ಹೊಸಕೋಟೆ: 10 ವರ್ಷಗಳ ಬಳಿಕ ಶತಮಾನ ಕಂಡ ಹೊಸಕೋಟೆ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು ಉತ್ತಮ ಆಡಳಿತ ನೀಡುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: 10 ವರ್ಷಗಳ ಬಳಿಕ ಶತಮಾನ ಕಂಡ ಹೊಸಕೋಟೆ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು ಉತ್ತಮ ಆಡಳಿತ ನೀಡುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಟೌನ್ ಬ್ಯಾಂಕಿಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಅವರು, ಹೊಸಕೋಟೆ ಟೌನ್ ಬ್ಯಾಂಕ್ 100 ವರ್ಷವನ್ನು ಪೂರೈಸಿರುವ ಹಳೆಯ ಬ್ಯಾಂಕಾಗಿದೆ. ೧೯ ಸಾವಿರ ಷೇರುದಾರರನ್ನು ಹೊಂದಿದ್ದು, ಉತ್ತಮ ಆರ್ಥಿಕ ವಹಿವಾಟು ಮಾಡುತ್ತಿದೆ. ಜೊತೆಗೆ ಹೊಸಕೋಟೆ ಮುಖ್ಯ ಶಾಖೆ ಸೇರಿದಂತೆ ಮಾರ್ಕೆಟ್ ರಸ್ತೆ, ಚಿಂತಾಮಣಿ, ಮಾಲೂರು ಹಾಗೂ ಸೀಗೆಹಳ್ಳಿ ಶಾಖೆಗಳಲ್ಲಿಯೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. 10 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಬೆಂಬಲಿತರ ಕೈಗೆ ಬಂದಿದೆ ಉತ್ತಮ ಬೆಳವಣಿಗೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಗೋಪಾಲ್, ಬಲ್ಪ್ ಮಂಜು, ನಾಗರಾಜ್, ವಿಷ್ಣು, ಕಿರಣ್, ಮುರಳಿ, ಸರೋಜಮ್ಮ, ಅಕ್ಬರ್ ಪಾಷಾ, ಬಿಎಂಆರ್ ಡಿಎ ಅಧ್ಯಕ್ಷ ಕೇಶವಮೂರ್ತಿ, ಮಾಜಿ ಅಧ್ಯಕ್ಷ ಸಿ. ಜಯರಾಜ್, ಸದಸ್ಯ ಸುಬ್ಬರಾಜ್, ಸಂದೀಪ್ ಇತರರು ಹಾಜರಿದ್ದರು.

ಫೋಟೋ : 14 ಹೆಚ್‌ಎಸ್‌ಕೆ 2

ಹೊಸಕೋಟೆ ಟೌನ್ ಬ್ಯಾಂಕ್‌ಗೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಶಾಸಕ ಶರತ್ ಬಚ್ಚೇಗೌಡ ಅಭಿನಂದಿಸಿದರು.