ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ೧೫ ಅರ್ಜಿ ಸಲ್ಲಿಕೆ

| Published : May 06 2025, 12:20 AM IST

ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ೧೫ ಅರ್ಜಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂಸದ ಈ. ತುಕಾರಾಂ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಹಾಗೂ ಇತರೆ ಯೋಜನೆಗಳ ಕುರಿತಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದೇ ಸಂದರ್ಭ ಜನಸ್ಪಂದನಾ ಸಭೆಯು ನಡೆಯಿತು.

ಕನ್ನಡಪ್ರಭ ವಾರ್ತೆ ಸಂಡೂರು

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂಸದ ಈ. ತುಕಾರಾಂ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಹಾಗೂ ಇತರೆ ಯೋಜನೆಗಳ ಕುರಿತಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದೇ ಸಂದರ್ಭ ಜನಸ್ಪಂದನಾ ಸಭೆಯು ನಡೆಯಿತು.

ಹಳೆ ದರೋಜಿ ಗ್ರಾಮದ ರೈತರಾದ ರಾಮುಡು, ವಿ. ನಾಗರಾಜ, ವಿ. ದೇವಣ್ಣ, ಮಲ್ಲಪ್ಪ ಮುಂತಾದವರು ಸಂಸದರಿಗೆ ಮನವಿ ಸಲ್ಲಿಸಿ, ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಗ್ರಾಮದಲ್ಲಿ ಸುಮಾರು ೧೫೦ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ರೈತರಿಗೆ ಹೆಚ್ಚಿನ ಬೆಳೆ ಪರಿಹಾರ ದೊರಕಿಸಿಕೊಡಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ದೌಲತ್‌ಪುರ, ಸುಶೀಲಾನಗರ, ಭುಜಂಗನಗರ ಹಾಗೂ ಕೃಷ್ಣಾನಗರದ ಹಲವು ರೈತರು ಸಂಸದರು ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾಗೆ ಮನವಿ ಸಲ್ಲಿಸಿ, ತಮ್ಮ ಫಲವತ್ತಾದ ಭೂಮಿಗಳನ್ನು ರೈಲ್ವೆ ಲೈನ್ ಮತ್ತು ಸೈಡಿಂಗ್ ನಿರ್ಮಾಣಕ್ಕಾಗಿ ಸರ್ಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು ಸದರಿ ಜಮೀನುಗಳಲ್ಲಿ ಕೃಷಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಮಲ್ಲಾಪುರ ಗ್ರಾಮದ ಮಂಜುನಾಥ, ಪಂಪಾಪತಿ, ನಾಗಮ್ಮ, ಹನುಮಯ್ಯ ಮತ್ತಿತರರು, ತಾವು ಸವೇ ನಂಬರ್ ೨ರಲ್ಲಿ ಉಳುಮೆ ಮಾಡುತ್ತಿರುವ ಜಮೀನಿಗೆ ಪಟ್ಟಾ ನೀಡುವಂತೆ ಮನವಿ ಮಾಡಿದರು. ಕೆಲವರು ವಸತಿ ವ್ಯವಸ್ಥೆ ಕಲ್ಪಿಸಲು ಕೋರಿ ಮನವಿ ಸಲ್ಲಿಸಿದರು.

ಅಹವಾಲು ಸ್ವೀಕರಿಸಿದ ಸಂಸದರು, ನಿಗದಿತ ಕಾಲಾವಧಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಒಟ್ಟು ೧೫ ಅರ್ಜಿ ಸಲ್ಲಿಕೆಯಾಗಿವೆ ಎಂದು ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಮಡಗಿನ ಬಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.