ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ರಥೋತ್ಸವಕ್ಕೆ ಪೂಜೆ

| Published : Feb 22 2025, 12:45 AM IST

ಸಾರಾಂಶ

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ಮಹಾ ರಥೋತ್ಸವಕ್ಕೆ ಸಾಲೂರು ಬೃಹನ್ ಮಠದ ಶ್ರೀಗಳು ಮುಹೂರ್ತ ಪೂಜೆ ನೆರವೇರಿಸಿದರು.ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ, ಫೆ. 25 ರಿಂದ 2025 ಮಾ.1 ರವರೆಗೆ ನಡೆಯುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ, ಪೂರ್ವಭಾವಿ ಸಿದ್ಧತೆಯೊಂದಿಗೆ ಮಹಾರಥೋತ್ಸವಕ್ಕೆ ಮುಹೂರ್ತ ಪೂಜಾ ಕಾರ್ಯಕ್ರಮವನ್ನು, ಶ್ರೀ ಕ್ಷೇತ್ರದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ಶುಕ್ರವಾರ ಬೆಳಗ್ಗೆ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯದಂತೆ ಸಂಭ್ರಮ ಸಡಗರದೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಇದೇ ಸಂದರ್ಭದಲ್ಲಿ ಬೇಡಗಂಪಣ ಸಮುದಾಯದ ಹಿರಿಯ ಅರ್ಚಕರಾದ ಕೆವಿ ಮಾದೇಶ್ ಮುಖಂಡ ಮುರುಗ ಮತ್ತು ಸಮುದಾಯದ ಅರ್ಚಕರು ಉಪಸ್ಥಿತರಿದ್ದರು.

ಸಕಲ ಸಿದ್ಧತೆ:

ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ, ಫೆ. 25ರಂದು ಸಾಲೂರು ಬ್ರಾಹ್ಮಠಕ್ಕೆ ಉತ್ಸವ ಮೂರ್ತಿಯನ್ನು ಬಿಜಯಂಗೈಸುವದು 26.02.2025ರಂದು ಬುಧವಾರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ವಿಶೇಷ ಸೇವೆ ಉತ್ಸವದಿಗಳು ಸಂಭ್ರಮ ಸಡಗರದೊಂದಿಗೆ ಜರುಗುವುದು ಜೊತೆಗೆ ರಾತ್ರಿ ಜಾಗರಣ ಉತ್ಸವ ನಡೆಯುವುದು.

ಫೆ.27 ರಂದು ಗುರುವಾರ ಮಾದೇಶ್ವರನಿಗೆ ವಿಶೇಷ ಪೂಜಾ ಮಹಾಮಂಗಳಾರತಿ ಉತ್ಸವದಿಗಳು ನಡೆಯಲಿದೆ. ಫೆ.28 ರಂದು ಶುಕ್ರವಾರ ಮಹಾಶಿವರಾತ್ರಿ ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಮಾ. 1ರಂದು ಶನಿವಾರ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಮಹಾ ರಥೋತ್ಸವ ಪ್ರಾರಂಭ 8,10, ರಿಂದ 8,45, ವರೆಗೆ ಮಹಾ ರಥೋತ್ಸವ ನಂತರ ಗುರು ಬ್ರಹ್ಮೋತ್ಸವ ಮತ್ತು ಅನ್ನ ಬ್ರಹ್ಮೋತ್ಸವ ಹಾಗೂ ರಾತ್ರಿ ಸ್ವಾಮಿಗೆ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ.

ಕೊಠಡಿಗಳು ಲಭ್ಯವಿಲ್ಲದಿರುವ ಬಗ್ಗೆ ಪ್ರಕಟಣೆ:

ಮಲೆ ಮಾದೇಶ್ವರ ಬೆಟ್ಟದಲ್ಲಿ ಮಲೆ ಮಾದೇಶ್ವರ ಸ್ವಾಮಿ ಕ್ಷೇತ್ರವಿ ವೃತ್ತಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ, 2025ರ ಮಹಾಶಿವರಾತ್ರಿ ಹಬ್ಬದ ಹಾಗೂ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವದ ವೇಳೆ ಕೊಠಡಿಗಳು ಲಭ್ಯವಿಲ್ಲದಿರುವ ಬಗ್ಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯಲ್ಲಿ ಕಾರ್ಯದರ್ಶಿ ಎ ಇ ರಘು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಮಾದೇಶ್ವರನ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ, ಸದರಿ ಜಾತ್ರೆಯ ಸಂದರ್ಭದಲ್ಲಿ ಬಹಳಷ್ಟು ದಾನಿಗಳು ಸ್ವಂತ ಕುಠಿರಗಳನ್ನು ಹೊಂದಿರುವ ಯೋಜನೆಯ ರಿತ್ಯಾ ಕೊಠಡಿಗಳನ್ನು ಕಾಯ್ದಿರಿಸಿರುವುದರಿಂದ ಜೊತೆಗೆ ಜಾತ್ರೆ ವೇಳೆಯಲ್ಲಿ ಅಧಿಕಾರಿ ಮತ್ತು ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಭದ್ರತೆ ಹಿನ್ನೆಲೆಯಲ್ಲಿ, ವಾಸ್ತವ್ಯ ಮಾಡಲು ಬರುವ ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಗಣ್ಯ ಹಾಗೂ ಅತಿಥಿ ಗಣ್ಯ ವ್ಯಕ್ತಿಗಳ ಶಿಫಾರಸ್ಸು ಪತ್ರಗಳ ಆದ್ಯತೆ ಮೇರೆಗೆ ಕೊಠಡಿಗಳನ್ನು ಕಾಯ್ದಿರಿಸಿರುವುದರಿಂದ, ಮಹಾಶಿವರಾತ್ರಿ ಜಾತ್ರೆ ಹಾಗೂ ಯುಗಾದಿ ಹಬ್ಬದ ಜಾತ್ರೆ ವೇಳೆಯಲ್ಲಿ ಭಕ್ತಾದಿಗಳಿಗೆ ಕೊಠಡಿಗಳು ಲಭ್ಯವಿರುವುದಿಲ್ಲ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ ಇ ರಘು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

----------