ಶಿಕ್ಷಣ ಹಕ್ಕು ಜಾರಿಗೊಳಿಸುವ ಪಕ್ಷಗಳಿಗೆ ಮತ ನೀಡಿ

| Published : Feb 22 2024, 01:46 AM IST

ಸಾರಾಂಶ

ಸಾರ್ವಜನಿಕ ಶಿಕ್ಷಣ ಗಟ್ಟಿಗೊಳಿಸಲು ಹಾಗೂ ಶಿಕ್ಷಣ ಹಕ್ಕು ಮತ್ತು ಕಾಯಿದೆ ಜಾರಿಗೊಳಿಸುವ ಪಕ್ಷಗಳಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಸಾರ್ವಜನಿಕ ಶಿಕ್ಷಣ ಗಟ್ಟಿಗೊಳಿಸಲು ಹಾಗೂ ಶಿಕ್ಷಣ ಹಕ್ಕು ಮತ್ತು ಕಾಯಿದೆ ಜಾರಿಗೊಳಿಸುವ ಪಕ್ಷಗಳಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಕರೆ ನೀಡಿದರು.

ಪಟ್ಟಣದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ೨೫ ಗ್ರಾಮಗಳ ೩೦ ಶಾಲೆಗಳ ಎಸ್‌ಡಿಎಂಸಿ ಸದಸ್ಯರಿಗೆ ಆಯೋಜಿಸಿದ್ದ ಸಂವಾದ ಮತ್ತು ಮಾಹಿತಿ ಹಂಚಿಕೆ ಸಭೆಯಲ್ಲಿ ಮಾತನಾಡಿ ಜಾತಿ, ಧರ್ಮದ ಮೇಲೆ ಮತ ಯಾಚಿಸುವ ಬದಲು ಸಂವಿಧಾನದ ಹಕ್ಕುಗಳ ಜಾತಿಯ ನೆಲೆಯಲ್ಲಿ ಮತ ಚಲಾಯಿಸಬೇಕಿದೆ ಎಂದರು.ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಸವಾಲುಗಳಿವೆ. ಜೊತೆಗೆ ಪೋಷಕರು ಮಕ್ಕಳಿಗೆ ಪ್ರೌಢ ಶಾಲೆಯ ಹಂತಕ್ಕೆ ಶಿಕ್ಷಣ ಕೊಡಿಸುವ ಯೋಚನೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು. ಪ್ರಸ್ತುತ ಖಾಸಗಿ ಶಾಲೆಗಳ ವ್ಯಾಮೋಹ ಪೋಷಕರಲ್ಲಿ ಹೆಚ್ಚಿರುವ ಕಾರಣ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ಕೊರತೆಗಳ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಿವೆ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಒದಗಿಸಿ, ಸಮರ್ಪಕ ನಿರ್ವಹಣೆ ಮಾಡಿದರೆ ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗುವುದನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಿ.ಸ್ವಾಮಿ, ಮಹದೇವಸ್ವಾಮಿ, ಸ್ವಾಮಿ ಸೇರಿದಂತೆ ಹಲವರಿದ್ದರು.ಎಸ್‌ಡಿಎಂಸಿ ಬೇಡಿಕೆಗಳು:

೧.ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಿಕ್ಷಕರು, ಕಲಿಕಾ ಕೊಠಡಿ, ಪೀಠೋಪಕರಣ/ಪಾಠೋಪಕರಣ, ಕ್ರೀಡಾ ಸಾಮಾಗ್ರಿ, ಕುಡಿಯುವ ನೀರು, ಶೌಚಾಲಯ ಇರಬೇಕು.೨.ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲು ರೋಟ್‌ ಮ್ಯಾಪ್‌ ರೂಪಿಸಬೇಕು.೩.ಸಾಮಾಜಿಕ ನ್ಯಾಯದ ಆಶಯವನ್ನು ವಿಸ್ತರಿಸಲು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪೂರ್ವ ಪ್ರಾಥಮಿಕದಿಂದ ೧೨ ನೇ ತರಗತಿ ತನಕ ವಿಸ್ತರಿಸಬೇಕು.೪.ಕಳೆದ ಮೂರು ಶೈಕ್ಷಣಿಕ ವರ್ಷದರಿಂದ ಮಕ್ಕಳಿಗೆ ಉಚಿತ ಸೈಕಲ್‌ ವಿತರಿಸದ ಕಾರಣ ನೂರಾರು ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಸೈಕಲ್‌ ವಿತರಿಸಬೇಕು.೫.ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆಧ್ಯತಾ ವಲಯವನ್ನಾಗಿ ಪರಿಗಣಿಸಿ ಗಟ್ಟಿ ಗೊಳಿಸಲು ಸರ್ಕಾರಿ ಶಾಲೆ ಸಬಲೀಕರಣ ಪ್ರಾಧಿಕಾರ ಸ್ಥಾಪಿಸಬೇಕು.