ಸಾರಾಂಶ
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ದೇವಾಲಯಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಭೇಟಿ
ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚೌಡೇಶ್ವರಿ ದೇವಿಯ ವಿಗ್ರಹಕ್ಕೆ ದೇವಾಲಯದಿಂದ ನಿರ್ಮಿಸಿದ ವಜ್ರ ಕಿರೀಟಧಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.‘ಮಠದ ಬಾಲ ಮಂಜುನಾಥ ಸ್ವಾಮೀಜಿ ದೇವಾಲಯಕ್ಕೆ ಬರುವಂತೆ ಆಹ್ವಾನ ನೀಡಿದರು. ಈ ಹಿನ್ನೆಲೆಯಲ್ಲಿ ನಾನು ದೇವಾಲಯಕ್ಕೆ ಬಂದಿದ್ದೇನೆ, ವಿದ್ಯಾ ಚೌಡೇಶ್ವರಿ ತಾಯಿಗೆ ಉತ್ತರಾಯಣ ಪುಣ್ಯಕಾಲದಲ್ಲಿ ವಿಶೇಷವಾದ ಪೂಜೆ ಸಲ್ಲಿಸುವ ಅಗತ್ಯತೆ ಇದೆ ಇಂತಹ ಸಂದರ್ಭದಲ್ಲಿ ನಾನು ಅಮ್ಮನವರ ಪೂಜೆಯನ್ನು ಮಾಡಿದ್ದೇನೆ. ನನಗೆ ಎರಡು ಕಾಲಿನ ಮಂಡಿಗಳನ್ನು ನೋವಿದೆ ಆದರೂ ಕೂಡ ದೀರ್ಘದಂಡ ನಮಸ್ಕಾರ ಮಾಡಿದ್ದೇನೆ, ಇಲ್ಲಿ ನಡೆದ ಹೋಮ ಕಾರ್ಯಗಳಲ್ಲಿ ನಾನು ಭಾಗವಹಿಸಿದ್ದೇನೆ. ಇಂತಹ ವಿಶೇಷ ಕಾರ್ಯಕ್ರಮ ನನಗೆ ತುಂಬಾ ಅಚ್ಚುಮೆಚ್ಚು ಆಗಿದೆ’ ಎಂದರು.
ವಿದ್ಯಾ ಚೌಡೇಶ್ವರಿಗಾಗಿ ಮಠದ ವತಿಯಿಂದ ಮಾಡಿಸಿದ್ದ ವಜ್ರ ಖಚಿತ ಕಿರೀಟವನ್ನು ಪೂಜಿಸುವ ಮುಖಾಂತರ ದೇವಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಾನು ಕೂಡ ಅಯೋಧ್ಯೆಗೆ ಹೋಗಬೇಕೆಂಬ ಆಸೆ ಇದೆ. ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಆರೋಗ್ಯ ಸುಧಾರಣೆ ಕಂಡರೆ ನಾನು ಖಂಡಿತ ಹೋಗುತ್ತೇನೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಬಾಲ ಮಂಜುನಾಥ ಸ್ವಾಮೀಜಿ, ವಿದ್ಯಾ ಚೌಡೇಶ್ವರಿ ದಯದಿಂದ ದೇವೇಗೌಡರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ದೇವರ ಆಶೀರ್ವಾದ ಸದಾ ಇದೆ ಎಂದರು.