ಸಾರಾಂಶ
ಮಹಿಳೆ ಅಬಲೆ ಅಲ್ಲ ಅವಳು ಸಬಲೇ, ಅವಳ ವಿಕಾಸಕ್ಕೆಂದೇ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ 1993ರಲ್ಲಿ ಪ್ರಾರಂಭಗೊಂಡಿದೆ. ಮಾತೃಶ್ರೀ ಹೇಮಾವತಿ ಅಮ್ಮನವರು ಮಹಿಳೆಯರ ಆರ್ಥಿಕ ಬೆಳವಣಿಗೆ ಹಾಗೂ ಸಬಲೀಕರಣಕ್ಕಾಗಿ ಪ್ರತಿ ತಿಂಗಳಿಗೊಂದು ಉತ್ತಮವಾದ ಮಾಹಿತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಸಿರಿಗೆರೆ ಯೋಜನಾ ಜಿಲ್ಲಾ ನಿರ್ದೇಶಕ ರವೀಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಹಿಳೆ ಅಬಲೆ ಅಲ್ಲ ಅವಳು ಸಬಲೇ, ಅವಳ ವಿಕಾಸಕ್ಕೆಂದೇ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ 1993ರಲ್ಲಿ ಪ್ರಾರಂಭಗೊಂಡಿದೆ. ಮಾತೃಶ್ರೀ ಹೇಮಾವತಿ ಅಮ್ಮನವರು ಮಹಿಳೆಯರ ಆರ್ಥಿಕ ಬೆಳವಣಿಗೆ ಹಾಗೂ ಸಬಲೀಕರಣಕ್ಕಾಗಿ ಪ್ರತಿ ತಿಂಗಳಿಗೊಂದು ಉತ್ತಮವಾದ ಮಾಹಿತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಸಿರಿಗೆರೆ ಯೋಜನಾ ಜಿಲ್ಲಾ ನಿರ್ದೇಶಕ ರವೀಂದ್ರ ಹೇಳಿದರು.ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಗುತ್ತಿ ನಾಡು ವಲಯ ಶಿಬಿರ ಕಾರ್ಯ ಕ್ಷೇತ್ರದ ಸರಸ್ವತಿ ನೂತನ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಮಾಜಿ ಜಿಪಂ ಅಧ್ಯಕ್ಷ ಆರ್. ನರಸಿಂಹ ರಾಜು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದಿನ ದಿನ ಬಡ ಜನರ ಬಾಳಿಗೆ ಬೆಳಕನ್ನು ನೀಡುತ್ತಿದ್ದು, ಇವರ ಎಲ್ಲಾ ಕೆಲಸ ಕಾರ್ಯಗಳು ಅತ್ಯುತ್ತಮವಾಗಿವೆ. ಇಂದಿನ ದಿನ ಮನೆಗಳಲ್ಲಿ ಸ್ವಂತ ಅಣ್ಣ ತಮ್ಮಂದಿರು ಯಾವುದೇ ರೀತಿಯ ಹಣ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಅಂತಹ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ ) ಬ್ಯಾಂಕಿನ ಮುಖಾಂತರ ಬಡ ಜನರಿಗೆ ಅವಶ್ಯಕತೆ ಸಹಾಯ ಮಾಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರವಿಚಂದ್ರ, ಗ್ರಾಪಂ ಅಧ್ಯಕ್ಷೆ ಗೀತಾ, ತಿಪ್ಪಮ್ಮ, ಸಾಕಮ್ಮ, ಶಿವಲೀಲಾ, ಪ್ರಮೋದಿನಿ ಅಂಬಿಕಾ, ರೇಣುಕಾ ಹಾಗೂ ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.