ತರೀಕೆರೆ ಅಂಚೆ ಪ್ರತಿಷ್ಠಾನಕ್ಕೆ ದತ್ತ ಭೇಟಿ

| Published : Jan 15 2024, 01:46 AM IST / Updated: Jan 15 2024, 01:47 AM IST

ತರೀಕೆರೆ ಅಂಚೆ ಪ್ರತಿಷ್ಠಾನಕ್ಕೆ ದತ್ತ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ಪಟ್ಟಣದ ಸಾಮಾಜಿಕ ಸೇವಾ ಟ್ರಸ್ಟ್ ಅಂಚೆ ಪ್ರತಿಷ್ಠಾನದ ಕಾರ್ಯಾಲಯಕ್ಕೆ ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಶನಿವಾರ ಭೇಟಿ ನೀಡಿದ್ದರು.

ತರೀಕೆರೆ: ಪಟ್ಟಣದ ಸಾಮಾಜಿಕ ಸೇವಾ ಟ್ರಸ್ಟ್ ಅಂಚೆ ಪ್ರತಿಷ್ಠಾನದ ಕಾರ್ಯಾಲಯಕ್ಕೆ ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಶನಿವಾರ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಅಂಚೆ ಪ್ರತಿಷ್ಠಾನದ ಗೌರವಾಧ್ಯಕ್ಷ ಎನ್.ಮಂಜುನಾಥ್, ಅಂಚೆ ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್, ಪ್ರತಿಷ್ಠಾನದ ಖಚಾಂಚಿ ಎಚ್.ವಿ. ಸತ್ಯನಾರಾಯಣ್, ಯೂನಿಯನ್ ಬ್ಯಾಂಕ್ ಇಂಡಿಯಾ ನಿವೃತ್ತ ಸಹಾಯಕ ಜನರಲ್ ಮ್ಯಾನೇಜರ್ ಸಿ. ಶೇಷಾಚಲ, ಮುಖಂಡ ಗಿರೀಶ್ ಉಪಸ್ಥಿತರಿದ್ದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ ಶ್ರೀ ಕುಮಾರವ್ಯಾಸ ಜಯಂತಿ ಕಾರ್ಯಕ್ರಮ ಜ. 28 ರಂದು ಯಗಟಿಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಉಪನ್ಯಾಸ, ಗಮಕ ವಾಚನ ಮತ್ತು ವ್ಯಾಖ್ಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮತ್ತು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಅವರನ್ನು ಅಂಚೆ ಪ್ರತಿಷ್ಷಾನದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಪ್ರತಿಷ್ಠಾನದ ಖಚಾಂಚಿ ಎಚ್.ವಿ.ಸತ್ಯನಾರಾಯಣ್ ಇದ್ದರು.14ಕೆಟಿಆರ್.ಕೆ.06ಃ

ತರೀಕೆರೆಯಲ್ಲಿ ಸಾಮಾಜಿಕ ಸೇವಾ ಟ್ರಸ್ಟ್ ಅಂಚೆ ಪ್ರತಿಷ್ಠಾನ ಕಾರ್ಯಾಲಯಕ್ಕೆ ಮಾಜಿ ಶಾಸಕ ವೈ.ಎಸ್.ವಿ.ದತ್ತ ಭೇಟಿ ನೀಡಿದ್ದರು. ಪ್ರತಿಷ್ಠಾನ ಗೌರವಾಧ್ಯಕ್ಷ ಎನ್.ಮಂಜುನಾಥ್, ಅಧ್ಯಕ್ಷ ಎ.ವಿ.ನಾಗಭೂಷಣ್, ಖಚಾಂಚಿ ಎಚ್.ವಿ.ಸತ್ಯನಾರಾಯಣ್ ಮತ್ತಿತರರು ಇದ್ದರು.