ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಟಿಎಪಿಸಿಎಂಎಸ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.4 ರಂದು ಚುನಾವಣೆ ನಡೆಯಲಿದೆ. ಸಂಘದ ಎಲ್ಲಾ 12 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತರು ಸ್ಪರ್ಧಿಸಿ ಗೆಲುವು ಸಾಧಿಸುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದರು.
ಈ ಬಾರಿ ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಗಳ ನಡುವೆ ಹಾಗೂ ಕಾವೇರಿ ಆರತಿ ಕಾರ್ಯಕ್ರಮದ ಒತ್ತಡದಲ್ಲಿ, ಮುಂಬರುವ ಟಿಎಪಿಸಿಎಂಎಸ್ ಸೊಸೈಟಿ ಚುನಾವಣೆ ಪೂರ್ವಭಾವಿ ಸಭೆ ಕರೆಯಲು ತಡವಾಗಿದೆ ಎಂದರು.ಕಾಂಗ್ರೆಸ್ ಸರ್ಕಾರದ ಹಲವು ಯೋಜನೆಗಳು ಜನಪರವಾಗಿದೆ. ಈ ಬಗ್ಗೆ ಜನರಲ್ಲಿ ಮಾಹಿತಿಯನ್ನು ತಿಳಿಸಬೇಕು. ಅಲ್ಲದೆ ಸ್ಥಳೀಯ ಚುನಾವಣೆಗೆ ಸ್ಪರ್ಧೆ ಮಾಡಲಿಚ್ಚಿಸುವ ಅಭ್ಯರ್ಥಿಗಳು ಶೀಘ್ರ ತಿಳಿಸಬೇಕು, ಸ್ವರ್ಧಿಗಳು ಯಾರೇ ಆದರು ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿಗೆ ಶ್ರಮಿಸಬೇಕು ಎಂದರು.
ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಮಂಡ್ಯ ಜಿಲ್ಲೆಗೆ, ಅದರಲ್ಲೂ ಶ್ರೀರಂಗಪಟ್ಟಣ ತಾಲೂಕಿಗೆ ರಸ್ತೆ, ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಹಾಗೂ ಕೆಆರ್‌ಎಸ್ ಆಧುನೀಕರಣ, ನೀರಾವರಿ ಇಲಾಖೆಗೆ, ವಿರಿಜಾ ನಾಲೆಗೆ 60 ಕೋಟಿ ರು. ಸಿಡಿಎಸ್ ನಾಲೆ ಕಾಮಗಾರಿಗೆ 50 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ನೀಡಿದೆ ಎಂದರು.ನಾವು ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ಬಾವದಿಂದದರೂ ಗೆಲುವು ಸಾಧಿಸಿ ತೋರಿಸಬೇಕಿದೆ. ಟಿಎಪಿಸಿಎಂಎಸ್ ಆವರಣದ ಜಾಗದಲ್ಲಿ ಒತ್ತುವರಿ ಜಾಗ ಬಿಡಿಸಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಕೊಟ್ಟರೆ ಸಂಸ್ಥೆ ಇನ್ನಷ್ಟು ಹೆಚ್ಚಿನ ಲಾಭಗಳಿಸಲು ಸಹಕಾರಿಯಾಗುತ್ತದೆ. ಎಲ್ಲರೂ ಒಗ್ಗೂಡಿ ಚುನಾವಣೆಯಲ್ಲಿ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಟಿಎಪಿಸಿಎಂಎಸ್ ಹಾಲಿ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ಸೊಸೈಟಿಯು ಈ 15 ತಿಂಗಳಲ್ಲಿ 25 ಲಕ್ಷ ನಿವ್ವಳ ಲಾಭಗಳಿಸಿದೆ. ನಮ್ಮ ಅವಧಿಯಲ್ಲಿ ರೈತರಿಗೆ ಗೊಬ್ಬರ ಮಾರಾಟ ಶಾಖೆ ಹಾಗೂ ಬ್ಯಾಂಕ್ ಶಾಖೆ ತೆರೆಯುವ ಜೊತೆಗೆ ಪುರಸಭೆಯಿಂದ ಸಂಘದ ಜಾಗ ಕಟ್ಟಡಗಳಿಗೆ ಹಣ ಕಟ್ಟಿ ಸಂಸ್ಥೆ ಹೆಸರಿನಲ್ಲಿ ಇ ಸ್ವತ್ತು ಖಾತೆ ಸಹ ಮಾಡಿಸಲಾಗಿದೆ. ಇಂದು ಸೊಸೈಟಿಯು ಅಭಿವೃದ್ಧಿ ಪಥದತ್ತಾ ಮುನ್ನಡೆ ಸಾಧಿಸುತ್ತಿರುವುದಾಗಿ ಮಾಹಿತಿ ನೀಡಿದರು.ಇದೇ ವೇಳೆ ಜಿಲ್ಲೆಯ ಮನ್ಮುಲ್ ನಿರ್ದೇಶಕ ಬಿ.ಬೋರೇಗೌಡ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ಪಕ್ಷದ ಹಿರಿಯ ಮುಖಂಡರಾದ ಎಂ.ಪುಟ್ಟೇಗೌಡ, ಗಂಗಣ್ಣ, ಎನ್.ವಿ.ಚಲುವರಾಜು, ಬೆಳಗೊಳ ಸ್ವಾಮಿಗೌಡ, ಅನೀಲ್, ಪುರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು,