ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಪ್ರಧಾನಿ ನರೇಂದ್ರ ಮೊದಿಯವರು ಮೂರನೇ ಅವಧಿಗೆ ಪ್ರಧಾನಿಯಾಗಲು ಕಲಬುರಗಿ ಜಿಲ್ಲೆಯಲ್ಲಿ ಅಭ್ಯರ್ಥಿಯಾಗಿರುವ ಡಾ. ಉಮೇಶ ಜಾಧವ ಅವರು ೨ ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯಿಶಾಲಿಯಾಗಲು ನಾವೇಲ್ಲರೂ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜಪಾಟೀಲ್ ರದ್ದೇವಾಡಿ ಹೇಳಿದರು.ಪಟ್ಟಣದ ಬಜಾಜ ಕಲ್ಯಾಣ ಮಂಟಪದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ಡಾ. ಉಮೇಶ ಜಾಧವ ಅವರು ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇದರಿಂದ ಜಿಲ್ಲೆಯಲ್ಲಿದ್ದ ವಲಸೆ ಹೊಗುವುದನ್ನು ತಪ್ಪಿಸಿದ್ದಾರೆ. ಜಿಲ್ಲೆಯ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಿ ಸುಮಾರು ಮೂರು ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೊಗ ಸೃಷ್ಟಿ ಮಾಡಿದ್ದಾರೆ ಅಲ್ಲದೇ ರೈಲ್ವೆ ಸಮಸ್ಯೆಗೆ ಸ್ಪಂಧಿಸಿದ್ದಾರ ಎಂದರು.
ಸಂಸದ ಡಾ. ಉಮೇಶ ಜಾಧವ ಮಾತನಾಡಿ, ಲೊಕಸಭೆ ಚುನಾವಣೆಯು ನಿಷ್ಪಕ್ಷಪಾತವಾಗಿ ನಡೆಯಬೇಕು. ಕಾನೂನು ಉಲ್ಲಂಘಟನೆ ಅಥವಾ ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೇ ಮಾಡಿದರೂ ನಾವು ಸುಮ್ಮನೇ ನೊಡುವುದಿಲ್ಲ. ಇದಕ್ಕೆ ನಮ್ಮ ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೂ ಸಮರೊಪಾದಿಯಲ್ಲಿ ಕೆಲಸ ಮಾಡಿ ನಮಗೆ ವಿರೋಧ ಮಾಡುವವರಿಗೆ ಸೂಕ್ತ ಉತ್ತರ ನೀಡಬೇಕು ಎಂದು ಹೇಳಿದರು.ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಎಮ್ಮೆನೊರ, ನೀಲಕಂಠ ಪಾಟಿಲ್, ಲಿಂಗಾರೆಡ್ಡಿ ಭಾಸರೆಡ್ಡಿ, ಶರಣಪ್ಪ ತಳವಾರ, ಚಂದ್ರಶೇಖರ ಅವಂಟಿ, ನಾಗರಾಜ ಬಂಕಲಗಿ, ಗೊಪಾಲ ರಾಠೋಡ, ವಿಠಲ ನಾಯಕ, ಮಲ್ಲಿಕಾರ್ಜುನ ಪ್ರಜಾರಿ, ಇತರರು ಇದ್ದರು.ಪಕ್ಷದಲ್ಲಿ ಹಿರಿಯ ಮತ್ತು ಮೂಲ ಕಾರ್ಯಕರ್ತರಿಗೆ ಕಡೆಗಣನೆ ಮಾಡಿ ಪಕ್ಷಪಾತ ಧೊರಣೆ ಮಾಡಿ ನಿಷ್ಠಾವಂತ ಕಾರ್ಯಕರ್ತರಿಗೆ ಕಡೆಗಣನೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಮುಂದುವರೆದರೆ ಇದರಿಂದ ಚುನಾವಣೆಯಲ್ಲಿ ಮೂಲ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ.
- ಅಯ್ಯಪ್ಪ ರಾಮತೀರ್ಥ, ಹಾಲು ಪ್ರಕೋಷ್ಠ ಜಿಲ್ಲಾಧ್ಯಕ್ಷ