ಕಾರಟಗಿ: ತಾಲೂಕಿನ ಮರ್ಲಾನಹಳ್ಳಿಯ ಯುವಕ, ರಾಜಕೀಯದ ಜೊತೆಗೆ ಸಮಾಜಸೇವೆ, ಅಭಿವೃದ್ಧಿಯ ಚಿಂತನೆ, ಮಾನವೀಯ ಮೌಲ್ಯ ಹೊಂದಿರುವ ಸೋಮನಾಥ ದೊಡ್ಡಮನಿ ಜನನಾಯಕನಾಗಿ ಬೆಳೆಯುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷದ ಸಂಘಟನೆಯಲ್ಲಿ ಸದಾ ಕ್ರಿಯಾಶೀಲನಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಸೌಮ್ಯ ಸ್ವಭಾವದ ಯುವ ರಾಜಕಾರಣಿ ಮರ್ಲಾನಹಳ್ಳಿ ಮತ್ತು ಸುತ್ತ ಹಳ್ಳಿಗಳ ಜನರನ್ನು ಸೋಮನಾಥ ದೊಡ್ಡಮನಿಯಾಗಿ ಗಮನ ಸೆಳೆಯುತ್ತಿದ್ದಾನೆ. ಸಮಾಜದಲ್ಲಿ ಉತ್ತಮ ಬಾಂಧವ್ಯ ಹೊಂದಿರುವುದಲ್ಲದೇ ಸಹಾಯ ಕೇಳಿ ಬಂದವರಿಗೆ ತನ್ನ ಕೈಲಾದಷ್ಟು ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಂಘಟನೆಗಳಲ್ಲಿ ಮುಂದು: ಸಚಿವರ ಅಚ್ಚುಮೆಚ್ಚು:

ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬಹುಬೇಗನ ಬೆಳೆದ ಯುವ ನಾಯಕ ಸೋಮನಾಥ ದೊಡ್ಡಮನಿ. ಜಾತಿ ಬೇಧಭಾವಗಳಿಲ್ಲದೆ ಎಲ್ಲರೊಂದಿಗೆ ಒಂದಾಗಿ ಮುಂದಡಿ ಇರುವ ಈ ಯುವಕ ಕ್ರೀಡಾಕೂಟಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಸದ್ದು ಗದ್ದಲವಿಲ್ಲದೆ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಮರಲಾನಹಳ್ಳಿ ಸೇರಿದಂತೆ ಸುತ್ತ ಹತ್ತು ಹಳ್ಳಿಗಳಲ್ಲಿ ಈ ಯುವಕ ತನ್ನನ್ನು ತಾನು ಗುರುತಿಸಿಕೊಳ್ಳುವುದಲ್ಲದೇ ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿ ಸೇವೆ ಸಲ್ಲಿಸಿ ಪಕ್ಷದ ಸಂಘಟನೆ ನಡೆಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇವರಿಗೆ ಸೋಮನಾಥ ಅತ್ಯಂತ ಆಪ್ತ ವಲಯದ ಯುವಕ ನಾಯಕ. ಸಚಿವರಾಗಲಿ, ಕಾಂಗ್ರೆಸ್ ಪಕ್ಷದ ಯಾವುದೇ ಕಠಿಣ ಟಾಸ್ಕ್‌ಗಳನ್ನು ಸವಾಲಾಗಿ ಸ್ವೀಕರಿ ಕೆಲಸ ಮಾಡುವ ಚಾಕಚಕ್ಕತೆ ಇವರಲ್ಲಿದೆ. ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ ಅತಿಹೆಚ್ಚು ಕಾರ್ಯಕರ್ತರನ್ನು ನೋಂದಣಿ ಮಾಡಿಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡು ಸಚಿವರು ಮತ್ತು ಪಕ್ಷದ ಇತರೆ ಮುಖಂಡರೊಂದಿಗೆ ಸೈ ಎನ್ನಿಸಿಕೊಂಡಿದ್ದಾರೆ ಸೋಮನಾಥ ದೊಡ್ಡಮನಿ.


ಮೂರನೇ ತಲೆಮಾರು: ಕಳೆದ ಮೂರು ತಲೆಮಾರುಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಸೋಮನಾಥ ದೊಡ್ಡಮನಿ ಕುಟುಂಬ ಸೇವೆ ಸಲ್ಲಿಸುತ್ತ ಬಂದಿದೆ. ಇವರ ತಾತ, ತಂದೆ ಮತ್ತು ಈಗ ಸೋಮನಾಥ ಕಾಂಗ್ರೆಸ್‌ಗಾಗಿ ದುಡಿಯುತ್ತಿದ್ದಾರೆ.

