ರೇಣುಕಾಚಾರ್ಯರು ಒಂದೇ ಧರ್ಮಕ್ಕೆ ಸೀಮಿತವಲ್ಲ

| Published : Mar 24 2024, 01:32 AM IST

ಸಾರಾಂಶ

ರೇಣುಕಾದಿ ಪಂಚಾಚಾರ್ಯರು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿರದೇ, ಎಲ್ಲ ಧರ್ಮದ ಎಲ್ಲ ಜಾತಿ-ಜನಾಂಗಗಳ ದೈವತ್ವವಾಗಿ ಒಳ್ಳೆಯದನ್ನೇ ಕರುಣಿಸಿದ್ದಾರೆ. ಇದರಿಂದ ಇಂದು ಬಹುತೇಕ ಎಲ್ಲ ಜಾತಿ ಜನಾಂಗದ ಆದಿ ಗುರುವಾಗಿ ರೇಣುಕಾಚಾರ್ಯರನ್ನು ಪೂಜಿಸುತ್ತಿದ್ದಾರೆಂದು ಗುಂಡಕನಾಳ ಬೃಹನ್ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ರೇಣುಕಾದಿ ಪಂಚಾಚಾರ್ಯರು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿರದೇ, ಎಲ್ಲ ಧರ್ಮದ ಎಲ್ಲ ಜಾತಿ-ಜನಾಂಗಗಳ ದೈವತ್ವವಾಗಿ ಒಳ್ಳೆಯದನ್ನೇ ಕರುಣಿಸಿದ್ದಾರೆ. ಇದರಿಂದ ಇಂದು ಬಹುತೇಕ ಎಲ್ಲ ಜಾತಿ ಜನಾಂಗದ ಆದಿ ಗುರುವಾಗಿ ರೇಣುಕಾಚಾರ್ಯರನ್ನು ಪೂಜಿಸುತ್ತಿದ್ದಾರೆಂದು ಗುಂಡಕನಾಳ ಬೃಹನ್ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಶನಿವಾರ ತಾಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ಜಂಗಮ ಸಮಾಜ ಬಾಂಧವರ ನೇತೃತ್ವದಲ್ಲಿ ವಿವಿಧ ಸಮಾಜ ಬಾಂಧವರ ಸಹಯೋಗದೊಂದಿಗೆ ಏರ್ಪಡಿಸಲಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಅನೇಕ ಮಹಾತ್ಮರು ಜನಿಸಿದ್ದಾರೆ. ಅಂತಹ ಮಹಾತ್ಮರಲ್ಲಿಯೇ ವಿಶಿಷ್ಟವಾಗಿ ಎಲ್ಲ ಧರ್ಮದವರಿಗೆ ಒಳಿತನ್ನು ಬಯಸುವುದರೊಂದಿಗೆ ಸನ್ಮಾರ್ಗದ ದಾರಿ ತೋರಿಸಿಕೊಟ್ಟವರು ಸದ್ಗುರು ಶ್ರೀ ರೇಣುಕಾಚಾರ್ಯರು. ಶ್ರೀ ಜಗದ್ಗುರು ರೇಣುಕಾಚಾರ್ಯರು ತ್ರಿಲಿಂಗ ದೇಶವಾದ ತೆಲಂಗಾಣ ರಾಜ್ಯದ ಕೊಲ್ಲಿಪಾಕಿಯ ಸ್ವಯಂಭು ಸೋಮೇಶ್ವರ ಲಿಂಗದಿಂದ ಅವತರಿಸಿ ಬಂದವರಾಗಿದ್ದಾರೆ. ಅಸೇತು ಹಿಮಾಚಲ ಪರಿಯಂತರ ಲೋಕ ಸಂಚಾರ ಮಾಡಿ ವೀರಶೈವ ಮಹಾಮತವನ್ನು ಸ್ಥಾಪನೆ ಮಾಡಿ ಸಮಾಜ ಉದ್ಧಾರ ಮಾಡಿದ ಜಗದ್ಗುರು ರೇಣುಕರು ಮಲಯಾಚಲ ಪ್ರದೇಶದ ಭದ್ರಾ ನದಿಯ ತೀರದಲ್ಲಿ ಶ್ರೀ ಅಗಸ್ತ್ಯ ಮಹರ್ಷಿಗೆ ಶಿವ ಸಿದ್ದಾಂತವನ್ನು ಬೋಧಿಸಿ ರಂಭಾಪುರಿ ಪೀಠವನ್ನು ಸ್ಥಾಪಿಸಿದರು. ಯಾವುದೇ ಜಾತಿ, ಮತ, ಧರ್ಮ ಅನ್ನದೇ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಘೋಷವಾಕ್ಯದೊಂದಿಗೆ ಧರ್ಮೋದ್ಧಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮನುಷ್ಯನಿಗೆ ಪ್ರಪ್ರಥಮವಾಗಿ ಕೃಷಿ ಧರ್ಮವನ್ನು ಕಲಿಸಿದ ಜಗದ್ಗುರುಗಳು ರೇಣುಕಾಚಾರ್ಯರು ಎಂದರೆ ತಪ್ಪಾಗಲಾರದು ಎಂದರು.

ಕಾರ್ಯಕ್ರಮಕ್ಕೂ ಮೊದಲು ಸುಮಂಗಲೆಯರು ಕುಂಭ ಕಳಸದೊಂದಿಗೆ ಸದ್ಗುರು ಶ್ರೀರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು. ಇದೇ ಸಮಯದಲ್ಲಿ ಗ್ರಾಮದ ಭಕ್ತರವತಿಯಿಂದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಮುಖಂಡರುಗಳಾದ ಶಿವಾನಂದ ಹಿರೇಮಠ, ಪ್ರಭುದೇವ ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ವಿವೇಕಾನಂದ ಹಿರೇಮಠ, ಗುರುಮೂರ್ತಿ ಹಿರೇಮಠ, ಅಂಬ್ರಯ್ಯ ಹಿರೇಮಠ, ಮಧುಗೌಡ ಪಾಟೀಲ, ನಾನಾಗೌಡ ಅನಂತರಡ್ಡಿ, ಮಲ್ಲನಗೌಡ ಕಾರಲಕುಂಟಿ, ಬಸವಂತ್ರಾಯ ಚಿಂಚೋಳಿ, ಕರಣಗೌಡ ವಠಾರ, ಮುದಕನಗೌಡ ದೊಡಮನಿ, ಪ್ರಭುಗೌಡ ಅನಂತರಡ್ಡಿ, ನಿಂಗನಗೌಡ ಅನಂತರಡ್ಡಿ, ಶಕುಗೌಡ ರಾರಡ್ಡಿ, ಪ್ರಭುಗೌಡ ಗುರಡ್ಡಿ ಇತರರು ಇದ್ದರು. ಗುರುಸ್ವಾಮಿ ಹಿರೇಮಠ ಸ್ವಾಗತಿಸಿದರು. ಶ್ರೀಶೈಲ ಹಿರೇಮಠ ನಿರೂಪಿಸಿದರು. ಕಿರಣ ಹಿರೇಮಠ ವಂದಿಸಿದರು.