ಯೋಗ ಸಕಾರಾತ್ಮಕವಾದ ಪರಿಣಾಮವನ್ನು ನೀಡುವುದರಿಂದ ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ ಪ್ರಯೋಗ ಇದಾಗಿದೆ. ತೂಕ ಕಳೆದುಕೊಳ್ಳಲು ಮಾತ್ರವಲ್ಲ ಯೋಗವು ದೇಹವನ್ನು ಸಮತೂಕದಲ್ಲಿಟ್ಟು ದೃಢ ಮತ್ತು ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ ಇದರೊಂದಿಗೆ ಯೋಗ ಮನಸ್ಸಿನ ಶಾಂತಿಯನ್ನು ಕಾಪಾಡಲು ಅತ್ಯುತ್ತಮ ಮಾರ್ಗ ಲಯನ್ ಸೇವಾ ಸಂಸ್ಥೆ ಹಲವ ವರ್ಷಗಳಿಂದ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಯೋಗದ ಬಗ್ಗೆ ಅರಿವು ಮೂಡಿಸುತ್ತಿದೆ. ಇದರ ಉಪಯೋಗಗಳನ್ನು ಸದುಪಯೋಗಪಡಿಸಿಕೊಂಡು ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದು ಯೋಗ ಗುರು ಚೇತನ್ ಗುರೂಜಿ ಹೇಳಿದರು.ಅವರು ಆಲೂರು ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಆಲೂರು ವತಿಯಿಂದ ಆಯೋಜಿಸಿದ್ದ "ಆರೋಗ್ಯಕ್ಕಾಗಿ ಯೋಗ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯವಂತ ವ್ಯಕ್ತಿಯಿಂದ ಜೀವನದಲ್ಲಿ ಎಲ್ಲವನ್ನು ಗಳಿಸಬಹುದು. ಆದ್ದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು ರಕ್ತದ ಒತ್ತಡ, ತೂಕ ಕಡಿಮೆ ಮಾಡಿಕೊಳ್ಳಲು, ಒತ್ತಡವನ್ನು ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ಇಡುವಲ್ಲಿ ಯೋಗ ಸಕಾರಾತ್ಮಕವಾದ ಪರಿಣಾಮವನ್ನು ನೀಡುವುದರಿಂದ ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ ಪ್ರಯೋಗ ಇದಾಗಿದೆ. ತೂಕ ಕಳೆದುಕೊಳ್ಳಲು ಮಾತ್ರವಲ್ಲ ಯೋಗವು ದೇಹವನ್ನು ಸಮತೂಕದಲ್ಲಿಟ್ಟು ದೃಢ ಮತ್ತು ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ ಇದರೊಂದಿಗೆ ಯೋಗ ಮನಸ್ಸಿನ ಶಾಂತಿಯನ್ನು ಕಾಪಾಡಲು ಅತ್ಯುತ್ತಮ ಮಾರ್ಗ ಲಯನ್ ಸೇವಾ ಸಂಸ್ಥೆ ಹಲವ ವರ್ಷಗಳಿಂದ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಯೋಗದ ಬಗ್ಗೆ ಅರಿವು ಮೂಡಿಸುತ್ತಿದೆ. ಇದರ ಉಪಯೋಗಗಳನ್ನು ಸದುಪಯೋಗಪಡಿಸಿಕೊಂಡು ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದರು.ಆಲೂರು ಲಯನ್ ಕ್ಲಬ್ ತಾಲ್ಲೂಕು ಅಧ್ಯಕ್ಷ ಬಿ.ಮಂಜೇಗೌಡ ಮಾತನಾಡಿ, ಮನುಷ್ಯ ಒತ್ತಡ ಮುಕ್ತನಾಗಿದ್ದಾಗ ಮಾತ್ರ ಆರೋಗ್ಯದಿಂದ ಬದುಕಲು ಸಾಧ್ಯ. ಉತ್ತಮ ಆರೋಗ್ಯ ಹಾಗೂ ಮನಸ್ಥಿತಿಗೆ ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡುವುದು ಅತ್ಯವಶ್ಯಕ ಎಂದರು. ಆಲೂರು ಪಟ್ಟಣದಲ್ಲಿ ಚೇತನ್ ಗುರೂಜಿ ನೇತೃತ್ವದಲ್ಲಿ 11 ದಿನಗಳ ಕಾಲ ಯೋಗಾಭ್ಯಾಸ ಕಾರ್ಯಕ್ರಮವಿದ್ದು ಜನಸಾಮಾನ್ಯರು ಇದರ ಉಪಯೋಗಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಘು ಪಾಳ್ಯ, ಗೌರವಾಧ್ಯಕ್ಷ ರೇಣುಕಾ ಪ್ರಸಾದ್, ಕೆ.ವಿ. ಮಲ್ಲಿಕಾರ್ಜುನ್,ಪ್ರದೀಪ್ ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ರಘು ಪಾಳ್ಯ, ರೇಣುಕಾ ಪ್ರಸಾದ್, ಮಲ್ಲಿಕಾರ್ಜುನ್, ಪ್ರದೀಪ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ಮಲ್ಲಿಕಾರ್ಜುನ್, ಪ್ರಭು, ಚಂದ್ರು ಹಾಗೂ ಇತರರು ಇದ್ದರು.