ಮತ ಚೋರಿ: ಪ್ರತಿ ಬೂತ್‌ಗೆ ಯುವಕರ ನೇಮಕ-ಮಂಜುನಾಥ ಗೌಡ

| Published : Nov 13 2025, 02:45 AM IST

ಮತ ಚೋರಿ: ಪ್ರತಿ ಬೂತ್‌ಗೆ ಯುವಕರ ನೇಮಕ-ಮಂಜುನಾಥ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬೂತಮಟ್ಟದಲ್ಲಿ ಮತಕಳ್ಳತನ ತಡೆಯುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪ್ರತಿ ಬೂತ್‌ಗೆ ಯುವಕರನ್ನು ನೇಮಕ ಮಾಡಲಾಗುವುದು. ಈ ಮೂಲಕ ಪ್ರತಿ ಮನೆಗೆ ಭೇಟಿ ನೀಡಿ ಮತಕಳ್ಳತನ ನಡೆಯದಂತೆ ತಡೆಯುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಬೂತಮಟ್ಟದಲ್ಲಿ ಮತಕಳ್ಳತನ ತಡೆಯುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪ್ರತಿ ಬೂತ್‌ಗೆ ಯುವಕರನ್ನು ನೇಮಕ ಮಾಡಲಾಗುವುದು. ಈ ಮೂಲಕ ಪ್ರತಿ ಮನೆಗೆ ಭೇಟಿ ನೀಡಿ ಮತಕಳ್ಳತನ ನಡೆಯದಂತೆ ತಡೆಯುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ತಿಳಿಸಿದರು.

ಚನ್ನಗಿರಿಯಲ್ಲಿ ಯೂತ್ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಓಟ್ ಚೋರಿ ವಿರುದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಡೆ ಯುವ ಕಾಂಗ್ರೆಸ್‌ನಿಂದ ಮತಕಳ್ಳತನ ವಿರುದ್ದ ಬೃಹತ್ ಹೋರಾಟ ನಡೆಸುತ್ತಿದ್ದೇವೆ. ಬೂತ್‌ಮಟ್ಟದಲ್ಲಿ ಯಾವ ಮನೆಯಲ್ಲಿ ಎಷ್ಟು ಓಟ ಸೇರಿಸಿದ್ದಾರೆ. ಬೇರೆ ಕಡೆಯ ಓಟು ಇಲ್ಲಿ ತಂದು ಹಾಕುವುದು. ಎರಡು ಕಡೆ ಓಟು ಮಾಡುವುದು ಇಂತಹ ವಿಷಯಗಳನ್ನು ಯುವ ಕಾಂಗ್ರೆಸ್ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಮತಕಳ್ಳತನದ ವಿರುದ್ದ ಯುವ ಕಾಂಗ್ರೆಸ್‌ನಿಂದ 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಿ ಎಐಸಿಸಿಗೆ ಸಲ್ಲಿಸಿದ್ದೇವೆ ಎಂದರು.

ದೇಶದಲ್ಲಿ ಮಹದೇವ ಪುರದಿಂದ ಹರಿಯಾಣದವರೆಗೂ ವೋಟ್‌ ಚೋರಿ ನಡೆದಿದೆ. ಮಹದೇವ ಪುರದಲ್ಲಿ 1 ಲಕ್ಷ ಓಟು ಸೇರಿಸಲಾಗಿದೆ. ಹರಿಯಾಣದಲ್ಲಿ ಪ್ರತಿ 6 ಮತಕ್ಕೆ ಒಂದು ಓಟು ಬಿಜೆಪಿಗೆ ಹೋಗುವ ರೀತಿಯಲ್ಲಿ ಕಾರ್ಯ ನಡೆದಿದೆ. ಇದರಿಂದಾಗಿಯೇ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಅದರೆ, ಆರಂಭದಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಅದರೆ, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ ವೋಟ್‌ ಚೋರಿ ಎಂದು ಹೇಳಿದರು.

ಹರಿಯಾಣದ ಚುನಾವಣೆಯಲ್ಲಿ ೨೫ ಲಕ್ಷ ಓಟು ಚೋರಿಯಾಗಿದೆ. ಇದರಿಂದಾಗಿ ೨೫ರಿಂದ ೩೦ ಶಾಸಕರು ಸೋತಿದ್ದಾರೆ. ಇದರ ವಿರುದ್ದ ನಮ್ಮ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ಜೊತೆಗೂಡಿದ್ದೇವೆ. ಬಿಜೆಪಿಯವರು ಹರಿಯಾಣದಲ್ಲಿ ಮತಗಳ್ಳತನ ಮಾಡಿದ ರೀತಿಯಲ್ಲಿ ರಾಜ್ಯದಲ್ಲಿ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೬೦ಕ್ಕೂ ಹೆಚ್ಚು ಸೀಟುಗಳು ಬರಬೇಕಿತ್ತು. ಅದರೆ, ೧೩೬ ಸೀಟುಗಳು ಬಂದಿವೆ ಎಂದರು.

ನಮ್ಮ ಪಕ್ಷ ಸಂವಿಧಾನ ನಂಬಿಕೆಯಿಟ್ಟಿದೆ. ಚುನಾವಣಾ ಆಯೋಗದ ಮೇಲೆ ಬಹಳ ನಂಬಿಕೆ ಇಟ್ಟಿದ್ದೇವೆ. ಅದರೆ, ಚುನಾವಣಾ ಆಯೋಗ ಉಡಾಫೆ ಉತ್ತರಗಳನ್ನು ನೀಡುತ್ತಿದೆ. ಬಿಜೆಪಿ ಆರ್‌ಎಸ್‌ಎಸ್ ಹೇಳಿದಂತೆ ಕೇಳುವ ಆಯುಕ್ತರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಪ್ರಜಾತಂತ್ರ ಉಳಿಸಲು ನಮ್ಮ ಹೋರಾಟ ನಡೆಯುತ್ತಿದೆ. ಅದರೆ ಬಿಜೆಪಿ ಕ್ರಿಮಿನಲ್ ಆಜೆಂಡಾ ಇಟ್ಟುಕೊಂಡು ಸರ್ಕಾರ ನಡೆಸುತ್ತಿದೆ. ನಮ್ಮ ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಅದರ ಆಶಯದಂತೆ ಬಿಜೆಪಿ ಆರ್‌ಎಸ್‌ಎಸ್ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು. ಸಂವಿಧಾನ ವಿರೋಧವಾಗಿ ಕೆಲಸ ಮಾಡಬಾರದು ಎಂದರು.

ಯೂತ್‌ ಕಾಂಗ್ರೆಸ್‌ ಉಪಾಧ್ಯಕ್ಷ ಅಬ್ದಲ್ ದೇಸಾಯಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹಮದ್, ತಾಲೂಕು ಘಟಕದ ಅಧ್ಯಕ್ಷ ಅನಸ್, ನಲ್ಲೂರು ವಸೀಂ, ಪುರಸಭೆ ಸದಸ್ಯ ತನ್‌ವೀರ್, ಗೌಸ್‌ಪೀರ್, ಅಣ್ಣಪ್ಪ ಸ್ವಾಮಿ ರಂಜಿತ್ ಇತರರು ಹಾಜರಿದ್ದರು.