ಸಂವಿಧಾನ-ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಬೆಂಬಲಿಸಿ

| Published : Apr 16 2024, 01:00 AM IST

ಸಾರಾಂಶ

ರಾಮನಗರ: ಗಾಂಧೀಜಿಯವರ ಪಾದಕ್ಕೆ ನಮಸ್ಕರಿಸಿ ಗೋಡ್ಸೆ ಎದೆಗೆ ಗುಂಡಿಕ್ಕಿದ ರೀತಿಯಲ್ಲಿಯೇ ಪ್ರಧಾನಿ ಮೋದಿಯವರು ಸಂಸತ್ ಬಾಗಿಲಿಗೆ ನಮಸ್ಕರಿಸಿ ಸಂವಿಧಾನಕ್ಕೆ ಗುಂಡಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ - ಪ್ರಜಾಪ್ರಭುತ್ವ - ಒಕ್ಕೂಟ ಭಾರತ ಉಳಿಸಿಕೊಳ್ಳಬೇಕಾದರೆ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಇಂದೂಧರ ಹೊನ್ನಾಪುರ ತಿಳಿಸಿದರು.

ರಾಮನಗರ: ಗಾಂಧೀಜಿಯವರ ಪಾದಕ್ಕೆ ನಮಸ್ಕರಿಸಿ ಗೋಡ್ಸೆ ಎದೆಗೆ ಗುಂಡಿಕ್ಕಿದ ರೀತಿಯಲ್ಲಿಯೇ ಪ್ರಧಾನಿ ಮೋದಿಯವರು ಸಂಸತ್ ಬಾಗಿಲಿಗೆ ನಮಸ್ಕರಿಸಿ ಸಂವಿಧಾನಕ್ಕೆ ಗುಂಡಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ - ಪ್ರಜಾಪ್ರಭುತ್ವ - ಒಕ್ಕೂಟ ಭಾರತ ಉಳಿಸಿಕೊಳ್ಳಬೇಕಾದರೆ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಇಂದೂಧರ ಹೊನ್ನಾಪುರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ್ಯ ಪಾರಮ್ಯದ ಚಾತುವರ್ಣ ವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡುವ ಆರ್‌ಎಸ್‌ಎಸ್‌ ಕಾರ್ಯಸೂಚಿಯಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ಅವರು ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮನುಧರ್ಮ ಸ್ಥಾಪನೆ ಮಾಡಲು ಷಡ್ಯಂತ್ರ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಪರವಾಗಿರುವ ಕಾರಣ ಆ ಪಕ್ಷವನ್ನು ಎಲ್ಲರು ಬೆಂಬಲಿಸುವಂತೆ ಕೋರಿದರು.

ಸಂವಿಧಾನದ ಕಾರಣ ಶೋಷಿತ ತಳ ಸಮುದಾಯಗಳು ಪ್ರಗತಿಯತ್ತ ಮುನ್ನಡೆ ಸಾಧಿಸುತ್ತಿವೆ. ಇದನ್ನು ಸಹಿಸದ ಆರ್‌ಎಸ್‌ಎಸ್‌- ಬಿಜೆಪಿ ಹಿಂದೂ ನಾವೆಲ್ಲ ಒಂದು ಎಂದು ಷಡ್ಯಂತ್ರ ರೂಪಿಸಿತು. ಅಲ್ಪಸಂಖ್ಯಾತ ಮುಸ್ಲಿಂ - ಕ್ರೈಸ್ತರನ್ನು ಶತ್ರುಗಳಂತೆ ಬಿಂಬಿಸತೊಡಗಿದರು. ದೇವರು ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣಕ್ಕೆ ಬಳಸಿಕೊಂಡು ಜನರ ನಡುವೆ ದ್ವೇಷದ ವಿಷ ಬೀಜ ಬಿತ್ತಿದರು ಎಂದು ಟೀಕಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದಮನಕಾರಿ ನೀತಿ ಅನುಸರಿಸುತ್ತಿದೆ. ಅಸ್ಪೃಶ್ಯ ಸಮುದಾಯಗಳ ನಡುವೆ ಜಗಳ ತಂದಿಟ್ಟು ಇಡಬ್ಲ್ಯೂಎಸ್ ಹೆಸರಿನಲ್ಲಿ ಶೇ.3ರಷ್ಟಿರುವ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಗಿಟ್ಟಿಸಿಕೊಟ್ಟರು. ಸರ್ಕಾರಿ ಕ್ಷೇತ್ರ ಒಳಗೊಂಡಂತೆ ಎಲ್ಲೆಡೆ ಗುತ್ತಿಗೆ ಪದ್ಧತಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿ ಕತ್ತು ಹಿಸುಕಿದರು. ಈಗ ಅವರ ಕಣ್ಣು ರಾಜಕೀಯ ಮೀಸಲಾತಿಯ ಮೇಲಿದ್ದು, ಎಲ್ಲ ರೀತಿಯ ಮೀಸಲಾತಿ ರದ್ದು ಪಡಿಸುವುದು ಅವರ ಅಜೆಂಡಾ ಆಗಿದೆ. ಅದಕ್ಕಾಗಿಯೇ ಅವರು ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಜನ ವಿರೋಧಿ ನೀತಿಗಳನ್ನು ವಿರೋಧಿಸಿದವರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಾ ವಿರೋಧ ಹತ್ತಿಕ್ಕುತ್ತಿದ್ದಾರೆ ಎಂದು ದೂರಿದರು.

1947ರಿಂದ 2014ರವರೆಗೆ ದೇಶದ ಅಭಿವೃದ್ಧಿ ಮುಮ್ಮುಖವಾಗಿ ಚಲಿಸಿದರೆ, 2014ರ ನಂತರ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಅಣೆಕಟ್ಟೆ ನಿರ್ಮಾಣ ಮಾಡಿಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಕಾರ್ಪೋರೇಟ್ ಸಂಸ್ಥೆಗಳಿಗೆ ಒತ್ತುಕೊಡುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ವಿ.ನಾಗರಾಜು, ಎಂ, ಸೋಮಶೇಖರ್, ಗುಡ್ಡೆ ವೆಂಕಟೇಶ್, ವಿನಯ್, ಪುನೀತ್ ರಾಜ್ ಇದ್ದರು.

(ಈ ಕೋಟ್‌ ಅನ್ನು ಪ್ಯಾನಲ್‌ನಲ್ಲಿ ಬಳಸಿ)

ಮೋದಿಯವರು ಪ್ರಧಾನಿ ಆಗುವುದಕ್ಕೂ ಮುನ್ನ ಭ್ರಷ್ಟರನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದರು. ಆದರೀಗ ಕಡು ಭ್ರಷ್ಟ ರಾಜಕಾರಣಿಗಳೆಲ್ಲರು ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಭ್ರಷ್ಟರ ಪಾಲಿಗೆ ಜೈಲ್ ಆದಂತಾಗಿದೆ. ಬಿಜೆಪಿ ಸೇರಿದ ಭ್ರಷ್ಟರೆಲ್ಲರು ಪ್ರಾಮಾಣಿಕರಾಗುತ್ತಿದ್ದಾರೆ.

-ಇಂದೂಧರ ಹೊನ್ನಾಪುರ, ಸಾಹಿತಿ15ಕೆಆರ್ ಎಂಎನ್ 4.ಜೆಪಿಜಿ

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಇಂದೂಧರ ಹೊನ್ನಾಪುರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.