ಟಿಪ್ಪರ್ ಲಾರಿ ವಾಹನಗಳಿಗೆ ದಂಡ: ಪ್ರತಿಭಟನೆ

| Published : Sep 03 2024, 01:36 AM IST

ಸಾರಾಂಶ

ಚಿಕ್ಕಮಗಳೂರು, ಟಿಪ್ಪರ್ ಲಾರಿ ವಾಹನಗಳಿಗೆ ಅಳವಡಿಸಿದ ಜಿಪಿಎಸ್ ತಾಂತ್ರಿಕ ದೋಷ ಮತ್ತು ಪರವಾನಗಿ ಬಗ್ಗೆ ಸರಿಯಾದ ಮಾಹಿತಿ ನೀಡದೆ ವಾಹನಗಳಿಗೆ ವಿಧಿಸಿರುವ ದಂಡವನ್ನು ಸಂಪೂರ್ಣ ರದ್ದು ಮಾಡುವಂತೆ ಆಗ್ರಹಿಸಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರ ಹಾಗೂ ಚಾಲಕರ ಸಂಘ ಸೋಮವಾರ ನಗರದ ಆಜಾದ್ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಟಿಪ್ಪರ್ ಲಾರಿ ವಾಹನಗಳಿಗೆ ಅಳವಡಿಸಿದ ಜಿಪಿಎಸ್ ತಾಂತ್ರಿಕ ದೋಷ ಮತ್ತು ಪರವಾನಗಿ ಬಗ್ಗೆ ಸರಿಯಾದ ಮಾಹಿತಿ ನೀಡದೆ ವಾಹನಗಳಿಗೆ ವಿಧಿಸಿರುವ ದಂಡವನ್ನು ಸಂಪೂರ್ಣ ರದ್ದು ಮಾಡುವಂತೆ ಆಗ್ರಹಿಸಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರ ಹಾಗೂ ಚಾಲಕರ ಸಂಘ ಸೋಮವಾರ ನಗರದ ಆಜಾದ್ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.ವಾಹನಗಳು ಪರವಾನಗಿ ಪಡೆದು ಉಪ ಖನಿಜ ತುಂಬಿಸಿ ಜಿಪಿಎಸ್ ತಂತ್ರಾಂಶದಲ್ಲಿ ಪ್ರತಿದಿನ ದಂಡ ವಿಧಿಸಿರುವುದನ್ನು ನಿಲ್ಲಿಸಬೇಕು. ವಾಹನಗಳು ಕ್ರಷರ್‌ಗೆ ಉಪ ಖನಿಜ ತುಂಬಲು ಹೋದಾಗ ಕ್ರಷರ್‌ನಲ್ಲಿ ಮೆಟೀರಿಯಲ್ ಇಲ್ಲದೆ ವಾಹನ ಹಿಂದಿರುಗಿದಾಗ ದಂಡ ವಿಧಿಸಿರುವುದನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ವಾಹನಗಳು ರಿಪೇರಿಗಾಗಿ ಗ್ಯಾರೇಜ್‌ಗೆ ಹೋದಾಗ ವೆಲ್ಡಿಂಗ್ ಕೆಲಸದ ವೇಳೆ ಬ್ಯಾಟರಿ ಡಿಸ್‌ಕನೆಕ್ಟ್ ಮಾಡಿದರೂ ದಂಡ ವಿಧಿಸುತ್ತಿದ್ದಾರೆ. ಕ್ರಷರ್‌ನಲ್ಲಿ ಪರವಾನಗಿ ಪಡೆಯುವಾಗ ತಾಂತ್ರಿಕ ಸಮಸ್ಯೆ ಇದ್ದರೆ ಜಿಪಿಎಸ್ ಗೆ 10,500, ರಿನಿವಲ್‌ಗೆ 5,500 ರು. ದಂಡ ವಿಧಿಸಿ ಜಿಪಿಎಸ್ ಬಗ್ಗೆ ಮಾಹಿತಿ ನೀಡದೆ ತೊಂದರೆ ಕೊಡುತ್ತಿದ್ದಾರೆಂದು ದೂರಿದ್ದಾರೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ಗಮನ ಹರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡುತ್ತಿರುವ ಕಿರುಕುಳ ತಪ್ಪಿಸು ವಂತೆ ಮನವಿ ಮಾಡಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ಕ್ರಷರ್ ಮಾಲೀಕರ ಸಂಘದ ನಾಸಿರ್, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಕೆಂಪನಹಳ್ಳಿ ಮಂಜು ನಾಥ್, ಉಪಾಧ್ಯಕ್ಷ ಜಗದೀಶ್ ವಹಿಸಿದ್ದರು. ಸುರೇಶ್, ಜಯದೀಪ್, ರಾಜಣ್ಣ ಹಾಗೂ ಟಿಪ್ಪರ್‌ ಲಾರಿ ಚಾಲಕರು ಪಾಲ್ಗೊಂಡಿ ದ್ದರು.

2 ಕೆಸಿಕೆಎಂ 4ಟಿಪ್ಪರ್ ಲಾರಿ ವಾಹನಗಳಿಗೆ ವಿಧಿಸಿರುವ ದಂಡವನ್ನು ಸಂಪೂರ್ಣ ರದ್ದು ಮಾಡುವಂತೆ ಆಗ್ರಹಿಸಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರ ಹಾಗೂ ಚಾಲಕರ ಸಂಘದ ನೇತೃತ್ವದಲ್ಲಿ ಸೋಮವಾರ ಚಿಕ್ಕಮಗಳೂರಿನ ಆಜಾದ್ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.