ಸಂಸದ ಜೊಲ್ಲೆಗಿಂತ ಪತ್ನಿ ಶಶಿಕಲಾ ಶ್ರೀಮಂತೆ

| Published : Apr 16 2024, 01:00 AM IST

ಸಾರಾಂಶ

ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಗಿಂತ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಶ್ರೀಮಂತೆಯಾಗಿದ್ದಾರೆ.

ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಗಿಂತ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಶ್ರೀಮಂತೆಯಾಗಿದ್ದಾರೆ. ಅಣ್ಣಾಸಾಬೇಬ ಜೊಲ್ಲೆ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು ₹ 21.63 ಕೋಟಿ ಆಸ್ತಿ ಹೊಂದಿದ್ದರೆ, ಶಾಸಕಿ ಶಶಿಕಲಾ ಜೊಲ್ಲೆ ₹ 29.55 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ₹ 12.40 ಕೋಟಿ, ಸಾಲ ಹೊಂದಿದ್ದರೆ, ಪತ್ನಿ ಶಶಿಕಲಾ ಜೊಲ್ಲೆ ಹೆಸರಿನಲ್ಲಿ ₹ 9.54 ಕೋಟಿ ಸಾಲವಿದೆ.

₹ 7.21 ಲಕ್ಷ ಆಸ್ತಿ ಹೆಚ್ಚಳ: ಬಿಜೆಪಿ ಅಭ್ಯರ್ಥಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಘೋಷಣೆ ಮಾಡಿಕೊಂಡಿದ್ದ ಆಸ್ತಿಗಿಂತ ಈ ಬಾರಿ ₹7.21(₹7,21,81,887) ಕೋಟಿಯಷ್ಟು ಏರಿಕೆಯಾಗಿದೆ. ಜೊತೆಗೆ ಸಾಲವೂ ₹ 2.74 ಕೋಟಿ (₹ 27419903) ಹೆಚ್ಚಳಗೊಂಡಿದೆ.

2019ರಲ್ಲಿ ₹2,44,82,463 ಇದ್ದ ಚರಾಸ್ತಿ ಈ ಬಾರಿ ₹ 3,38,88,012ರಷ್ಟು ಹೆಚ್ಚಾಗಿ ಒಟ್ಟು ₹5,83,70,475 ಮೌಲ್ಯದ ಚರಾಸ್ತಿ ಹೊಂದಿದ್ದರೆ. 2019ರಲ್ಲಿ ₹11,96,55,000 ಇದ್ದ ಸ್ಥಿರಾಸ್ತಿ ಈ ಬಾರಿ ₹ 3,82,93,875ಗೆ ಹೆಚ್ಚಳಗೊಂಡಿದ್ದು, ಒಟ್ಟು ₹15,79,48,875 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆಸ್ತಿ ಏರಿಕೆ ಜೊತೆಗೆ ಸಾಲವೂ ಏರಿಕೆ ಕಂಡಿದ್ದು, ಕಳೆದ ಚುನಾವಣೆಯಲ್ಲಿ ₹ 9,66,30,171 ಸಾಲ ಹೊಂದಿದ್ದರೆ, ಈ ಬಾರಿ ಅದು ₹12,40,50,074 ಹೆಚ್ಚಳವಾಗಿದೆ.

ಅಣ್ನಾಸಾಹೇಬ ಜೊಲ್ಲೆ ಬಳಿ 1,25,000 ಲಕ್ಷ ನಗದು ಇದ್ದರೆ, ಪತ್ನಿ ಶಶಿಕಲಾ ಜೊಲ್ಲೆ ಬಳಿ ₹ 1,10,000 ನಗದು ಹೊಂದಿದ್ದಾರೆ.

ಅಣ್ಣಾಸಾಹೇಬ ಜೊಲ್ಲೆ ಅವಲಂಬಿತರಾದ ಪುತ್ರ ಜ್ಯೋತಿಪ್ರಸಾದ ಜೊಲ್ಲೆ ಹೆಸರಿನಲ್ಲಿ ₹12200730 ಚರಾಸ್ತಿ ಹೊಂದಿದ್ದರೆ, ₹18703125 ಸ್ಥಿರಾಸ್ತಿ ಇದೆ. ₹ 12951124 ಸಾಲ ಇದೆ. ಸೊಸೆ ಪ್ರಿಯಾ ಜ್ಯೋತಿಪ್ರಸಾದ ಜೊಲ್ಲೆ ಹೆಸರಿನಲ್ಲಿ ₹ 3133951 ಚರಾಸ್ತಿ ಮಾತ್ರ ಇದೆ. ಅಣ್ಣಾಸಾಹೇಬ ಜೊಲ್ಲೆ ಅವರ ಕುಟುಂಬ ಒಟ್ಟು ₹ 54,27,,86,727 ಆಸ್ತಿ ಹೊಂದಿದೆ.