ದೇಶದ ಸುರಕ್ಷತೆಗೆ ಬಿಜೆಪಿಗೆ ಮತ ನೀಡಿ

| Published : May 03 2024, 01:07 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ದೇಶ ಉಳಿದರೆ ನಾವು ಉಳಿಯುವೇವು ದೇಶದ ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನವಿ ಮಾಡಿದರು. ಬಾಗಲಕೋಟೆ ಮತಕ್ಷೇತ್ರದ ಬೆಣ್ಣೂರು ಗ್ರಾಮದಲ್ಲಿ ನೆಡದ ಸಭೆಯಲ್ಲಿ ಮಾತನಾಡಿದ ಅವರು, ಇದು ದೇಶದ ಚುನಾವಣೆಯಾಗಿದ್ದರಿಂದ ಮಹತ್ವದ ಚುನಾವಣೆ. ದೇಶದ ಭದ್ರತೆ ಸುರಕ್ಷತೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ದೇಶ ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ, ಬಿಜೆಪಿಗೆ ಮತ ನೀಡಿ ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ದೇಶ ಉಳಿದರೆ ನಾವು ಉಳಿಯುವೇವು ದೇಶದ ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನವಿ ಮಾಡಿದರು.

ಬಾಗಲಕೋಟೆ ಮತಕ್ಷೇತ್ರದ ಬೆಣ್ಣೂರು ಗ್ರಾಮದಲ್ಲಿ ನೆಡದ ಸಭೆಯಲ್ಲಿ ಮಾತನಾಡಿದ ಅವರು, ಇದು ದೇಶದ ಚುನಾವಣೆಯಾಗಿದ್ದರಿಂದ ಮಹತ್ವದ ಚುನಾವಣೆ. ದೇಶದ ಭದ್ರತೆ ಸುರಕ್ಷತೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ದೇಶ ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ, ಬಿಜೆಪಿಗೆ ಮತ ನೀಡಿ ಎಂದರು.

ಮುಖಂಡ ಮುತ್ತಣ್ಣ ಬೆಣ್ಣೂರ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರದಲ್ಲಿ ಎಲ್ಲ ವರ್ಗದವರಿಗೂ ಸಂರಕ್ಷಣೆ ಇದೆ, ಎಲ್ಲರಿಗಾಗಿ ಅವರು ನಿರಂತರ ಭಾರತ ಮಾತೆಯ ಸೇವೆಯಲ್ಲಿದ್ದಾರೆ. ಪಿ.ಸಿ.ಗದ್ದಿಗೌಡರಿಗೆ ಮತ ನೀಡುವ ಮೂಲಕ ಅವರ ಕೈ ಬಲಪಡಿಸೋಣ ಎಂದು ಹೇಳಿದರು.

ಸಭೆಯಲ್ಲಿ ಪ್ರಭು ಸರಗಣಾಚಾರಿ, ಸಂಗಣ್ಣ ಕಲಾದಗಿ, ಶಿವಾನಂದ ಟವಳಿ, ಮಲ್ಲಪ್ಪ ಅಂಗಡಿ. ಸಿದ್ದಪ್ಪ ಕೊಣ್ಣುರ, ಹನಮಂತ ಸಿಕ್ಕೇರಿ, ಸಿದ್ದಲಿಂಗಪ್ಪ ರಾಂಪೂರ, ರಾಚಪ್ಪ ಬೀಳಗಿ. ಗವಿಸಿದ್ದಪ್ಪ ತೋಟಗೇರ, ಸಿದ್ದಪ್ಪ ಕೋಟಿ, ಮಲ್ಲಯ್ಯ ಹಿರೇಮಠ, ವಿರುಪಾಕ್ಷಪ್ಪ ಹಂಡೆನ್ನವರ, ಮಹಾಂತೇಶ ಬಾಗೇವಾಡಿ, ಸಿದ್ದಯ್ಯ ಮಠಪತಿ, ಎಚ್.ಸಿ.ಕೋಟಿ, ರಾಮಣ್ಣ ಹಡಪದ, ಎಸ್.ಎನ್.ರಾಂಪೂರ, ಸುಭಾಸ ತಳವಾರ, ಮಲ್ಲಪ್ಪ ಬೂದಿಹಾಳ, ಗುರುಸಿದ್ದಪ್ಪ ಪಲ್ಲೆದ,ಶಿವಲಿಂಗಪ್ಪ ಕೋಟಿ ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.