ಸಾರಾಂಶ
ಪ್ರವಾಸಕ್ಕೆ ಬಂದಿದ್ದ ಉಜಿರೆ ಮೂಲದ ಐವರು ಯುವಕರು ವ್ಹೀಲಿಂಗ್ ಮಾಡಿ ಸುಮಾರು ಐದು ಕಿಲೋ ಮೀಟರ್ ರಸ್ತೆ ಹಾಳು ಮಾಡಿರುವ ಘಟನೆ ರಾಣಿ ಝರಿ ಬಳಿ ಭಾನುವಾರ ನಡೆದಿದೆ
ಕೊಟ್ಟಿಗೆಹಾರ: ಪ್ರವಾಸಕ್ಕೆ ಬಂದಿದ್ದ ಉಜಿರೆ ಮೂಲದ ಐವರು ಯುವಕರು ವ್ಹೀಲಿಂಗ್ ಮಾಡಿ ಸುಮಾರು ಐದು ಕಿಲೋ ಮೀಟರ್ ರಸ್ತೆ ಹಾಳು ಮಾಡಿರುವ ಘಟನೆ ರಾಣಿ ಝರಿ ಬಳಿ ಭಾನುವಾರ ನಡೆದಿದೆ.
ಒಬ್ಬರಾದ ಮೇಲೊಬ್ಬರಂತೆ ಐವರು ಯುವಕರು ವಿಡಿಯೋ ಹಾಗೂ ಫೋಟೋ ಚೆನ್ನಾಗಿ ಬರಲೆಂದು 5 ಕಿ.ಮೀ. ರಸ್ತೆಯಲ್ಲಿ ಸುಮಾರು ನೂರಕ್ಕೂ ಅಧಿಕ ಬಾರಿ ಓಡಾಡಿದ್ದರು. ಇದರಿಂದ, ರಾಣಿ ಝರಿ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿತ್ತು. ಮಂಗಳೂರು ಯುವಕರ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಬಾಳೂರು ಪೊಲೀಸರು ಎಚ್ಚರಗೊಂಡಿದ್ದಾರೆ.ವೀಲ್ಹಿಂಗ್ ಮಾಡಿದ್ದ ಉಜಿರೆ ಮೂಲದ ಗಿರೀಶ್, ಗಣೇಶ್, ಗಣೆಶ್ ಕುಮಾರ್, ಪ್ರವೀಣ್ ಹಾಗೂ ರೋಹಿತ್ ಹಾಗೂ ಅವರು ಬಳಸಿದ್ದ ಬೈಕ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.