ಸಾರಾಂಶ
ಶ್ರೀ ಕೃಷ್ಣ ಗೋಕುಲಾಷ್ಟಮಿಯ ಅಂಗವಾಗಿ ನಗರದ ಬಿ ಎಚ್ ರಸ್ತೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ವಿದ್ಯಾರ್ಥಿ ಚಿಣ್ಣರು ಕೃಷ್ಣ ವೇಷಧಾರಿಯಾಗಿಯೂ ಬಾಲಕಿಯರು ರಾಧಾ ವೇಷಧಾರಿಯಾಗಿ ಎಲ್ಲರ ಗಮನವನ್ನು ಸೆಳೆದರು. ಶಾಲಾ ಆವರಣದಲ್ಲಿ ಎರಡು ಮೊಸರಿನ ಮಡಿಕೆಗಳನ್ನು ನೇತು ಹಾಕಿ ಚಿಣ್ಣ ಕೃಷ್ಣರು ಅದನ್ನು ಒಡೆಯುವುದು ಮತ್ತು ಸಖಿಯರ ನರ್ತನ ಕಣ್ಮನ ಸೆಳೆದವು. ವಿದ್ಯಾರ್ಥಿನಿಯೊಬ್ಬಳ ತಾಯಿಯೂ ಕೂಡ ಈ ನೃತ್ಯ ರೂಪಕದಲ್ಲಿ ರಾಧಾ ವೇಷಧಾರಿಯಾಗಿ ನರ್ತಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಶ್ರೀ ಕೃಷ್ಣ ಗೋಕುಲಾಷ್ಟಮಿಯ ಅಂಗವಾಗಿ ನಗರದ ಬಿ ಎಚ್ ರಸ್ತೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ವಿದ್ಯಾರ್ಥಿ ಚಿಣ್ಣರು ಕೃಷ್ಣ ವೇಷಧಾರಿಯಾಗಿಯೂ ಬಾಲಕಿಯರು ರಾಧಾ ವೇಷಧಾರಿಯಾಗಿ ಎಲ್ಲರ ಗಮನವನ್ನು ಸೆಳೆದರು. ಶಾಲಾ ಆವರಣದಲ್ಲಿ ಎರಡು ಮೊಸರಿನ ಮಡಿಕೆಗಳನ್ನು ನೇತು ಹಾಕಿ ಚಿಣ್ಣ ಕೃಷ್ಣರು ಅದನ್ನು ಒಡೆಯುವುದು ಮತ್ತು ಸಖಿಯರ ನರ್ತನ ಕಣ್ಮನ ಸೆಳೆದವು. ವಿದ್ಯಾರ್ಥಿನಿಯೊಬ್ಬಳ ತಾಯಿಯೂ ಕೂಡ ಈ ನೃತ್ಯ ರೂಪಕದಲ್ಲಿ ರಾಧಾ ವೇಷಧಾರಿಯಾಗಿ ನರ್ತಿಸಿದರು. ಪೋಷಕರು ಈ ರೀತಿ ಶಾಲಾ ಕಾರ್ಯಕ್ರಮದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದನ್ನು ಶಿಕ್ಷಕ ವರ್ಗ ಅಭಿನಂದಿಸಿತು. ಶಾಲಾ ಮುಖ್ಯ ಶಿಕ್ಷಕಿ ಕರಿಯಮ್ಮ ಅವರ ವಿಶೇಷ ಕಾಳಜಿಗೆ ಸಾಥ್ ನೀಡಿದ ಸಹ ಶಿಕ್ಷಕರು, ಕಾರ್ಯಕ್ರಮ ಯಶಸ್ಸಿಗೆ ಕಾರಣರಾದರು, ಈ ಸಂದರ್ಭದಲ್ಲಿ ಶ್ರೀ ಕೃಷ್ಣನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶಿಕ್ಷಕರು ಆಯಾ ತರಗತಿಯಲ್ಲಿ ನೀಡಿದರು.