ಸಾರಾಂಶ
ದಾಬಸ್‍ಪೇಟೆ: 2025-26ನೇ ಸಾಲಿನ ಸಾಲಿನ ಅತ್ಯುತ್ತಮ ಸರ್ಕಾರಿ ಕನ್ನಡ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲಾ ಪ್ರಶಸ್ತಿಗೆ ನೆಲಮಂಗಲ ತಾಲೂಕು ವೀರರಾಘವನಪಾಳ್ಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಭಾಜನವಾದರೆ, ಇದೇ ಶಾಲೆಯ ಮುಖ್ಯ ಶಿಕ್ಷಕ ಹೊನ್ನಹನುಮಯ್ಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತಮ ಶಾಲಾ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಶಿಕ್ಷಣ ಸಚಿವರಾಗಿದ್ದ ದಿ.ಎಚ್ .ಜಿ.ಗೋವಿಂದೇಗೌಡರ ಹೆಸರಿನಲ್ಲಿ ಉತ್ತಮ ಶಾಲಾ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ನಿಗದಿಯಾಗಿರುವ 2.50 ಲಕ್ಷ ರುಪಾಯಿ ಸರ್ಕಾರದಿಂದ ಹಾಗೂ ಗೋವಿಂದೇಗೌಡ ಠೇವಣಿ ಮಾಡಿರುವ ಬಡ್ಡಿ ಮೊತ್ತದ 25 ಸಾವಿರ ರುಪಾಯಿ ಶಾಲೆಗೆ ನಗದು ಬಹುಮಾನ ಬಂದಿದೆ.12 ವರ್ಷದ ಶ್ರಮ:
ಮುಖ್ಯಶಿಕ್ಷಕ ಹೊನ್ನಹನುಮಯ್ಯ ಶಿಕ್ಷಕ ವೃತ್ತಿಯಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದಾರೆ. ವೀರರಾಘವನಪಾಳ್ಯ ಸರ್ಕಾರಿ ಶಾಲೆಯಲ್ಲಿ ಸತತ 12 ವರ್ಷ ಶಿಕ್ಷಕರಾಗಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಪರಿಶ್ರಮ ಎಸ್‍ಡಿಎಂಸಿ, ಗ್ರಾಮದ ಜನರ ಬೆಂಬಲ, ಶಿಕ್ಷಣ ಇಲಾಖೆ ಸಹೋದ್ಯೋಗಿಗಳ ಸಹಕಾರ, ದಾನಿಗಳ ಕೊಡುಗೆಗಳ ಫಲ ಪ್ರಶಸ್ತಿಗೆ ದಾರಿ ಮಾಡಿದೆ. ಸಿಎಸ್‍ಆರ್ ಅನುದಾನ, ದಾನಿಗಳ ಕೊಡುಗೆಗಳಿಂದಾಗಿ 1ರಿಂದ 8 ನೇ ತರಗತಿವರೆಗಿನ ಶಾಲೆಗೆ ಹೈಸ್ಕೂಲ್ ಆರಂಭಿಸುವ ಅವಕಾಶ ಲಭಿಸಿದೆ. ಸರ್ಕಾರದಿಂದ ಆದೇಶ ಬಂದಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ ಹೈಸ್ಕೂಲ್ ಆರಂಭವಾಗಲಿದೆ. ಪ್ರಸ್ತುತ ಎಲ್‍ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿವೆ. ಆಂಗ್ಲ ಮಾಧ್ಯಮವೂ ಆರಂಭವಾಗಿದ್ದು ಮಕ್ಕಳ ಸಂಖ್ಯೆ 200 ದಾಟಿದೆ.ಶಾಲೆ ಬೆಳೆದು ಬಂದ ದಾರಿ:
1965ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು, 1988ರಲ್ಲಿ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಣವಾಗಿ 2005ರಿಂದ 8ನೇ ತರಗತಿ ಆರಂಭವಾಯಿತು. 2023ರಲ್ಲಿ ಮಾದರಿ ಶಾಲೆಯಾಗಿ ಪರಿವರ್ತನೆಯಾಗಿದ್ದಲ್ಲದೆ 2024ರಲ್ಲಿ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿದ್ದಲ್ಲದೆ 2025ರಲ್ಲಿ ಪ್ರೌಢಶಾಲೆಯಾಗಿ ಉನ್ನತೀಕರಣವಾಗಲಿದೆ.ಕೋಟ್..............
ವೀರರಾಘವನಪಾಳ್ಯ ಸರ್ಕಾರಿ ಶಾಲೆ ಗ್ರಾಮಾಂತರ ಜಿಲ್ಲೆಯ ಇನ್ನಿತರ ಮಾದರಿ ಶಾಲೆಗಳ ಪೈಕಿ ಮುಂಚೂಣಿಯಲ್ಲಿದೆ, ಇಲ್ಲಿನ ಮೂಲಸೌಕರ್ಯ ಶೈಕ್ಷಣಿಕ ಗುಣಮಟ್ಟ ಬಹಳ ಉತ್ತಮವಾಗಿದೆ. ಇಲ್ಲಿನ ವಿಶೇಷ ಶೈಕ್ಷಣಿಕ ತರಬೇತಿಯಿಂದಾಗಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹೊನ್ನಹನುಮಯ್ಯ ಅವರಿಗೆ ಶುಭಕೋರುತ್ತೇನೆ.-ರಮೇಶ್, ಬಿಇಒ, ನೆಲಮಂಗಲ
ಕೋಟ್..............ಜಿಲ್ಲಾಮಟ್ಟದ ಪಿಎಂಶ್ರೀ ಪ್ರಶಸ್ತಿ ಪಡೆದಿರುವ ವೀರರಾಘವನ ಪಾಳ್ಯ ಸರ್ಕಾರಿ ಶಾಲೆಗೆ ಪ್ರಸಕ್ತ ಸಾಲಿನ ಅತ್ಯುತ್ತಮ ಶಾಲಾ ಪ್ರಶಸ್ತಿ ದೊರೆತಿರುವುದು ಅತೀವ ಸಂತಸ ತಂದಿದೆ. ಇದಕ್ಕೆ ಶಾಲೆಯ ಸಹದ್ಯೋಗಿ ಶಿಕ್ಷಕರು, ಶಿಕ್ಷಣ ಇಲಾಖೆ ಮಿತ್ರರು, ಎಸ್‍ಡಿಎಂಸಿ, ಗ್ರಾಮದ ಜನತೆ ದಾನಿಗಳ ಕೊಡುಗೆ ಎಲ್ಲವೂ ಕಾರಣವಾಗಿದೆ. ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ನನ್ನ ವೃತ್ತಿ ಜೀವನದ ಸಾರ್ಥಕತೆ ಎನಿಸಿದೆ.
-ಹೊನ್ನಹನುಮಯ್ಯ, ಮುಖ್ಯಶಿಕ್ಷಕಪೋಟೋ 8: 2025-26ನೇ ಸಾಲಿನ ಸಾಲಿನ ಅತ್ಯುತ್ತಮ ಸರ್ಕಾರಿ ಕನ್ನಡ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲಾ ಪ್ರಶಸ್ತಿಗೆ ಆಯ್ಕೆಯಾದ ವೀರರಾಘವನಪಾಳ್ಯ ಶಾಲೆ
ಪೋಟೋ 9 : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯಶಿಕ್ಷಕ ಹೊನ್ನಹನುಮಯ್ಯ;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))