ಹೈಕೋರ್ಟ್ ತೀರ್ಪಿಗೆ ಹೂಡಿ ವಿಜಯಕುಮಾರ್ ಸ್ವಾಗತ

| Published : Sep 18 2025, 01:10 AM IST

ಸಾರಾಂಶ

೧೫ನೇ ಸುತ್ತಿನವರೆಗೂ ೪೦೧೦ ಮತಗಳಿಂದ ಲೀಡ್‌ನಲ್ಲಿದ್ದೆ, ಆದರೆ ೧೬ನೇ ಸುತ್ತಿನಲ್ಲಿ ದಿಢೀರನೇ ಕೇವಲ ೧೦ ಮತಗಳ ಲೀಡ್‌ಗೆ ಬಂದಿದ್ದು ಅನುಮಾನವಿದೆ. ನನಗೆ ಬಂದಿದ್ದ ಮತಗಳನ್ನು ಕಳ್ಳತನ ಮಾಡಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಮರು ಮತ ಎಣಿಕೆ ಕಾದು ನೋಡುತ್ತಿದ್ದು, ಮಾಲೂರು ಜನತೆಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ .

ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಹೈಕೋರ್ಟ್ ಆದೇಶವನ್ನು ಅಲ್ಪ ಅಂತರದಲ್ಲಿ ಪರಾಜಿತಗೊಂಡಿದ್ದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಸ್ವಾಗತಿಸಿದ್ದಾರೆ. ಮಾಲೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ನನ್ನ ಮತಗಳನ್ನು ಸಹ ಕದ್ದಿರುವ ಅನುಮಾನ ಮೂಡುತ್ತಿದೆ. ೧೫ನೇ ಸುತ್ತಿನವರೆಗೂ ೪೦೧೦ ಮತಗಳಿಂದ ಲೀಡ್‌ನಲ್ಲಿದ್ದೆ, ಆದರೆ ೧೬ನೇ ಸುತ್ತಿನಲ್ಲಿ ದಿಢೀರನೇ ಕೇವಲ ೧೦ ಮತಗಳ ಲೀಡ್‌ಗೆ ಬಂದಿದ್ದು ಅನುಮಾನವಿದೆ. ನನಗೆ ಬಂದಿದ್ದ ಮತಗಳನ್ನು ಕಳ್ಳತನ ಮಾಡಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಮರು ಮತ ಎಣಿಕೆ ಕಾದು ನೋಡುತ್ತಿದ್ದು, ಮಾಲೂರು ಜನತೆಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದರು. ಚುನಾವಣೆಯಲ್ಲಿ ೧೫೯೩ ಮತಗಳಿಂದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಸೋತಿದ್ದರು. ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಂಜೇಗೌಡ ೫೦.೯೫೫ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ೫೦,೭೦೭ ಮತ ಅಂದರೆ ೨೪೮ ಮತಗಳು ಅಂತರದಿಂದ ನಂಜೇಗೌಡ ಗೆಲವು ಸಾಧಿಸಿದ್ದರು. ಸ್ವತಂತ್ರ್ಯ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ೪೯,೩೬೨ ಮತ ಗಳಿಸುವ ಮೂಲಕ ೧೫೯೩ ಮತಗಳ ಹಿನ್ನಡೆಯಾಗಿತ್ತು. ಸದ್ಯ ಮರು ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ಆದೇಶ ಕೊಟ್ಟಿರುವುದು ಸಂತಸ ತಂದಿದೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿರುವ ಹೂಡಿ ವಿಜಯಕುಮಾರ್ ಹೇಳಿದರು.