ಹಸು ಬಲಿ ಪಡೆದ ಹುಲಿ

| Published : Jan 15 2024, 01:46 AM IST / Updated: Jan 15 2024, 01:47 AM IST

ಸಾರಾಂಶ

ಜನ ಜಾನುವಾರುಗಳ ರಕ್ಷಣೆಗೆ ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳು, ಅನ್ನದಾತರ ಹಸುಗಳು ನಿರಂತರವಾಗಿ ಹುಲಿಬಾಯಿಗೆ ತುತ್ತಾಗುತ್ತಿರುವುದು ಆತಂಕಕಾರಿ

ಕನ್ನಡಪ್ರಭ ವಾರ್ತೆ ಸರಗೂರು

ಹೊಲದಲ್ಲಿ ಮೇಯುತ್ತಿದ್ದ ಹಸುವನ್ನು ಹುಲಿಯೊಂದು ಬಲಿ ತೆಗೆದುಕೊಂಡಿರುವ ಘಟನೆ ತಾಲೂಕಿನ ಶಿವಪುರದಲ್ಲಿ ನಡೆದಿದೆ.

ಗ್ರಾಮದ ವಾಟರ್ ಮ್ಯಾನ್ ರಾಜಣ್ಣ ಎಂಬವರು ಜಮೀನಿನಲ್ಲಿ ಹಸು ಮೇಯುತ್ತಿದ್ದಾಗ ಕಾಡಿನಿಂದ ಹೊರ ಬಂದ ಹುಲಿ ಹಸುವನ್ನು ಕೊಂದು ತಿಂದ್ದಿದೆ.. ಅಲ್ಲದೆ ಕೆಲದಿನಗಳ ಹಿಂದೆಯಷ್ಟೆ ಜಯಲಕ್ಷ್ಮಿಪುರ ಗ್ರಾಮದಲ್ಲಿಯೂ ಹುಲಿ ಹಸು ಬಲಿ ಪಡೆದ್ದಕ್ಕೆ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು. ಆದರೆ, ಅರಣ್ಯ ಇಲಾಖೆ ಹುಲಿ ಸೆರೆಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಜನ ಜಾನುವಾರುಗಳ ರಕ್ಷಣೆಗೆ ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳು, ಅನ್ನದಾತರ ಹಸುಗಳು ನಿರಂತರವಾಗಿ ಹುಲಿಬಾಯಿಗೆ ತುತ್ತಾಗುತ್ತಿರುವುದು ಆತಂಕಕಾರಿ

ಬಂಡೀಪುರ ಕಾಡಂಚಿನ ಪ್ರದೇಶದ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ಉಪಟಳ ಜೋರಾಗಿದ್ದು, ಹುಲಿ ಸೆರೆಗೆ ಒತ್ತಾಯಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಯಲಕ್ಷ್ಮಿಪುರ, ಕಾನಕನಹಳ್ಳಿ ಗ್ರಾಮದಲ್ಲಿಯೂ ತಿಂಗಳಿನಲ್ಲಿ ಎರಡು ಹಸುಗಳನ್ನು ಹುಲಿ ಕೊಂದು ತಿಂದಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಕಾನಕನಹಳ್ಳಿ ಅಕ್ಕ, ಪಕ್ಕದ ಗ್ರಾಮಸ್ಥರು ತುಂಬಾ ಭಯಕ್ಕೆ ಒಳಗಾಗಿದ್ದಾರೆ.

ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.