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ ರಾಜಕೀಯ ಇಚ್ಛಾಶಕ್ತಿಯಿಂದ ಈ ಗ್ರಾಮೀಣ ಜನರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಸರಳತೆ ಮೈಗೂಡಿಸಿಕೊಂಡ ಈ ಯುವನಾಯಕ, ಸಮಾಜ ಸೇವೆ, ಜನರೊಂದಿಗೆ ಬೆರೆಯುವುದು, ಜನ ಸೇವೆ ಮಾಡುವುದನ್ನೇ ಈಗ ಕಾಯಕವನ್ನಾಗಿಸಿಕೊಂಡಿದ್ದಾರೆ. ನೊಂದ ಕುಟುಂಬಗಳಿಗೆ, ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುತ್ತ ನಡೆದಿದ್ದಾರೆ.

ಮರಲಾನಹಳ್ಳಿ ಜಿಪಂ ಕ್ಷೇತ್ರಕ್ಕೆ ಇವರ ಪತ್ನಿ ಸರೋಜಾ ಸೋಮನಾಥ ದೊಡ್ಡಮನಿ ಪಕ್ಷದಿಂದ ಕಣಕ್ಕಿಳಿಸಬೇಕೆಂದು ಬಹುದೊಡ್ಡ ಕೂಗು ಈ ಕೇಳಿ ಬರುತ್ತಿದೆ. ಮರಲಾನಹಳ್ಳಿ ಭಾಗದಲ್ಲಿ ಕಾಂಗ್ರೆಸ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಜಾಣ್ಮೆ,ಚಾಣಾಕ್ಷತೆ, ತಂತ್ರಗಾರಿಗೆ ಸೋಮನಾಥ ಇವರಿಗೆ ಸಿದ್ಧಿಸಿದೆ. ಇವರಿಗೆ ಯುವ ಸಮೂಹ ಸೇರಿದಂತೆ ಸರ್ವಧರ್ಮಗಳ ಹಿರಿಯ ಗುಂಪೊಂದು ಸದಾ ಬೆನ್ನೆಲುಬಾಗಿ ನಿಂತಿದೆ.

ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಹುದೊಡ್ಡ ಸ್ಥಾನಮಾನ ಅಲಂಕರಿಸುವ ಆಶಾಭಾವನೆ ಹೊಂದಿರುವ ಸೋಮನಾಥ ಈಗ ಗ್ಯಾರೆಂಟಿ ಅನುಷ್ಠಾನ ಯೋಜನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೋಮನಾಥ ದೊಡ್ಡಮನಿ ನನಗೆ ಇಷ್ಟವಾಗುವ ಹೆಸರುಗಳಲ್ಲಿ ಒಬ್ಬರು. ಮೌನವಾಗಿಯೇ ಪಕ್ಷ ಸಂಘಟನೆ, ಯುವಕರ ಸಂಘಟನೆ ಮಾಡುತ್ತಾರೆ. ಪಕ್ಕಾ ರಾಜಕಾರಣಿಯಾಗುವ ಎಲ್ಲ ಲಕ್ಷಣ ಹೊಂದಿರುವ ಸೋಮನಾಥ ನಮಗೆ ಬಹುದೊಡ್ಡ ಆಸ್ತಿ ಮತ್ತು ಶಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಗ್ರಾಮೀಣ ಯುವ ಸಮೂಹದ ಕಣ್ಮಣಿ ಸೋಮನಾಥ ದೊಡ್ಡಮನಿ. ಸದಾ ಹಸನ್ಮುಖಿಯಾಗಿ ಕೆಲಸ ಮಾಡುವ ಯುವ ನಾಯಕ. ಆತನಲ್ಲಿ ಸೇವಾ ಮನೋಭಾವನೆ ಹೆಚ್ಚಿದೆ. ರಾಜಕೀಯದಲ್ಲಿ ಸದಾ ಕ್ರೀಯಾಶೀಲ ಯುವಕ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ತಿಳಿಸಿದ್ದಾರೆ.

ಪಕ್ಷದ ಯಾವುದೇ ಜವಾಬ್ದಾರಿ ವಹಿಸಿದರೂ ಚಾಚುತಪ್ಪದೆ ಮಾಡುವ ಯುವಕ. ಪಕ್ಷಕ್ಕೆ ದೊಡ್ಡ ಆಸ್ತಿ. ಗ್ರಾಮೀಣ ಭಾಗದ ಅಭಿವೃದ್ಧಿ ದೂರದೃಷ್ಟಿ ಇಟ್ಟುಕೊಂಡ ಯುವ ಕನಸುಗಾರ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ತಿಳಿಸಿದ್ದಾರೆ.