ಸಾರಾಂಶ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ರಾಜರಾಗಿ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತೆ ನಾಲ್ವಡಿಯವರ ಪಾತ್ರ ಮಹತ್ವದ್ದು. ಪ್ರಾಜ್ಞರಿಗೆ ಅಧಿಕಾರ ನೀಡುವ ಮನೋಬಲ ಅರಸನಿಗಿರಬೇಕು. ಅಂಥದ್ದೊಂದು ಗುಣ ಇವರಲ್ಲಿದ್ದ ಕಾರಣ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ಸಹಾಯ ಮಾಡಿದವರನ್ನು ಸ್ಮರಿಸುವ ಸದ್ಗುಣ ಜಿಲ್ಲೆಯ ಜನರಿಗೆ ರಕ್ತದಲ್ಲೇ ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಇಲ್ಲದಿದ್ದರೆ ಜಿಲ್ಲೆ ಬರಡು ಭೂಮಿಯಾಗಿರುತ್ತಿತ್ತು. ಮಹನೀಯರು ನೀಡಿದ ಕೊಡುಗೆಗಳನ್ನು ಮುಂದಿನ ದಿನಮಾನಗಳಲ್ಲಿ ಯುವಜನತೆಗೆ ತಿಳಿಸುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಹೇಳಿದರು.ಸೋಮವಾರ ಮಂಡ್ಯ ವಿಧಾನಸಭಾ ಕ್ಷೇತ್ರ ಚಂದಗಾಲು ಗ್ರಾಮದಲ್ಲಿ ಶ್ರೀಪಟ್ಟಲದಮ್ಮ ಮತ್ತು ಶ್ರೀಕೊಲ್ಲಾಪುರದಮ್ಮ ದೇವಿಯ ಮಹಾದ್ವಾರ ಪ್ರತಿಷ್ಠಾಪನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಮಹಾನ್ ಚೇತನರು ಸೇರಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಿರದಿದ್ದರೆ ಇವತ್ತು ಮಂಡ್ಯ ಜಿಲ್ಲೆ ಬರಪೀಡಿತವಾಗಿರುತ್ತಿತ್ತು. ರಾಜಕಾರಣಿಗಳ ಕೊಡುಗೆಗಿಂತ ಇವರಿಬ್ಬರ ಕೊಡುಗೆ ಮೈಸೂರು ಮಹಾ ಸಂಸ್ಥಾನಕ್ಕೆ ಅಗಾಧವಾಗಿದೆ ಎಂದು ಅಭಿಪ್ರಾಯಪಟ್ಟರು.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ರಾಜರಾಗಿ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತೆ ನಾಲ್ವಡಿಯವರ ಪಾತ್ರ ಮಹತ್ವದ್ದು. ಪ್ರಾಜ್ಞರಿಗೆ ಅಧಿಕಾರ ನೀಡುವ ಮನೋಬಲ ಅರಸನಿಗಿರಬೇಕು. ಅಂಥದ್ದೊಂದು ಗುಣ ಇವರಲ್ಲಿದ್ದ ಕಾರಣ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಶಾಸಕ ಪಿ.ರವಿಕುಮಾರ್, ಜಂಗಮಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ನಾಯಕ ಸ್ಟಾರ್ ಚಂದ್ರು ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಶಾಸಕರಾದ ದಿನೇಶ್ ಗೂಳಿಗೌಡ ಅವರು ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.ಯುವ ಮುಖಂಡರಾದ ಸಚಿನ್ ಚಲುವರಾಯಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಿ.ತ್ಯಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.