ವಾರ್ ಜಾತಿ ನಾಟಾ.